Go to full page →

“ದೇವರ ವಸ್ತುಗಳನ್ನು ನಾಯಿಗಳಿಗೆ ಹಾಕಬೇಡಿರಿ” MBK 130

ಯೇಸುವು ಈ ಸಂದರ್ಭದಲ್ಲಿ ಗುಲಾಮತ್ವದಿಂದ ವಿಮೋಚನೆ ಹೊಂದುವ ಇಚ್ಛೆಯಿಲ್ಲದ ಒಂದು ಪಂಗಡದವರನ್ನು ಸೂಚಿಸುತ್ತಾನೆ. ಭ್ರಷ್ಟತನದಲ್ಲೂ ಅಸಹ್ಯ ಕಾರ್ಯಗಳಲ್ಲೂ ತಲ್ಲೀನರಾಗಿ, ಅವರ ಸ್ವಭಾವವೇ ಮಾರ್ಪಟ್ಟು ನೀತಿಗೆಟ್ಟು ಅದರಿಂದ ಬೇರ್ಪಡಲು ಮನಸ್ಸಿಲ್ಲದೆ ದುಷ್ಟತನಕ್ಕೆ ಅಂಟಿಕೊಂಡಿರುವರು. ಕ್ರಿಸ್ತನ ಸೇವಕರು, ಸುವಾರ್ತೆಯನ್ನು ಕಲಹಾಸ್ಪದವನ್ನಾಗಿಯೂ ಹಾಸ್ಯಾಸ್ಪದವನ್ನಾಗಿಯೂ ಮಾಡುವವರು, ತಮಗೆ ಅಡಚಣೆಯಾಗುವಂತೆ ಬಿಟ್ಟುಕೊಡಬಾರದು. MBK 130.1

ಆದರೂ ರಕ್ಷಕನು, ಪರಲೋಕದ ಅಮೂಲ್ಯ ಸತ್ಯಗಳನ್ನು ಅಂಗೀಕರಿಸಲು ಹಂಬಲಿಸಿದ ಆತ್ಮವು ಎಷ್ಟೇ ಪಾಪದಲ್ಲಿ ಮುಳುಗಿದ್ದರೂ, ಅವುಗಳಲ್ಲೊಂದನ್ನೂ ಉದಾಸೀನ ಮಾಡುತ್ತಿರಲಿಲ್ಲ. ಸುಂಕದವರಿಗೂ ವ್ಯಭಿಚಾರಿಗಳಿಗೂ ಆತನ ವಾಕ್ಯಗಳು ಅವರ ಹೊಸ ಜೀವ್ಯದ ಪ್ರಾರಂಭವಾಗಿದ್ದುವು. ಆತನು ಏಳು ದೆವ್ವಗಳನ್ನು ಬಿಡಿಸಿದ ಮಗ್ದಲದ ಮರಿಯು ಆತನ ಗೋರಿಯಿಂದ ಹೋಗಲು ಕೊನೆಯವಳೂ, ಯೇಸು ತನ್ನ ಪುನರುತ್ಥಾನವಾದ ಅರುಣೋದಯದಲ್ಲಿ ವಂದಿಸಿದವರಲ್ಲಿ ಮೊದಲನೆಯವಳೂ ಆಗಿದ್ದಳು. ಸುವಾರ್ತೆಯ ದೃಢವಾದ ದ್ವೇಷಿಯಾಗಿದ್ದ ತಾರ್ಸದ ಸೌಲನೇ, ದೃಢನಿಷ್ಠೆಯುಳ್ಳ ಸೇವಕನಾದ ಪೌಲನಾದನು. ಒಂದು ಆತ್ಮವು ದ್ವೇಷಾಸೂಯೆಗಳ ಮತ್ತು ಧಿಕ್ಕಾರದ ತೋರ್ಕೆಯಲ್ಲೂ, ದುಷ್ಕಾರ್ಯ ಮತ್ತು ಭ್ರಷ್ಟತ್ವದಲ್ಲೂ ಅಡಗಿರಬಹುದು, ಆದರೂ ಕ್ರಿಸ್ತನ ಕೃಪೆಯಿಂದ ಆ ಆತ್ಮವು ವಿಮೋಚಿಸಲ್ಪಟ್ಟು, ರಕ್ಷಕನ ಕಿರೀಟದಲ್ಲಿ ಹೊಳೆಯುವ ರತ್ನವಾಗಬಹುದು. MBK 130.2