1843ರಲ್ಲಿ ದೇವರು ಸಮಯದ ಘೋಷಣೆಯಲ್ಲಿದ್ದುದನ್ನು ನಾನು ಕಂಡೆನು. ಇದು ಅತನು ಜನರನ್ನು ಎಚ್ಚರಿಸುವ ಮತ್ತು ತೀರ್ಮಾನ ತೆಗೆದುಕೊಳ್ಳುವ ಪರೀಕ್ಷಿಸುವ ಅಂಶಕ್ಕೆ ತರುವ ವಿನ್ಯಾಸವಾಗಿದೆ. ಪ್ರವಾದನಾ ಕಾಲಾವಧಿಯ ಸ್ಪಷ್ಟತೆಯ ಸ್ಥಿತಿಯನ್ನು ಧರ್ಮಬೋಧಕರು ಅರಿತು ಒಪ್ಪಿಕೊಂಡು, ಅವರು ತಮ್ಮ ಸೊಕ್ಕನ್ನು, ಸಂಬಳವನ್ನು ಮತ್ತು ಸಬೆಯನ್ನು ತೊರೆದು ಸಂದೇಶವನ್ನು ಸಾರಲು ಸ್ಥಳದಿಂದ ಸ್ಥಳಕ್ಕೆ ಧಾವಿಸಿದರು. ಕೆಲವು ಕ್ರಿಸ್ತನಬೋಧಕರ ಮನಸ್ಸಿನಲ್ಲಿ ಮಾತ್ರ ಪರಲೋಕದಿಂದ ಬಂದ ಸಂದೇಶವು ಸ್ಥಳ ಪಡೆದುಕೊಂಡಾಗ, ಬೋಧಕರಲ್ಲದ ಬಹುಜನರ ಮೇಲೆ ಕೆಲಸ ವಹಿಸಲ್ಪಟ್ಟಿತು. ಸಂದೇಶಕ್ಕೆಧ್ವನಿಗೊಟ್ಟ ಕೆಲವರು ತಮ್ಮ ಹೊಲವನ್ನು ಬಿಟ್ಟು ಹೊರಟರು. ಕೆಲವುರು ತಮ್ಮ ವ್ಯಾಪಾರ ವ್ಯವಾಹಾರಗಳನ್ನು ನಿಲ್ಲಿಸಿ ಅಂಗಡಿಗಳನ್ನು ಬಿಟ್ಟು ಹೊರಟರು. ಮಾತ್ರವಲ್ಲದೆ ವೃತಿನಿರತ ವ್ಯಕ್ತಿಗಳೂ ಸಹ ಅಷ್ಟ್ಟೇನೂ ಹೆಸರುವಾಸಿಯಲ್ಲದ ಮೊದಲ ದೂತನ ಸಂದೇಶವನ್ನು ಸಾರಲು ತಮ್ಮ ಕೆಲಸವನ್ನು ಕೈಬಿಡಬೇಕಾಯಿತು, ಧರ್ಮಬೋಧಕರೂ ಸಹ ಪಂಥಾಭಿಮಾನದ ದೃಷ್ಟಿ ಭಾವನೆಗಳಿಗೆ ವಿಮುಖರಾಗಿ ಯೇಸುವಿನ ಎರಡನೇ ಬರುವಣವನ್ನು ಘೋಷಿಸಲು ಒಟ್ಟಾಗಿ ಸೇರಿಕೊಂಡರು. ಜನರು ಎಲ್ಲಾ ಕಡೆ ಚಲಿಸಲು ಸಂದೇಶವು ಎಲ್ಲೆಡೆ ಹರಡಿತು. ಪಾಪಿಗಳು ಪಶ್ಚಾತ್ತಾಪ ಪಟ್ಟರು, ಕ್ಷಮಾಪಣೆಗಾಗಿ ಅತ್ತು ಪ್ರಾರ್ಥಿಸಿದರು ,ಅಪ್ರಾಮಣಿಕರೆನಿಸಿಕೊಂಡವರು ಯಥಾಸ್ಥಿತಿಗೆ ಬರಲು ಉತ್ಸಕರಾದರು. ತಂದೆ ತಾಯಿಗಳು ತಮ್ಮ ಮಕ್ಕಳಿಗಾಗಿ ತವಕಪಟ್ಟರು. ಸಂದೇಶ ಪಡೆದುಕೊಂಡವರು, ಪರಿವರ್ತನೆಗೊಳ್ಳದ ತಮ್ಮ ಗೆಳೆಯರು ಬಂಧುಗಳೊಂದಿಗೆ ಅದನ್ನು ಹಂಚಿಕೊಂಡರು ಮತ್ತು ಅವರ ಆತ್ಮಗಳು ಪುನೀತ ಸಂದೇಶ ಭಾರದಿಂದ ತುಂಬಿಕೊಂಡಿದ್ದು, ದೇವಕುಮಾರನ ಬರುವಣಕ್ಕೆ ಸಿದ್ದಪಡಿಸಿಕೊಳ್ಳಲು ಎಚ್ಚರಿಸುತ್ತಾ ಮೊರೆಯಿಟ್ಟರು. ಹೃದಯಮುಟ್ಟುವ ಎಚ್ಚೆರಿಕೆಗಳಿಂದ ತುಂಬಿದ ತೂಕವಾದ ಪುರಾವೆಗಳಿಗೆ ಪ್ರತಿಫಲ ಕೊಡದವರು ಬಹು ಕಠಿಣರಾದರು . GCKn 181.1
ಆತ್ಮಶುದ್ಧಿ ಕೆಲಸವು ಪ್ರಾಪಂಚಿಕ ವಸ್ತುಗಳ ಮೇಲಿನ ಆಶೆಯಿಂದ ಹಿಂದೆಂದೂ ಅನುಭವ ಕಾಣದ ಸಂಶುದ್ಧಿ ಅಥವಾ ನಿವೇದನೆಗಳೆಡೆಗೆ ತಿರುಗಿಸಿತು. ವಿಲಿಯಂ ಮಿಲ್ಲರ್ ನ ಬೋಧನೆಗೆ ಸಾವಿರಾರು ಜನರು ಸ್ಪಂದಿಸಿ ಸತ್ಯದ ಕಡೆಗೆ ನಡೆಸಲ್ಪಟ್ಟರು. ಸಂದೇಶವನ್ನು ಸಾರಲು ಎಲೀಯನ ಆತ್ಮ ಮತ್ತು ಬಲದೊಂದಿಗೆ ಹಲವರು ದೇವರ ಸೇವಕರು ಎಬ್ಬಿಸಲ್ಪಟ್ಟರು. ಯೇಸುಸ್ವಾಮಿಯ ಅಗ್ರಗಾಮಿ ಸಾನ್ನಿಕನಾದ ಯೋಹಾನನಂತೆ ಈ ಸಂದೇಶವನ್ನು ಬೋಧಿಸಲು ಬಂದವರೆಲ್ಲಾ ಮರದ ಬುಡಕ್ಕೆ ಕೊಡಲಿ ಹಾಕುವಂತೆಯೂ ಹಾಗೂ ಪಶ್ಚಾತ್ತಾಪದಿಂದ ಫಲಕೊಡಲು ಜನರಿಗೆ ಕರೆಕೊಡುವ ಒತ್ತಡ ಅವರಿಗುಂಟಾಯಿತು. ಅವರ ಸಾಕ್ಷಿ ಸಭೆಗಳನ್ನು ಎಬ್ಬಿಸಿ ಬಲವಾಗಿ ಪ್ರಭಾವ ಬೀರಿತು ಮತ್ತು ಸಭೆಯ ನೈಜ ಗುಣವನ್ನು ಎತ್ತಿ ಪ್ರಕಟಿಸುವಂತೆ ಮಾಡಿದವು. ಮುಂಬರುವ ಕೌದ್ರತೆಯಿಂದ ಓಡಿಹೋಗುವ ಗಂಭೀರ ಸಂದೇಶವನ್ನು ಕೊಡುವಾಗ, ಸಭೆಯೊಂದಿಗೆ ಸೇರಿಕೊಂಡ ಬಹು ಜನರಿಗೆ ಗುಣಹೊಂದುವ ಸಂದೇಶಗಳು ಕೊಡಲ್ಪಟ್ಟವು; ಅವರು ತಮ್ಮ ಹಿಮ್ಮೆಟ್ಟುವಿಕೆಯನ್ನು ಮನಗಂಡು ಪಶ್ಚಾತ್ತಾಪದ ಕಣ್ಣೀರಿನಿಂದಲೂ ಆತ್ಮದ ಅಳವಾದ ದುಃಖದಿಂದಲೂ ದೇವರ ಮುಂದೆ ತಗ್ಗಿಸಿಕೊಂಡರು. ದೇವರ ಆತ್ಮವು ಅವರ ಮೇಲೆ ನೆಲೆಗೊಂಡಿತು, ಅವರು ಎತ್ತರದ ದ್ವನಿಯಿಂದ ದೇವರಿಗೆ ಭಯಪಟ್ಟು ಅತನನ್ನು ಘನಪಡಿಸಿರಿ, ಆತನು ನ್ಯಾಯತೀರ್ಪುಮಾಡುವ ಗಳಿಗೆಯು ಬಂದಿದೆ ಎಂದು ಕೂಗಲಾರಂಭಿಸಿದರು. GCKn 182.1
