ಲೋಕವನ್ನು ಸುತ್ತುವರಿದಿರುವ ಮಾಯೆಯನ್ನು ನಾನು ನೋಡಿದೆನು. ಅದೇನೆಂದರೆ ಯೇಸುವಿನಲ್ಲಿ ನಿದ್ರಿಸುತ್ತಿರುವ ನಮ್ಮ ಬಂಧುಗಳು ಹಾಗೂ ಸ್ನೇಹಿತರು ರೂಪ ಮತ್ತು ವೇಷವನ್ನು ಧರಿಸಿಕೊಡು ಬಂದು ಅವರು ಜೀವದಿಂದ್ದಾರೋ ಎಂಬಂತೆ ಪ್ರತ್ಯಕ್ಷವಾಗುವುದು, ಜೀವಿತರಾಗಿದ್ದಾಗ ಆಡಿದ ಪರಿಚಿತ ಮಾತುಗಳನ್ನಾಡುವುದೂ, ಅವರದೇ ಧ್ವನಿಯನ್ನು ಅನುಕರಿಸುವ ಶಕ್ತಿಯು ಸೈತಾನನಿಗಿದೆ ಈ ಎಲ್ಲಾ ಕಾರ್ಯಗಳಿಂದ ಲೋಕವನ್ನು ಮೋಸಗೊಳಿಸಿ, ಈ ಮಾಯೆಯಲ್ಲಿ ಜನರು ನಂಬಿಕೆಯಿಡುವರು ಹಾಗೆ ಮಾಡುವುದರ ಮೂಲಕ ತನ್ನ ಬಲೆಗೆ ಕೆಡವುಕೊಳ್ಳುವನು. ವೇದದ ಆಧಾರದ ಮೇಲೆ ಸತ್ಯದ ತಿಳುವಳಿಕೆಯನ್ನು ದೇವಜನರು ಉಳಿಸಿಕೊಳ್ಳಬೇಕು ಎಂಬುದನ್ನು ನಾನು ಕಂಡೆನು. ಸತ್ತವರ ಸ್ಥತಿಯ ಬಗ್ಗೆ ತಿಳುವಳಿಕೆ ಖಂಡಿತ ಪಡೆದಿರಬೇಕು; ಏಕೆಂದರೆ ಪ್ರೇತಾತ್ಮಗಳು ಎಂದುರು ಬಂದು ಗೆಳೆಯರು ಬಂಧುಗಳಂತೆ ಕಾಣಿಸಿಕೊಳ್ಳುವುದು ಮಾತ್ರವಲ್ಲದೆ ಸತ್ಯವೇದದಲ್ಲಿ ಇರದ ತತ್ವಗಳನ್ನು ಪ್ರತಿಪಾಧಿಸುವರು. ಈ ಪ್ರತಿಪಾದನೆಗಳನ್ನು ಪುಷ್ಟೀಕರಿಸಲು ತಮ್ಮ ಬಲದಿಂದಲೇ ಅದ್ಭುತಕಾರ್ಯಗನ್ನು ನಡಿಸಿ ಅನುಕಂಪವನ್ನು ಗಿಟ್ಟಿಸಿಕೊಳ್ಳುವರು. ದೇವಜನರಾದವರು ‘ಸತ್ತವರಿಗೂ ಯಾವ ತಿಳುವಳಿಕೆಯು ಇಲ್ಲ’ ಎಂಬ ವೇದದ ಸತ್ಯವನ್ನು ದೃಡವಾಗಿ ಅರಿತು, ಅವು ಪ್ರೇತಾತ್ಮಗಳೇ ಎಂಬುದನ್ನು ಗುರುತಿಸಿ ದೃಢಪಡಿಸಿಕೊಳ್ಳಬೇಕು. GCKn 236.1
