Go to full page →

ಅಧ್ಯಾಯ 41. - ಎರಡನೆಯ ಮರಣ GCKn 296

ಸೈತಾನನು ಸಮೂಹದ ಮದ್ಯೆ ಬಿರುಸಾಗಿ ಬಂದು ಕಾರ್ಯಸಾಧಿಸಲು ಜನರನ್ನು ಕೆಣಕುವನು. ಆದರೆ ಪರಲೋಕದ ದೇವರಿಂದ ಬಿಂಕಿಯು ಮಳೆಯೋಪಧಿಯಲ್ಲಿ ಇಳಿದು ಬಂದು ಮಹಾವ್ಯಕ್ತಿಗಳು, ಬಲಿಷ್ಟರು, ಶ್ರೇಷ್ಠರೆನಿಸಿದವರು, ಬಡವರು, ಸಂಕಟಪಡಿತ್ತಿದ್ದವರೆಲ್ಲರನ್ನು ಸುಟ್ಟುಹಾಕಿತು. ನಾನು ನೋಡಿದ್ದೇನೆಂದರೆ, ಕೆಲವರು ಬಹು ಬೇಗನೆ ನಾಶವಾದರೆ ಮತ್ತೆ ಕೆಲವರು ಬಹುಕಾಲ ನರಳುತ್ತಿದ್ದರು ಅವರವರ ಕ್ರಿಯೆಗಳಿಗನುಸಾರವಾಗಿ ಶಿಕ್ಷಿಸಲ್ಪಟ್ಟವರು. ಕೆಲವರಿಗೆ, ಅವರ ದಹಿಸಲ್ಪಡದ ಕೆಲವು ಅಂಗಾಂಗಗಳಿರುವವರೆವಿಗೂ ಎಲ್ಲಾ ವಿಧವಾದ ಯಾತನೆಯ ಅರಿವು ಅವರಿಗಿರುವುದು, ಆಗ ದೇವದೂತನು, ಅವರನ್ನು ಕಡಿಯುವ ಹುಳವು ಸಾಯುವುದಿಲ್ಲ; ಅವರೆ ದೇಹದ ಕಣವೊಂದು ಇರುವ ತನಕವೂ ಸುಡುವ ಬೆಂಕಿಯು ಆರುವುದಿಲ್ಲ ಎಂದನು. GCKn 296.1

ಸೈತಾನನೂ ಆತನ ದೂತರು ಬಹುಕಾಲ ಯಾತನೆಪಟ್ಟರು. ತನ್ನ ಪಾಪದ ಭಾರವನ್ನಲ್ಲದೆ, ವಿಮೋಚನೆಗೊಂಡು ಗುಂಪಿನ ಪಾಪವೂ ಸೈತಾನನ ಮೇಲೆ ಹೊರಿಸಲ್ಪಟ್ಟವು; ತಾನೇ ಹಾಳುಮಾಡಿದ ಆತ್ಮಗಳಿಗಾಗಿಯೂ ಅವನು ಸಂಕಟಪಡಬೇಕು. ಆನಂತರವೇ ಸೈತಾನನೂ, ಎಲ್ಲಾ ದುಷ್ಟಗನಗಳೂ ದಹಿಸಿಹೋದದ್ದನ್ನು ನಾನು ಕಂಡೆನು. ದೇವರ ನ್ಯಾಯವು ತೃಪ್ತವಾಯಿತು; ಮತ್ತು ಎಲ್ಲಾ ವಿಮೋಚಿಸಲ್ಪಟ್ಟ ಭಕ್ತರು, ದೂತಗಣಗಳೂ ಉನ್ನತ ಸ್ವರದಿಂದ ಆಮೇನ್! ಎಂದರು. GCKn 296.2