ನಿರ್ಧಿಷ್ಟ ಕಾಲದ ಬೋಧನೆ ಎಲ್ಲಾ ವರ್ಗಗಳ ಅಂದರೆ ಧರ್ಮಬೋಧಕರಿಂದ ಹಿಡಿದು ಎಚ್ಚರಗೇಡಿಗಳಾದ ಪರಲೋಕಕ್ಕೆ ಅಂಜದ ಪಾಪಿಗಳವರೆಗೂ ಮಹಾ ವಿರೋದವನ್ನೆಬ್ಬಿಸಿತು. ಕಪಟಿಗಳಾದ ಬೋಧಕರು ಮತ್ತು ದೈರ್ಯವಾಗಿ ಹಿಯ್ಯಾಳಿಸುವವರು ಆ ದಿನ ಮತ್ತು ಸಮಯವು ಯಾವ ಮನುಷ್ಯನಿಗೂ ತಿಳಿದಿಲ್ಲ ಎಂದರು;ದೇವ ವಚನದ ಮೂಲಕ ಪ್ರವಾದನಕಾಲವು ಉರುಳಿಹೋಗಿದ್ದು ಕ್ರಿಸ್ತನ ಬರುವಣದ ಚಿಹ್ನೆಗಳು ಬಾಗಿಲ ಹತ್ತಿರದಲ್ಲಿದೆ ಎಂದು ತಿಳಿಸುವ ಸತ್ಯವೇದದ ವಚನಗಳು ಮಾಹಿತಿ ಅಥವಾ ತಿದ್ದುಪಡಿಗೆ ಒಳಪಡಲಿಲ್ಲ. ಯೇಸುಕ್ರಿಸ್ತನ ಪ್ರೀತಿಯು ಹೊರತೋರ್ವಿಕೆಯು ಹಿಂಡಿನ ಕುರುಬರು ಕ್ರಿಸ್ತನ ಬರುವಣದ ವಿಷಯದ ಬೋಧನೆಗೆ ತಮ್ಮ ಯಾವ ವಿರೋದವಿಲ್ಲವೆಂದರು ಆದರೆ ನಿರ್ಧಿಷ್ಟ ಕಾಲವಧಿಯ ಬೋಧನೆಗೆ ಮಾತ್ರ ಆಕ್ಷೇಪಿಸಿದರು. ಎಲ್ಲವನ್ನೂ ದೃಷ್ಟಸುವ ದೇವರ ಕಣ್ಣುಗಳು ಅವರ ಹೃದಯವನ್ನು ಪರಿಶೀಲಿಸಿತು. ಅಲ್ಲ ಯೇಸುವಿಗೆ ಪ್ರೀತಿಯಿರಲಿಲ್ಲ. ಮುಂಬರುವ ಪರೀಕ್ಷೆಯ ಎದುರು ತಮ್ಮ ಅಕ್ರೈಸ್ತ ಜೀವಿತವು ನಿಲ್ಲುವುದಿಲ್ಲ ಎಂಬುದನ್ನು ಅವರು ತಿಳಿದಿದ್ದರು; ಏಕೆಂದರೆ ಅವನು ಸ್ಥಾಪಿಸಿದ ಧೀನಮಾರ್ಗದಲ್ಲಿ ಅವರು ನಡೆಯುತ್ತಿರಲಿಲ್ಲ. ಈ ಸುಳ್ಳು ಕುರುಬರು ದೇವರ ಕೆಲಸದ ಮಾರ್ಗದಲ್ಲಿ ಅಡಚಣೆಯಾದರು. ಅಂಗೀಕಾರದ ಬಲದಿಂದ ಬೋಧಿಸಲ್ಪಟ್ಟ ಸತ್ಯವು, ಆ ಸೆರೆಯುವನಂತೆ ಕಣ್ತೆರೆಸಿದವು. ‘ನಾನು ರಕ್ಷಣೆ ಹೊಂದಬೇಕಾದರೆ ಏನು ಮಾಡಬೇಕು’, ಎಂದು ಜನರು ಕೇಳಲಾರಂಭಿಸಿದರು. ಆದರೆ ಈ ಸುಳ್ಳು ಕುರುಬರು ಸತ್ಯಕ್ಕೊ ಜನರಿಗೂ ಮಧ್ಯ ಪ್ರವೇಶಿಸಿ ನಯವಾದ ಸಂಗತಿಗಳನ್ನು ಬೋಧಿಸುತ್ತಾ ಸತ್ಯಕ್ಕೆ ದೂರು ಎಳೆದು ಕೊಂಡು ಹೋದರು ಅವರು ಸೈತಾನ ಮತ್ತು ಅವನ ದೂತರೊಂದಿಗೆ ಸೇರಿಕೊಂಡು ಶಾಂತಿ ಇಲ್ಲದೆಡೆಯಲ್ಲಿ ಶಾಂತಿ, ಶಾಂತಿ ಎಂದು ಕೂಗುತ್ತಿದ್ದರು. ದೇವದೂತರೂ ಇವಲ್ಲವನ್ನೂ ದಾಖಲಿಸುತ್ತಿದ್ದುದನ್ನೂ, ಅಪವಿತ್ರ ಕುರುಬರ ವಸ್ತ್ರಗಳು ರಕ್ತದಿಂದ ಕೂಡಿರುವುದನ್ನೂ ನಾನು ಕಂಡೆನು . ಯಾರೆಲ್ಲ ನಿಶ್ಚಿಂತರಾಗಿರಬೇಕೆಂದು ಇಚ್ಚಿಸಿ ದೇವರಿಂದ ಬಹು ದೂರವಿರುವುದರಲ್ಲಿ ತೃಪರಾಗಿದ್ದರೋ ಅವರು ತಮ್ಮ ಲೌಕಿಕ ಭದ್ರತೆಯಿಂದ ಎಬ್ಬಿಸಲ್ಪಡುವುದೇ ಇಲ್ಲ. GCKn 183.1
ಈ ರಕ್ಷಣೆ ತರುವ ಸಂದೇಶವನ್ನು ಬಹು ಜನ ಧರ್ಮೋಪದೇಶಕರೇ ಅಂಗೀಕರಿಸಲಿಲ್ಲ, ಮತ್ತು ಅಂಗೀಕರಿಸಿದವರನ್ನೂ ಅಡ್ಡಿಪಡಿಸಿದರು. ಇಂತಹ ಜನರ ರಕ್ತವು ಅವರ ಮೇಲಿದೆ. ಪರಲೋಕದ ಈ ಸಂದೇಶವನ್ನು ಪ್ರತಿಭಟಿಸಲು ಬೋಧಕರ ಜೊತೆಗೆ ಜನರು ಸೇರಿಕೊಂಡರು. ಅವರು ವಿಲಿಯಂ ಮಿಲ್ಲರ್ ಹಾಗೂ ಆತನ ಸಂಗಡಿಗರನ್ನೂ ಹಿಂಸಿಸಿದರು, ಈತನ ಪ್ರಭಾವನ್ನು ಛಿದ್ರಗೊಳಿಸಲು ಸುಳ್ಳು ಬೋಧನೆಗಳು ಪ್ರಚಲಿತವಾದವು. ಈತನು ದೇವರ ಆಲೋಚನೆಗಳನ್ನು ಸರಳವಾಗಿ ಪ್ರಕಟಿಸಿ, ಕೇಳುಗರ ಹೃದಯದಲ್ಲಿ ಕಟ್ಟುಸತ್ಯವನ್ನು ಬಿತ್ತುತ್ತಿದ್ದ ವಿವಿಧ ಸಂರ್ಧಭಗಳಲ್ಲಿ ಈತನ ವಿರುದ್ದ ರೌದ್ರವನ್ನು ಎಬ್ಬಿಸಲಾಯಿತು. ಅದ್ದರಿಂದ ಆ ಸ್ಥಳವನ್ನು ಬಿಟ್ಟು ಹೊರಡುವಾಗ ಜೀವವನ್ನು ತೆಗೆಯಬೇಕೆಂದು ದಾರಿಗೆ ಅಡ್ಡಗಟ್ಟಲಾಯಿತು. ಆದರೆ ಮಿಲ್ಲರನ ಜೀವವನ್ನು ರಕ್ಷಿಸಲು ದೇವದೂತರು ಕಳುಹಿಸಲ್ಪಟ್ಟರು. ಅವರ ಕೋಪೋದ್ರಿಕ ಜನರ ಗುಂಪಿನಿಂದ ಸುರಕ್ಷಿತವಾಗಿ ಅವನನ್ನು ನಡೆಸಿದರು. ಆತನ ಕೆಲಸವೂ ಇನ್ನೂ ಮುಕ್ತಾಯವಾಗಿರಲಿಲ್ಲ. GCKn 184.1