ನಾವು ನಮ್ಮ ನಿರೀಕ್ಷಿಯ ತಳಹದಿಯನ್ನು ಪರೀಕ್ಷಿಸಿಕೊಳ್ಳಬೇಕಾಗಿದೆ. ಎಂಬುದನ್ನು ನಾನು ಕಂಡೆನು. ಏಕೆಂದರೆ ಎಲ್ಲಾವನ್ನು ಸತ್ಯವೇದದ ಆಧಾರದ ಮೇಲೆ ಸಮರ್ಥಿಸಿಕೊಳ್ಳಬೇಕು; ಈ ಭ್ರಮೆಯು ಹರಡುತ್ತಾ ಬಂದು ನಾವು ಆದರೊಂದಿಗೆ ಮುಖಾಮುಖಿ ಕಾದಾಡಬೇಕಾಗುತ್ತದೆ. ಒಂದುವೇಳೆ ಸಿದ್ದರಗಿದಲ್ಲಿ ಬಲೆಗೆ ಸಿಕ್ಕಿಕೊಳ್ಳುತ್ತೇವೆ. ನಮ್ಮಮುಂದಿರುವ ಹೋರಾಟವನ್ನು ನಮಗೆ ಸಾದ್ಯವಾದಷ್ಟು ಎದುರಿಸಿದರೆ ಉಳಿದ ಭಾಗವನ್ನು ದೇವರು ನಿರ್ವಹಿಸುತ್ತಾರೆ. ಆತನು ಶೀರ್ಘವಾಗಿ ದೂತರನ್ನು ಕಳುಹಿಸಿ ಸೈತಾನನಿಂದ ನಡೆಸಲ್ಪಡುವ ಸೂಚಕಕಾರ್ಯಗಳಿಗೆ ಸೆಳೆಯಲ್ಪಟ್ಟು ವಂಚನೆಗೆ ಒಳಗಾಗದಂತೆ ನಂಬಿಗಸ್ಥರ ಸುತ್ತಲೂ ಬೇಲಿಯನ್ನು ಹಾಕುವುದಲ್ಲದೆ ಆತನ ಸರ್ವಸಕ್ತ ಕರಗಳು ನಮ್ಮನು ರಕ್ಷಿಸುತ್ತವೆ. GCKn 237.1
ಈ ಮಾಯೆಯು ಹರಡುತ್ತಿರುವ ತೀವ್ರ ವೇಗವನ್ನು ನಾನು ಕಂಡೆನು. ಬಂಡಿಗಳ ಸರಣಿಯೊಂದು ನನಗೆ ಮಿಂಚಿನಂತೆ ವೇಗವಾಗಿ ಸಾಗುತ್ತಿತ್ತು, ಇದನ್ನು ಗಮನವಿಟ್ಟು ನೋಡಬೇಕೆಂದು ದೂತನು ಹೇಳಿದನು ಆಗ ಬಂಡಿಯ ಮೇಲೆ ದೃಷ್ಟಿಯನ್ನಿಟ್ಟೆನು. ಇಡೀ ಲೋಕವೇ ಬಂಡಿಯೊಳಗಿರುವಂತೆ ಕಾಣಿಸಿತು. ನಂತರ ಬಂಡಿಯ ನಿರ್ವಹಕನನ್ನು ತೋರಿಸಿದನು. ಅವನು ಘನವಾದ ಸುಂದರ ಪುರುಷನಾಗಿದ್ದನು. ಪ್ರಯನಿಕರೆಲ್ಲಾ ಭಯಭೀತಿಯಿಂದ ಅವನನ್ನು ನೋಡುತ್ತಿದ್ದರು. ನಾನು ಗಲಿಬಿಲಿಯಿಂದ ಸಂಗಡಿಗ ದೂತನನ್ನು, ಅವನಾರು? ಎಂದೆನು ಅವನು ಸೈತಾನನು, ಬೆಳಕಿನ ದೂತನ ಹಾಗಿರುವ ನಿರ್ವಾಹಕನು. ಲೋಕವನ್ನೆಲ್ಲಾ ಸೆರೆಹಿಡಿದ್ದಾನೆ. ಜನರೆಲ್ಲಾ ದಟ್ಟವಾದ ಭ್ರಮೆಗೆ ಒಳಗಾಗಿ ಶಾಪಗ್ರಸ್ತರಾಗುವಂತೆ ಅಸತ್ಯವನ್ನು ನಂಬಿದ್ದಾರೆ ಆತನ ಕಾರ್ಯಭಾರಗಳಲ್ಲಿ ಕೆಳಗಿನವನು ಅಭಿಯಂತನು [Engineer] ತನಗೆ ಬೇಕಾದಂತೆ ಅವರು ಕಾರ್ಯನಿರ್ವಹಿಸಲು