Go to full page →

“ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.” MBK 108

ದೇವರ ನಾಮವನ್ನು ಪರಿಶುದ್ಧ ಪಡಿಸಬೇಕಾದರೆ ಮಹೋನ್ನತನಾದಾತನನ್ನು ಕುರಿತು ಮಾತನಾಡುವಾಗ ನಮ್ಮ ವಾರ್ತೆಗಳು ಪೂಜ್ಯಭಾವನೆಯಿಂದ ಉಚ್ಚರಿಸಲ್ಪಡಬೇಕು. “ಆತನ ನಾಮವು ಪರಿಶುದ್ಧವೂ ಭಯಂಕರವೂ ಆಗಿದೆ.” ಕೀರ್ತನೆ 111: 9. ದೇವರ ಬಿರುದಾಂಕಿತಗಳನ್ನೂ ಮತ್ತು ಅಭಿದಾನಗಳನ್ನೂ ನಾವು ಯಾವಾಗಲೂ ಯಾವ ರೀತಿಯಲ್ಲೂ ಅಲ್ಪವಾಗೆಣಿಸಬಾರದು. ಪ್ರಾರ್ಥನೆ ಮಾಡುವಾಗ ನಾವು ಮಹೋನ್ನತನ ಸಂದರ್ಶನ ಕೊಠಡಿಯನ್ನು ಪ್ರವೇಶಿಸುತ್ತೇವೆ; ಆದುದರಿಂದ ನಾವು ಪವಿತ್ರವಾದ ಭಯಭಕ್ತಿಯಿಂದ ಆತನ ಸನ್ನಿಧಿಗೆ ಬರಬೇಕು. ದೇವದೂತರು ಆತನ ಪ್ರಸನ್ನತೆಯ ಸನ್ನಿಧಿಯಲ್ಲಿ ತಮ್ಮ ಮುಖಗಳನ್ನು ಮರೆಮಾಡಿಕೊಳ್ಳುತ್ತಾರೆ. ಕೆರೂಬಿಯರೂ ಮತ್ತು ಹೊಳೆಯುವ ಪರಿಶುದ್ಧ ಸೆರಾಫಿಯರೂ ಆತನ ಸಿಂಹಾಸನವನ್ನು ಅತಿ ಗಂಭೀರವಾದ ಪೂಜ್ಯಭಾವದಿಂದ ಸಮೀಪಿಸುತ್ತಾರೆ. ಹಾಗಾದರೆ ಅಲ್ಪರೂ, ಕೇವಲ ಪಾಪಿಷ್ಟರೂ ಆದ ನಾವು ಇನ್ನೆಷ್ಟು ಅಧಿಕವಾದ ಪೂಜ್ಯಭಾವದಿಮ್ದ ನಮ್ಮ ಕರ್ತನೂ, ನಿರ್ಮಾಣಿಕನೂ ಆದಾತನ ಬಳಿಗೆ ಬರಬೇಕು! MBK 108.2

ಆದರೆ ಕರ್ತನ ನಾಮವನ್ನು ಪರಿಶುದ್ಧ ಪಡಿಸುವುದೂ ಇನ್ನೂ ಅಧಿಕ ಅರ್ಥ ಗರ್ಭಿತವಾಗಿದೆ. ನಾವೂ, ಕ್ರಿಸ್ತನ ಕಾಲದ ಯೆಹೂದ್ಯರಂತೆ, ದೇವರಿಗೆ ಬಾಹ್ಯ ಪೂಜ್ಯತೆಯನ್ನು ತೋರಿಸಬಹುದು, ಆದರೂ ಇನ್ನೂ ನಿರಂತರವೂ ಆತನ ಹೆಸರನ್ನು ಅಯೋಗ್ಯಪಡಿಸುತ್ತಲೇ ಇರಬಹುದು. ಯೆಹೋವನೆಂಬ ನಾಮವು, “ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು;.....ದೋಷಾಪರಾಧ ಪಾಪಗಳನ್ನು ಕ್ಷಮಿಸುವವನು.” ವಿಮೋಚನಕಾಂಡ 34: 5-7. ಕ್ರಿಸ್ತನ ಸಭೆಯನ್ನು ಕುರಿತು ಬರೆದಿರುವುದೇನಂದರೆ “ಯೆಹೋವಚಿದ್ಕೇನು [ಅಂದರೆ ಯೆಹೋವನೇ ನಮ್ಮ ಸದ್ಧರ್ಮ] ಎಂಬ ಹೆಸರು ಇದಕ್ಕೆ ಸಲ್ಲುವುದು” ಯೆರೆಮೀಯ 33: 16. ಈ ನಾಮಧೇಯವು ಪ್ರತಿಯೊಬ್ಬ ಕ್ರಿಸ್ತನ ಹಿಂಬಾಲಕರ ಮೇಲೂ ಇರಿಸಲ್ಪಟ್ಟಿದೆ. ಇದು ದೇವರ ಮಕ್ಕಳ ಪಿತ್ರಾರ್ಜಿತ ಹಕ್ಕು. ಪ್ರವಾದಿಯಾದ ಯೆರೆಮೀಯನು, ಇಸ್ರಾಯೇಲರ ಕಡುಸಂಕಟದಲ್ಲೂ, ನೀವು ತೀವ್ರ ಯಾತನೆಯಲ್ಲೂ ಪ್ರಾರ್ಥಿಸಿದ್ದು: ನಾವು ನಿನ್ನ ಹೆಸರಿನವರು, ನಮ್ಮನ್ನು ಕೈಬಿಡಬೇಡ.” ಯೆರೆಮೀಯ 14: 9. MBK 108.3