ಮಹಾಭಕ್ತರೆಲ್ಲಾ ಆನಂದದಿಂದ ಸಂದೇಶವನ್ನು ಅಂಗೀಕರಿಸಿದರು. ಇದು ದೇವರ ಸಂದೇಶವೆಂದೂ ಯುಕ್ತ ಸಮಯದಲ್ಲಿ ಪ್ರಕಟವಾಗಿದೆ ಎಂದೂ ಅರ್ಥಮಾಡಿಕೊಂಡರು. ಈ ಪರಲೋಕ ಸಂದೇಶದ ಪ್ರತಿಫಲವನ್ನು ದೇವದೂತರು ತೀವ್ರ ಆಸಕ್ತಿಯಿಂದ ಎದುರು ನೋಡುತ್ತಿದ್ದರು. ಆದರೆ ಸಭೆಗಳು ಅದನ್ನು ತಿರಸ್ಕರಿಸಿ ವಿಮುಖವಾಗಲು ಅವರು ಅಸಂತೋಷದಿಂದ ಯೇಸುವಿನ ಸಲಹೆ ಕೇಳಿದರು. ಆತನು ಸಭೆಗಳಿಂದ ತನ್ನ ನೋಟವನ್ನು ಸರಿಸಿ, ಸಾಕ್ಷಿಗಳನ್ನು ತಿರಸ್ಕರಿಸಿದ ಅಮೂಲ್ಯರನ್ನು ಪ್ರಾಮಾಣಿಕತೆಯಿಂದ ಗಮನಿಸಿರಿ ಏಕೆಂದರೆ ಮತ್ತೊಂದು ಬೆಳಕು ಅವರ ಮೇಲೆ ಪ್ರಕಾಶಿಸಲಿದೆ ಎಂದು ದೂತರಿಗೆ ಹೇಳಿದನು. GCKn 185.1
ಒಂದುವೇಳೆ ತೋರಿಕೆಯ ಕ್ರೈಸ್ತರು ರಕ್ಷಕನ ಬರುವಣವನ್ನು ಪ್ರೀತಿಸಿದ್ದರೆ, ಆತನ ಮೇಲೆ ಪ್ರೀತಿಯನ್ನಿಟ್ಟಿದ್ದರೆ, ಆತನೊಂದಿಗೆ ಹೋಲಿಸಲಾಗುವಂಥವರು ಯಾರು ಭೂಮಿಯಲಿಲ್ಲವೆಂದು ನಂಬಿದ್ದರೆ, ಆತನ ಬರುವಣ ಮೊದಲ ಪರಿಚಯದಲ್ಲೇ ಗೆಲುವಿನಿಂದ ಜಯಕಾರ ಮಾಡಿತ್ತಿದ್ದರು ಎಂಬುದನ್ನು ನಾನು ಕಂಡೆನು. ಆದರೆ ಕರ್ತನ ಬರುವಣದ ಬಗ್ಗೆ ತಿಳಿದಾಗ ಅವರು ಅಸಮ್ಮತಿಯನ್ನು ತೋರಿಸಿದ್ದರಲ್ಲಿ, ಆತನನ್ನು ಪ್ರೀತಿಸಲಿಲ್ಲ ಎಂಬ ಎಂಬ ಕಟುತೀರ್ಮಾನಕ್ಕೆ ಪುರವೆಯಾಗಿದೆ. ಇದೀಗ ಸೈತಾನನೂ ಆತನ ದೂತರು ವಿಜಯೋತ್ಸಾಹದಿಂದ ಕ್ರಿಸ್ತನಿಗೂ ಆತನ ದೂತರಿಗೂ ಸಮ್ಮುಖದಲ್ಲೇ ತೋರಿಕೆಯ ಕ್ರೈಸ್ತರಿಗೆ ಯೇಸುವಿನ ಮೇಲೆ ಕಿಂಚಿತ್ತೂ ಪ್ರೀತಿ ಇಲ್ಲವಾದ್ದರಿಂದ ಆತನ ಎರಡನೆಯ ಬರುವಣವನ್ನೂ ಅಪೇಕ್ಷಿಸುತ್ತಿಲ್ಲವೆಂದು ಮುಖದ ಮೇಲೆ ಹೊಡೆದಂತೆ ತಿಳಿಸಿದರು. GCKn 185.2
ದೇವಜನರು ಕರ್ತನನ್ನು ನೋಡಲು ಅತ್ಯಾನಂದವ ಅಪೇಕ್ಷೆಯಿಂದಿರುವುದನ್ನು ನಾನು ಕಂಡೆನು. ಆದರೆ ದೇವರು ಅವರಿಗೆ ರುಜುವಾತು ಮಾಡಿಕೊಡಲು ಯೋಚಿಸಿದನು. ಪ್ರವಾದನೆಯ ಕಾಲಾವಧಿಯ ಎಣಿಕೆಯಲ್ಲಿನ ತಪ್ಪನ್ನು ಕರ್ತನ ಕರಗಳು ಮುಚ್ಚಿಟ್ಟವು. ಕರ್ತನಿಗಾಗಿ ಕಾಯುತ್ತಿದ್ದವರೂ ಅದನ್ನು ಸರಿಯಾಗಿ ಕಂಡುಕೊಳ್ಳಲಿಲ್ಲ, ಆಕಾಲವನ್ನು ಪ್ರತಿಭಟಿಸುತ್ತಿದ್ದ ವಿದ್ಯಾವಂತರೂ ಸರಿಯಾಗಿ ಅರ್ಥಮಾಡಿಕೊಳ್ಳುವುದರಲ್ಲಿ ಸೋತರು. ದೇವರೇ, ಈ ಜನರು ನಿರಾಶೆಹೊಂದಲೆಂದು ಉದ್ದೇಶಿಸಿದರು ಸಮಯವೂ ಕಳೆದಾಗ ಆತನು ಬರವಣವನ್ನು ಎದುರುನೋಡುತ್ತಿದ್ದವರು ದುಃಖದಿಂದ ಮನಗುಂದಿದರು, ಆದರೆ ಯೇಸುವಿನ ಬರುವಣವನ್ನು ಇಷ್ಟಪಡದೆ ಭಯದಿಂದ ಸಂದೇಶವನ್ನು ಅಂಗೀಕರಿಸಿದವರಿಗೆ, ಎದುರುನೋಡುತ್ತಿದ್ದ ಸಮಯಕ್ಕೆ ಅತನು ಬರಲಿಲ್ಲವೆಂದು ಬಹು ಸಂತೋಷವಾಯಿತು. ಅವರು ಕಂಠೋಕ್ತವಾಗಿ ಹೇಳಿಕೊಂಡರೂ ಅದೊ ಹೃದಯದ ಮೇಲೆ ಯಾವ ಪರಿಣಾಮವನ್ನೂ ಮಾಡಲಿಲ್ಲ ಮತ್ತು ಜೀವವನ್ನು ಶುದ್ಧಮಾಡಲೂ ಇಲ್ಲ. ಇಂತಹ ಜನರ ಹೃದಯವನ್ನು ಬಹಿರಂಗಪಡಿಸಲು ಕಾಲಾವಧಿಯ ಮುಂದೂಡುವಿಕೆ ಸರಿಯಾಗಿಯೇ ಆಗಿತ್ತು. ಮೊಟ್ಟಮೊದಲನೆಯದಾಗಿ ಇವರೆಲ್ಲಾ ರಕ್ಷಕನ ಬರುವಣವನ್ನು ನಿಜವಾಗಿ ಪ್ರೀತಿಸಿದ್ದು ದುಃಖಪಟ್ಟು ನಿರಾಶೆಹೊಂದಿದವರ ನ್ನು ಹಿಯ್ಯಾಳಿಸಿದರು. ದೇವರು ಸಂಕಟಕಾಲದಲ್ಲಿ ಕುಂದಿಹೋಗಿ ಹಿಮ್ಮೆಟ್ಟುವವರನ್ನು ಕಂಡುಕೊಳ್ಳಲು ಅನ್ವೇಷಣೆಯ ಪರೀಕ್ಷೆಯೊಂದನ್ನು ನೀಡಿ ತನ್ನ ಜನರಿಗೆ ಪ್ರಮಾಣಪೂರ್ವಕವಾಗಿ ತೋರಿಸಿದುದನ್ನು ನಾನು ಕಂಡೆನು. GCKn 186.1
ದೇವರನ್ನು ನೋಡಬೇಕೆಂದು ಬಹು ಪ್ರೀತಿಯಿಂದ ಆಶಿಸಿ ಮನಃಪೂರ್ವಕವಾಗಿ ಕಾದುಕೊಂಡಿದ್ದವರನ್ನು ಯೇಸು ಮತ್ತು ಪರಲೋಕಗಣಗಳು ಪ್ರೀತಿಯಿಂದಲೂ ಮತ್ತು ಅನುಕಂಪದಿಂದಲೂ ದೃಷ್ಟಿಸಿದರು ಸಂಕಟಕಾಲದಲ್ಲಿ ಇವರನ್ನು ಕಾಪಾಡಲು ದೇವದೂತರು ಸುತ್ತಲು ಹಾರಾಡುತ್ತಿದ್ದರು. ಪರಲೋಕ ಸಂದೇಶವನ್ನು ಅಲಕ್ಷ್ಯಮಾಡಿದವರು ಕತ್ತಲಲ್ಲೇ ಇಡಲ್ಪಟ್ಟರು. ಅವರ ಮೇಲೆ ದೇವರ ಕೋಪವು ಭಗ್ಗನೆ ಹೊತ್ತಿಕೊಂಡಿತು. ಏಕೆಂದರೆ ಆತನು ಪರಲೋಕದಿಂದ ಅನುಗ್ರಹಿಸಿದ ಬೆಳಕನ್ನು ಅವರು ಅಂಗೀಕರಿಸಲಿಲ್ಲ ಆದರೆ ಕರ್ತನು ಏಕೆ ಬರಲಿಲ್ಲಿ ಎಂದು ಚಿಂತಿಸುತ್ತಾ ನಿರಾಶೆ ಹೊಂದಿದ್ದ ನಂಬಿಗಸ್ಥರನ್ನು ದೇವರು ಅಂಧಕಾರದಲ್ಲಿ ಇಡಲಿಲ್ಲ ಮತ್ತೆ ಅವರು ಪ್ರವಾದನ ಕಾಲವನ್ನು ಸರಿಯಾಗಿ ಹುಡುಕಿಕೊಳ್ಳಲು ಸತ್ಯವೇದದ ಕಡೆಗೆ ಸೆಳೆಯಲ್ಪಟ್ಟರು. ಸಂಖ್ಯೆಗಳ ಮೇಲಿಂದ ದೇವರ ಹಸ್ತವು ಸರಿಸಲ್ಪಟ್ಟು ತಪ್ಪುಗ್ರಹಿಕೆಯನ್ನು ವಿವರಿಸಿತು. ಅವರು ಪವಾದನಾ ಕಾಲಾವಧಿ 1844ಕ್ಕೆಬಂದು ಸೇರಿದ್ದನ್ನು ಕಂಡುಕೊಂಡರು. ಇದೇ ಕುರುಹನೇ ಅವರು ಮೊದಲು 1843ಕ್ಕೆ ಪ್ರವಾದನಾ ಕಾಲವು ಕೊನೆಗೊಳ್ಳುತ್ತದೆಂದು ಮಂಡಿಸಿದ್ದರು, ಅದು 1844ಕ್ಕೆ ಅಂತ್ಯಗೊಳ್ಳುವುದೆಂದು ಈಗ ಸಾಬೀತಾಯಿತು. ಅವರ ಸ್ಥಿತಿಗೆ ದೇವರ ವಾಕ್ಯದ ಬೆಳಕು ಹರಿಸಲ್ಪಟ್ಟು ತಡವಾಗುತ್ತಿದ್ದ ಕಾಲವನ್ನು ಅನ್ವೇಷಿಸಿದರು — ಒಂದುವೇಳೆ ದರ್ಶನವು ತಡವಾದರೆ, ಕಾದುಕೊಂಡಿರ್ರಿ. ಯೇಸುವಿನ ತತ್ ಕ್ಷಣದ ಬರುವಣದಲ್ಲಿ ಅಕಾಂಕ್ಷೆಯಿಂದ ಕಾದುಕೊಂಡಿದ್ದರಿಂದ ತಡವಾದ ಕಾಲದ ದರ್ಶನವನ್ನು ಉಪೇಕ್ಷೆ ಮಾಡಿದರು ಅದು ನಿಜವಾಗಿ ಕಾಯುತ್ತಿದ್ದವರನ್ನು ಬೆಳಕಿಗೆ ತಂದು ಪ್ರಕಟಿಸಲು ಲೆಕ್ಕಾಚಾರಮಾಡಿದುದಾಗಿತ್ತು. ಮತ್ತೆ ಅವರಿಗೆ ಕಾಲಾವಧಿಯ ಅಂಶವೊಂದು ಕೊಡಲ್ಪಟ್ಟಿತು. ಆದರೆ ಬಹು ಜನರು ನಿರಾಶೆಯ ಆಳದಿಂದ ಎಚ್ಚೆತ್ತು 1843 ರಲ್ಲಿಟ್ಟಿದ್ದ ನಂಬಿಕೆಯ ಮೇಲಿನ ಉತ್ಸುಕತೆ ಮತ್ತು ಶಕ್ತಿಯ ಮಟ್ಟವನ್ನು ಹೊಂದಿಕೊಳ್ಳಲಾಗಲಿಲ್ಲ. GCKn 187.1
ಸಂದೇಶವನ್ನು ಅಂಗೀಕರಿಸದವರು, ಅವರಂದುಕೊಂಡಂತೆ ಈ ಭ್ರಮೆಯನ್ನು ಅಂಗೀಕರಿಸದವರು ಮಾಡಿದ ತಮ್ಮ ವೈಚಾರಿಕತೆ ಮತ್ತು ವಿವೇಕದ ಬಗೆಗೆ ತಮ್ಮತಮ್ಮೊಳಗೆ ಅಭಿನಂದಿಸಿಕೊಂಡಾಗ ಸೈತಾನನೂ ಮತ್ತು ಆತನ ದೂತರು ಸಂಭ್ರಮ ಪಟ್ಟರು. ಅವರು ದೇವರ ಸಲಹೆಯನ್ನು ಅಲಕ್ಷಿಸುತ್ತಿರುವೆವೆಂದು ತಿಳಿದುಕೊಳ್ಳಲಿಲ್ಲ. ಪರಲೋಕದುದ್ಭವ ಸಂದೇಶಕ್ಕೆ ಅನುಸಾರವಾಗಿ ಜೀವಿಸುತ್ತಿದ್ದ ದೇವಜನರನ್ನು ಕಳವಳಗೊಳಿಸುವುದರಲ್ಲಿ, ಅವರು ಸೃತಾನನೂ ಅವನ ದೂತರೊಂದಿಗೆ ಐಕ್ಯಗೊಡರು. GCKn 188.1