ನಿಯೋಜಿತರಾಗಿದ್ದಾರೆ. ಎಲ್ಲರು ಸೇರಿ ಮಿಂಚಿನ ವೇಗದಿಂದ ಅಧಃಪತನದೆಡೆಗೆ ಸಾಗುತ್ತಿದ್ದಾರೆ ಎಂದನು. ಯಾರಾದರೂ ಈ ಗುಂಪಿನಿಂದ ಬಿಡಲ್ಪಟ್ಟವರಿದ್ದಾರೋ? ಎಂದು ಪಶ್ನಿಸಿದೆನು. ದೂತನ, ವಿರುದ್ಧ ದಿಕ್ಕಿನೆಡೆಗೆ ನೋಡು ಎಂದನು. ಇಕ್ಕಟ್ಟಾದ ದಾರಿಯಲ್ಲಿ ನಡೆಯುತ್ತಿರುವ ಚಿಕ್ಕಗುಂಪನ್ನು ಕಂಡೆನು. ಅವರೆಲ್ಲಾ ಸತ್ಯದ ಒಟ್ಟಾಗಿ ಕಟ್ಟಲ್ಪಟ್ಟು ದೃಡವಾಗಿರುವುದು ಕಂಡುಬಂತು.ಆ ಚಿಕ್ಕ ಜನಸಮೂಹವು ತೀವ್ರವಾದ ಶೋಧನೆ ಹೋರಾಟದಲ್ಲಿ ಸಿಲುಕಿ ಸೊರಗಿದವರಂತೆ ಕಂಡುಬಂದರು. ಆ ಸಮಯದಲ್ಲಿ ಅದೇತಾನೇ ಮೋಡಗಳ ಮರೆಯಿಂದ ಎಂದುಬಂದ ಸೂರ್ಯನ ಕಿರಣಗಳ ಪ್ರಭೆ ಅವರ ಮೇಲೆ ಕಂಡುಬಂದು ಇನ್ನೇನ್ನು ವಿಜಯ ಪಡೆದವರಂತೆ ಉತ್ಸಾಹ ಭರಿತರಾಗಿದ್ದರು. GCKn 237.2
ಕರ್ತನು ಲೋಕಕ್ಕೆ, ಈ ಬಲೆಯನ್ನು ಗುರುತಿಸುವ ಅವಕಾಶ ನೀಡಿರುವುದನ್ನು ನಾನು ಕಂಡೆನು. ಈ ಬಂದು ವಿಷಯ ಕ್ರೈಸ್ತರಿಗೆ ತಿಳಿಯಲೇಬೇಕಾದ ಸಿದ್ದಾಂತವಾಗಿದೆ ಅಮೂಲ್ಯರಿಗೂ ನೀಚರಿಗೂ ಯಾವ ಬೇಧವಿಲ್ಲದಂತೆ ಅರಿತುಕೊಳ್ಳುವ ಅವಕಾಶ ಕೊಂದಲ್ಪಟ್ಟಿದೆ. GCKn 238.1
ಥಾಮಸ್ ಪೇಯ್ನ್ ಎಂಭಾತನು ಸತ್ತು ಮಣ್ಣಾಗಿದ್ದಾನೆ. ಈತನು ಸಾವಿರ ವರ್ಷಗಳ ನಂತರ ಬರುವ ಎರಡನೆಯ ಪುನರುತ್ಥಾನದಲ್ಲಿ ಪ್ರತಿಫಲ ಹೊಂದಲು ಎಬ್ಬಿಸಲ್ಪಟ್ತು ಮತ್ತೆ ಎರಡನೆ ಮರಣವನ್ನು ಅನುಭವಿಸಬೇಕಾದ ವ್ಯಕ್ತಿ. ಇಂಥವನನ್ನು ಸೈತಾನನು, ಪರಲೋಕದಲ್ಲಿ ಪೇಯ್ನ್ ಈಗಾಗಲೇ ಘನಮಾನ ಹೊಂದುತ್ತಾ ಇದ್ದಾನೆ ಎಂಬ ಅಭಿಪ್ರಾಯ ಜನರಲ್ಲಿ ಹುಟ್ಟಿಸಿದನು ಥಾಮಸ ಪೇಯ್ನ್ ಭೂಮಿಯ ಮೇಲೆ ಜೀವಂತವಾಗಿರುವವರೆವಿಗೂ ಸೈತಾನನು