ಈ ನಾಮವು ಪರಲೋಕದ ದೂತರಿಂದಲೂ ಮತ್ತು ಪಾಪಕ್ಕೊಳಗಾಗದ ಇತರ ಲೋಕಗಳವರಿಂದಲು ಪರಿಶುದ್ಧವೆಂದೆಣಿಸಲ್ಪಡುತ್ತದೆ. ನೀವು ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ ಎಂದು ಪ್ರಾರ್ಥಿಸುವಾಗ ಅದು ಈ ಭೂಮಿಯ ಮೇಲೂ ಮತ್ತು ನಿಮ್ಮಲ್ಲೂ ಪರಿಶುದ್ಧವಾಗೆಣಿಸಲ್ಪಡಲಿ ಎಂದು ಪ್ರಾರ್ಥಿಸಿರಿ. ದೇವರು ನಿನ್ನನ್ನು ಮನುಷ್ಯರ ಮುಂದೆಯೂ ದೇವದೂತರ ಮುಂದೆಯೂ ತನ್ನ ಮಗುವೆಂದು ಅಂಗೀಕರಿಸಿಕೊಂಡಿದ್ದಾನೆ; “ನೀವು ಕರೆಸಿಕೊಳ್ಳುವ ಶ್ರೇಷ್ಠನಾಮಕ್ಕೆ” (ಯಾಕೋಬ 2: 7), ಅಗೌರವವನ್ನು ಬಾರಲೀಸದಂತೆ ಪ್ರಾರ್ಥಿಸಿರಿ. ದೇವರು ಲೋಕದೊಳಕ್ಕೆ ನಿಮ್ಮನ್ನು ತನ್ನ ಪ್ರತಿನಿಧಿಗಳನ್ನಾಗಿ ಕಳುಹಿಸುತ್ತಾನೆ. ನಿಮ್ಮ ಜೀವನದ ಪ್ರತಿಯೊಂದು ಕ್ರಿಯೆಯಲ್ಲೂ ದೇವರ ನಾಮವನ್ನು ವ್ಯಕ್ತಪಡಿಸಬೇಕು. ಈ ಬೇಡಿಕೆಯು ನಿಮ್ಮನ್ನು ಆತನ ಸೌಜನ್ಯವನ್ನು ಹೊಂದಿರಬೇಕೆಂದು ಸೂಚಿಸುತ್ತದೆ. ನಿಮ್ಮ ಜೀವಮಾನದಲ್ಲಿಯೂ ಮತ್ತು ಗುಣಗಳಲ್ಲಿಯೂ ದೇವರ ಜೀವ್ಯವನ್ನೂ ಮತ್ತು ಸೌಶೀಲತೆಯನ್ನೂ ಲೋಕಕ್ಕೆ ಪ್ರತಿಬಿಂಬಿಸದಿದ್ದರೆ, ಆತನ ಹೆಸರನ್ನು ಪರಿಶುದ್ಧ ಪಡಿಸಲಾಗದು. ಕ್ರಿಸ್ತನ ಕೃಪೆಯನ್ನೂ ಮತ್ತು ಆತನ ನೀತಿಯನ್ನೂ ಅಂಗೀಕರಿಸುವುದರ ಮೂಲಕವೇ ಇದನ್ನು ನೀವು ಮಾಡಬಹುದು. MBK 109.1