ಈ ಸಂದೇಶದಲ್ಲಿ ನಂನಿಕೆಯಿಟ್ಟು ವಿಶ್ವಾಸಿಗಳು ಸಭೆಯಲ್ಲಿ ತುಳಿತಕ್ಕೆ ಒಳಗಾದರು. ಅವರ ಹೃದಯದ ಮನೋಭಾವಕ್ಕನುಸಾರವಾಗಿ ನಡೆಯಲಿಲ್ಲವಲ್ಲ ಎಂದು ಸ್ವಲ್ಪಕಾಲ ಭಯವಾವರಿಸಿತು. ಆದರೆ ಸಮಯದ ಮುಂದೂಡುವಿಕೆ ಅವರ ನಿಜಭಾವನೆಯನ್ನು ಪ್ರಕಟಿಸಿತು. ಪ್ರವಾದನ ಕಾಲವು 1844ರ ವರೆಗೆ ಮುಂದುವರೆದಿರುವುದನ್ನು ಕಂಡುಕೊಂಡ ವಿಶ್ವಾಸಿಗಳ ಸಾಕ್ಷಿಯನ್ನು ಮೌನವಾಗಿರಿಸಲು ಅವರು ಒತ್ತಡ ಹೇರಿದರು. ಆದರೂ ಅವರು ಸ್ಪಷ್ಟವಾಗಿ ಎಲ್ಲಿ ತಪ್ಪದ್ದೇವೆಂದು ತಿಳಿಸುವವರಾದರು ಮತ್ತು 1844ರಲ್ಲಿ ಕರ್ತನಿಗಾಗಿ ಏಕೆ ಕಾದುಕೊಂಡಿರಬೇಕು ಎಂಬುದಕ್ಕೆ ಕಾರಣವನ್ನೂ ನೀಡಿದರು. ಇವರು ನೀಡಿದ ಪ್ರಬಲ ಕಾರಣಕ್ಕೆ ಎದುರಾಗಿ ವಿರೋಧಿಗಳು ಯಾವ ವಾದವನ್ನು ಮಾಡಲಾಗಲಿಲ್ಲ. ಸಭೆಗಳ ಕೋಪ ಅವರ ಮೇಲೆ ಉರಿಯಿತು, ಯಾವ ಪುರಾವೆಗಳನ್ನೂ ಕೇಳಿಸಿಕೊಳ್ಳಬಾರದೆಂದು ನಿರ್ಧರಿಸಿ ಇತರರು ಕೇಳಿಸಿಕೊಳ್ಳಲಾಗದಂತೆ ಇವರು ಸಾಕ್ಷಿಯನ್ನು ಮುಚ್ಚಿಹಾಕಲು ತೀರ್ಮಾನಿದರು .ಯಾರು ತಮಗೆ ದೇವರಿಂದ ಬಂದ ಬೆಳಕನ್ನು ಮುಚ್ಚಿಡದೆ ಹೋದರೋ ಅವರನ್ನು ಸಭೆಯಿಂದ ಬಹಿಷ್ಕರಿಸಲಾಯಿತು; ಆದರೆ ಯೇಸುವು ಅವರೊಂದಿಗಿದ್ದ ಕಾರಣ ಆತನ ಸ್ವರೂಪದ ಬೆಳಕಿನಲ್ಲಿ ಆನಂದತುಂದಿಲರಾದರು ಅವರ ದೂತರು ಎರಡನೆಯ ಸಂದೇಶವನ್ನು ಅಂಗೀಕರಿಸಲು ಸಿದ್ದರಾದರು. GCKn 189.1
ಓದಿ: ದಾನಿಯೇಲ 8:14; ಹಬಕ್ಕೂಕ 2:1-4; ಮಲಾಕಿಯ ಅಧ್ಯಾಯ 3 ಮತ್ತು 4; ಮತ್ತಾಯ 24:36; ಪ್ರಕಟನೆ 14:6-7 GCKn 190.1