ತನ್ನ ಕೆಲಸಕ್ಕೆ ಉಪಯೋಗಿಸಿಕೊಂಡನು. ಇವನು ಭೂಲೋಕದಲ್ಲಿದ್ದಾಗ ಹೇಗೆ ಉಪದೇಶಿಸಿದನೋ ಹಾಗೆಯೇ ಪರಲೋಕದಲ್ಲಿ ಮುಂದುವರಿಸುತ್ತಿರುವ ಹಾಗೆ ಕಾಣುವಂತೆ ಮಾಡುತ್ತಾನೆ ಪೇಯ್ನ್ ಉನ್ನತಕ್ಕೇರಿಸಲ್ಪಟ್ಟು ಬಹು ಮಾನ್ಯ ಹೊಂದುತ್ತಿರುವನೆಂಬ ಸೋಗುಹಾಕಿ ಕಾರ್ಯವನ್ನು ಬಣ್ಣಗಟ್ಟಿ ವಿವರಿಸುತ್ತಾನೆ. ಆದರೆ ಥಾಮಸ ನ ಜೀವಿತ ಹಾಗೂ ಮರಣವನ್ನು ಕಂಡು ಭಯಪಟ್ಟ ಕೆಲವರು, ಅವನು ಮಾಡಿದ ಭ್ರಷ್ಟ ಬೋಧನೆಗಳು ನೀಚನಾಗಿ ದೇವರನ್ನು ಆತನ ಆಜ್ಞೆಗಳನ್ನೂ ನಿರ್ಲಕ್ಷಿಸಿದಾತನ ಉಪದೇಶಕ್ಕೆ ಈಗ ಅಧೀನರಾಗುವಷ್ಟು ಮರಳಾಗುವರು. GCKn 239.1
ಸುಳ್ಳಿನ ತಂದೆಯಾದವನು ಲೋಕವನ್ನು ಅಂಧಕಾರದಲ್ಲಿಟ್ಟು ವಂಚಿಸಲು ತನ್ನ ದೂತರನ್ನು ಕಳುಹಿಸುವನು. ಅವರು ಪವಿತ್ರಾತ್ಮಭರಿತರಾಗಿ ಬರೆದಿರುವ ಬರವಣಿಗೆಯಲ್ಲ ಪ್ರತಿರೋಧವಾಗಿ ಕಾಣುವಂತೆ ಮಾಡುವರು. ಈ ಸುಳ್ಳನ್ನಾಡುವ ದೂತರು, ತಮ್ಮ ಬೋಧನೆಗಳು ಕಳಂಕಿತವಾಗಿವೆ ಎಂದು ಅಪೋಸ್ತಲರು ತಾವೇ ಹೇಳುವಂತೆ ಮಾಡಿತ್ತಾರೆ; ಹೆಸರಿಗೆ ಮಾತ್ರ ಕ್ರೈಸ್ತರಾಗಿದ್ದು ವಾಸ್ತವಾದಲ್ಲಿ ಸತ್ತವರನ್ನು ಲೋಕಕ್ಕೆ ಕಳುಹಿಸಿ ದೇವರ ವಾಕ್ಯವನ್ನು ಚಂಚಳಗೊಳ್ಳಿಸುವನು ಮತ್ತು ಆತನ ಮಾರ್ಗಗಳನ್ನು ಕಡಿದು ಹಾಕುತ್ತಾ, ಯೋಜನೆಗಳಿಗೆ ಅಡ್ಡಿಯಾಗಿ ನಿಲ್ಲುವಂತೆ ನೆಡೆಸುವನು. ಇದರಿಂದ ಸತ್ಯವೇದದ ದಿವ್ಯಮೂಲವೇ ಸಂಶಯಕೊಳ್ಳಗಾಗುತ್ತದೆ. ಹೀಗಾಗಿ ಕ್ರಿಸ್ತವಿರೋಧಿಯಾಗಿ ಸತ್ತ ಥಾಮಸ್ ಪೇಯ್ನ್ ಗೆ ಪರಲೋಕದಲ್ಲಿ ಹಾರ್ದಿಕ ಸ್ವಾಗತ ಸಿಕ್ಕಿದೆ ಎಂದು ಜನರನ್ನು ನಂಬಿಸುತ್ತಾನೆ ಅಲ್ಲದೇ ಅವರು ಈ ಲೋಕದಲ್ಲಿದ್ದಾಗ ದ್ವೇಷಿಸುತ್ತಿದ್ದ ಅದೇ ಶಿಷ್ಯರೊಡಗೊಡಿ ಪ್ರಬೋಧಿಸುತ್ತಾನೆ ಎಂಬಂತೆ ಸೈತಾನನು ತೋರ್ಪಡಿಸುತ್ತಾನೆ. GCKn 239.2