ನಂತರ ದೂತನು, ಸೈತಾನನು ಬೇರು; ಆತನ ಮಕ್ಕಳು, ಕೊಂಬೆಗಳು, ಬೇರು ಕೊಂಬೆಗಳು ಈಗ ಸುಟ್ಟುಹೋದವು. ಅವರು ನಿತ್ಯಮರಣಕ್ಕೆ ಒಳಗಾದರು ಅವರಿಗೆ ಇನ್ನೊಂದೂ ಪುನರುತ್ಥಾನವಿಲ್ಲ, ದೇವರು ಪರಿಶುಭ್ರ ವಿಶ್ವವನ್ನು ಹೊಂದಿರುವನು ಎಂದನು. ಅನಂತರ ದುಷ್ಟರನ್ನು ದಹಿಸುವ ಬೆಂಕಿಯು ಹೊಲಸನ್ನೆಲ್ಲಾ ಸುಟ್ಟು ಭೂಮಿಯನ್ನು ಪರಿಶುಭ್ರಗೊಳಿಸಿದ್ದನ್ನು ನಾನು ದೃಷ್ಟಿಸಿದೆನು. ಎಲ್ಲೂ ಶಾಪಗ್ರಸ್ತವಾದ ಒಂದು ಸೋಂಕಾದರೂ ಇರಲಿಲ್ಲ. ಭೂಮಿಯ ಮೇಲಿಂದ ಬಿರುಕು. ಏರುತಗ್ಗುಗಲೆಲ್ಲಾ ಸಮವಾಗಿ ವಿಶಾಲವಾದ ಬಯಲಿನಂತೆ ಕಂಡರೆ, ಭೂಮ್ಯಾಕಾಶ ಮಂಡಲವು ಪರಿಶುಶದ್ಧವಾಗಿ ಮಹಾ ವಾದವಿವಾದಗಳು ನಿರಂತರವಾಗಿ ಕೊನೆಗೊಂಡಿತು. ನನ್ನ ಕಣ್ಣುಗಳು ಹಾಯ್ದಕಡೆಯಲ್ಲೆಲ್ಲಾ ಪವಿತ್ರವೋ ಪವಿತ್ರವಾಗಿ ರಮ್ಯವಾಗಿ ಕಂಡಿತು. ಎಲ್ಲಾ ವಿಮೋಚನ ಗಣಗಳು, ಹಿರಿಕಿರಿಯರೂ, ವೃದ್ಧರು, ಯುವಜನರೂ, ತಮ್ಮ ಥಳಥಳನೆ ಹೊಳೆಯುತ್ತಿದ್ದ ಕಿರೀಟಗಳನ್ನು ಅವರ ವಿಮೋಚಕನ ಪಾದದ ಬಳಿಯಲ್ಲಿ ಇಟ್ಟು ಭಕ್ತಿಪೂರ್ವಕವಾಗಿ ಸಾಷ್ಟಾಂಗವೆರಗಿ ನಿರಂತರವಾಗಿ ಇರುವಾತನನ್ನು ಆರಾಧಿಸಿದರು. ಬಹು ರಮ್ಯವಾದ ನೂತನ ಭೂಮಂಡಲವು ಮಹಾಮಹಿಮೆಯಿಂದ ಭಕ್ತರ ನಿತ್ಯ ಪಿತ್ರಾರ್ಜಿತ ಸೊತ್ತಾದವು. ಆಗ ಅವರ ರಾಜ್ಯಪ್ರಭುತ್ವಗಳೂ, ಸಮಸ್ತ ಭೂಮಂಡಲದಲ್ಲಿನ ರಾಜ್ಯಗಳ ಮಹಿಮೆಯು ಉನ್ನತೋನ್ನತನ ಭಕ್ತರಿಗೆ ಕೊಡಲ್ಪಡುವವು. ಅವರು ಶಾಶ್ವತವಾಗಿ ಈ ರಾಜ್ಯವನ್ನು ಪಡೆದುಕೊಳ್ಳುವರು. GCKn 297.1

ಓದಿ: ಯೆಶಾಯ 66:24; ದಾನಿಯೇಲ7:26-27 ಪ್ರಕಟನೆ 20:9-15; 21:1 22:3 GCKn 298.1