ಸೈತಾನನು ತನ್ನ ಪ್ರತಿದೂತರಿಗೂ ಅವರದೇ ಆದ ಕೆಲಸವನ್ನು ನಿರ್ವಹಿಸಲು ಹಚ್ಚುತ್ತಾನೆ ಅವರು ಕೃತ್ರಿಮರೂ, ತಂತ್ರಗಾರರೂ ಆಗಿದ್ದು, ಕೆಲವರನ್ನು ಶಿಷ್ಯರ ಪಾತ್ರವಹಿಸಿ ಪರವಾಗಿ ಮಾತನಾಡುವಂತೆ ಬೋಧಿಸುತ್ತಾನೆ ಮತ್ತೆ ಕ್ರಿಸ್ತವಿರೋಧಿಗಳಾಗಿದ್ದು ದುಷ್ಟರಾಗಿ ದೇವರನ್ನು ಶಪಿಸುತ್ತಾ ಸತ್ತ ಕೆಲವರನ್ನು ಇದೀಗ ಬಹು ಭಕ್ತರಾಗಿ ವರ್ತಿಸುವಂತೆ ಪಾತ್ರವಹಿಸಲು ಹಚ್ಚುತ್ತಾನೆ. ಪರಿಶುದ್ಧ ಶಿಷ್ಯರಿಗೂ ಮತ್ತು ನೀಚರಿಗೂ ಬೇಧ ಕಾಣದಾಗುತ್ತದೆ. ಇಬ್ಬರೂ ಒಂದೇ ವಿಷಯವನ್ನು ಬೋಧಿಸುತ್ತಾರೆ. ಸೈತಾನನು ಯಾರು ಮಾತಾಡಿದರೇನು? ಅವನ ಗುರಿ ಮುಟ್ಟ್ದರೆ ಸಾಕು, ಪೇಯ್ನ್ ಜೀವಿತನಾಗಿದ್ದಾಗ ಆತ್ಮೀಯನಾಗಿ ಸಹಾಯ ಮಾಡುತ್ತಿದ್ದನು. ಅವನು ಆಡುತ್ತಿದ್ದ ಪ್ರತಿಪದವು ಸೈತಾನನಿಗೆ ತಿಳಿದಿತ್ತು ಬಹು ನಂಬಿಕೆಯಿಂದ ಸೇವಿಸುತ್ತಿದ್ದ ತನ್ನ ಭಕ್ತನ ಕೈ ಬರವಣಿಗೆಯನ್ನು ತನ್ನ ಅಂಕಿತದಲ್ಲಿಟ್ಟುಕೊಂಡು ಪರಿಪೂಣವಾಗಿ ತನ್ನ ಗಿರಿ ಸಾಧಿಸಿಕೊಂಡನು. ಸೈತಾನನು ಆತನ ವಿಷಯಗಳನೇ ಬರೆಯಿಸಿದನು ದೂತರ ಮೂಲಕ ತನ್ನ ಭಾವನೆಗಳನ್ನು ಪ್ರಕಟಪಡಿಸುವುದು ಅವನಿಗೆ ಸುಲಭವಾಗಿದೆ. ಅಲ್ಲದೇ ಜೀವಿಸುತ್ತಿದ್ದಾಗ ತನ್ನ ಭಕ್ತನಾಗಿದ್ದ ಪೇಯ್ನ್ ಬರವಣಿಗೆ ಇದೆಂದು ಕಾಣುವಂತೆ ನಂಬಿಸುತ್ತಾನೆ. ಇದು ಸೈತಾನನ ಕೌಶಲ್ಯವಾಗಿದೆ. ಈ ಬೋಧನೆಗಳೆಲ್ಲಾ ಸತ್ತಿರುವ ಅಪೋಸ್ತಲರೂ, ಭಕ್ತರು ಹಾಗೂ ದುಷ್ಟರ ಉಪದೇಶಗಳಾಗಿದ್ದು ಸೈತಾನನ ಆಜ್ಞಾಧಾರದಿಂದ ಬಂದುದಾಗಿದೆ. GCKn 240.1
ಪ್ರತಿ ಅಂಧಕಾರ ತುಂಬಿದ ಮನಸ್ಸಿನಿಂದ ತೆರೆಯನ್ನು ಸರಿಸಿ ಸೈತಾನನ ಕಾರ್ಯಗಳು, ಸೂಚಕಗಳನ್ನು ಕಂಡುಕೊಳ್ಳುಲು ಇವು ಸಾಕಾಗಿದೆ — ದೇವರನ್ನು ಪರಿಪರ್ಣವಾಗಿ ದ್ವೇಷಿಸುತ್ತಾ ಆತನ ಶುದ್ಧ ಅಪೋಸ್ತಲರನ್ನು, ಮಹಿಮೆಯಲ್ಲಿರುವ ದೂತರುನ್ನು ಹಗೆ ಮಾಡುತ್ತಾ ಸೈತಾನಿಂದ ಪ್ರೀತಿಸಲ್ಪಡುತ್ತಿದ್ದ ವ್ಯಕ್ತಿಯ ಮುಖಂತರ ಲೋಕಕ್ಕೆ ಮತ್ತು ಕ್ರೈಸ್ತ ವಿರೋಧಿಗಳಿಗೆ ತಿಳಿಸುವುದೇನೆಂದರೆ, ನೀವು ಎಷ್ಟ ದುಷ್ಟರಾಗಿದರೂ ಸರಿ; ನೀವು ಸತ್ಯವೇದವನ್ನೂ ದೇವರನ್ನೂ ಪ್ರೀತಿಸದ್ದರೂ ನಂಬಿದಿದ್ದರೂ ಸರಿ; ನಿಮ್ಮಿಷ್ಟದಂತೆ ಜೀವಿಸಿರಿ; ಪರಲೋಕವು ನಿಮ್ಮ ಮನೆಯಾಗಿದೆ; ಏಕೆಂದರೆ ಒಂದುವೇಳೆ ಥಾಮಸ್ ಪೇಯ್ನ್ ನಂಥವನ್ನೂ ಪರಲೋಕದಲ್ಲಿ ಘನಗೌರವವದಿಂದ ಇರುವುದಾದಲ್ಲಿ ನಾವೂ ಸಹ ನಿಶ್ಚಯವಾಗಿ ಅಲ್ಲಿರವೆವು ಎಂಬ ನಂಬಿಕೆ ದೃಢವಾಗುತ್ತದೆ ಮಸುಕಾಗಿರುವ ಈ ವಿದ್ಯೆಯನ್ನು ಮನಸ್ಸಿದ್ದರೆ ಕಂಡುಕೊಳ್ಳಬಹುದು. ಸೈತಾನನು ತಾನು ಭೂಮಿಗೆ ಬಿದ್ದ ಕಾಲದಿಂದ ಏನು ಮಾಡಬೇಕೆಂದಿದ್ದನೋ ಅದನ್ನು ಥಾಮಸ ಪೇಯ್ನ್ ನಂಥಹ ಮಾನವರ ಮೂಲಕ ಸಾಧಿಸಿಕೊಳ್ಳುತ್ತಿದ್ದಾನೆ ಅವನು ತನ್ನ ಬಲಶಕ್ತಿಯಿಂದ ಕಪಟ ಅದ್ಬುತಗಳಿಂದ ಕ್ರೈಸ್ತರ ನಿರೀಕ್ಷೆಯ ಬುನಾದಿಯನ್ನು ಕೆಡವುತ್ತಿದ್ದಾನೆ. ಪರಲೋಕಕ್ಕೆ ನಡೆಸುವ ಇಕ್ಕಟ್ಟಾದ ಮಾರ್ಗದಲ್ಲಿನ ಸೂರ್ಯನಬೆಳಕನ್ನು ಆರಿಸುತ್ತಿದ್ದಾನೆ. ಸತ್ಯವೇದವು ಒಂದು ಕಥಾಪುಸ್ತ ಕವೇ ಹೊರೆತು ಮಿಗಿಲಾದುದಲ್ಲ ಎಂದು ಪ್ರಮಾಣೀಕರಿಸುತ್ತಾ ಆದರ ಜಾಗದಲ್ಲಿ ಮತ್ತೊಂದನ್ನು ಪ್ರತಿಷ್ಠಾಪಿಸಿದ್ದಾನೆ. ಅದುವೇ ಆತ್ಮಿಕ ಪ್ರಕಟಣೆಗಳು ಸೈತಾನಿಗೆ ಕಾರ್ಯನಿರ್ವಹಿಸುವ ವಹನ ಸಾಧನವಾಗಿ ಹಿಡಿತದಲ್ಲಿದ್ದು ಅವನು ಬಯಸಿದ ಹಾಗೆ ಲೋಕವು ನಂಬುವಂತೆ ಮಾಡುವನ್ನು ಅವನನ್ನೂ ಅವನ ದೂತರನ್ನೂ ವಿಚಾರಣೆಗೊಳಪಡಿಸುವ ಪುಸ್ತಕವನ್ನು ತನ್ನ ಇಷ್ಟಾನುಸಾರ ಕತ್ತಲಿನ ಮೂಲೆಗೆ ಒತ್ತರಿಸಿದ್ದಾನೆ. ಈಲೋಕದ ರಕ್ಷಕನನ್ನು ಒಬ್ಬ ಸಮಾನ್ಯ ವ್ಯಕ್ತಿಯಾಗಿ ಮಾಡುವನು; ಯೇಸುವಿನ ಸಮಾಧಿಯನ್ನು ಕಾಯುತ್ತಿದ್ದ ರೋಮನ್ ಕಾವಲುಗಾರನನ್ನು ಮಹಾಯಾಜಕರು, ಹಿರಿಯರು ಪ್ರಲೋಭನೆಗೊಳಗಾಗಿಸಿ ಅಸತ್ಯವನ್ನು ಜಾಹೀರುಗೊಳಿಸಿದಂತೆ ಈ ಆತ್ಮೀಕ ಪ್ರಕಟಣೆ [Manifestation] ಯಶಿಷ್ಯರಾದ ವಂಚಕರು ನಮ್ಮ ರಕ್ಷಕನ ಜನನ, ಮರಣ ಮತ್ತು ಪುನರುತ್ಥಾನದಲ್ಲಿ ಯಾವ ಅದ್ಬುತವೂ ಅಡಕವಾಗಿಲ್ಲ ಎಂದು ತೋರ್ಪಡಿಸುವ ಕಾರ್ಯ ಮಾಡುತ್ತಾರೆ. ಜನರು ಯೇಸುಮತ್ತು ಸತ್ಯವೇದವನ್ನು ತಮಗೆ ಬೇಕಾದಂತೆ ಕತ್ತಲೆಗೆ ದೂಡಿ, ಲೋಕವು ತಮ್ಮ ಸುಳ್ಳು ಅದ್ಬುತಕಾರ್ಯ, ಸೂಚಕಕಾರ್ಯಗಳನ್ನು ದೃಷ್ಟಿಸುವಂತೆ ಮಾಡುತ್ತಾರೆ, ಅವು ಕ್ರಿಸ್ತನ ಕಾರ್ಯಗಳಿಗಿಂತ ಮಿಗಿಲಾದುದೆಂದು ಹೇಳುತ್ತಾರೆ, ಹೀಗೆ ಲೋಕವು ಪಾಶಕ್ಕೆ ಸಿಲುಕಿಸಲ್ಪಟ್ಟು ಮಂಕಾಗುತ್ತದೆ; ಅವರು ಕೊನೆಯ ಏಳು ಉಪದ್ರವಗಳು ಮುಗಿಯುವರೆವಿಗೂ ವಂಚನೆಯು ಬಯಲಾಗದ ಹಾಗೆ ತಟಸ್ಥಗೊಳಿಸುವರು ಇಡೀ ಪ್ರಪಂಚವೇ ತನ್ನ ಬಲೆಗೆ ಸಿಲುಕಿದ್ದು ಯೋಜನೆಗಳಲ್ಲಾ ಸಮರ್ಥವಾಗಿ ಫಲನೀಡುವಂತಾಗುವುದನ್ನು ಕಂಡು ಅವನು ನಗುವನು. GCKn 241.1
ಓದಿ: ಪ್ರಸಂಗಿ 9:5; ಯೋಹಾನ 11:1-45; 2ಥೆಸಲೋನಿಕ; 2:9-12; ಪ್ರಕಟನೆ 13:3-14 GCKn 243.1