Go to full page →

ಅಡ್ವೆಂಟಿಸ್ಟರಲ್ಲದವರಲ್ಲಿ ಹೆಚ್ಚಿನವರು ಎಚ್ಚರಿಕೆಯನ್ನು ತಿರಸ್ಕರಿಸುವರು ಕೊಕಾಘ 121

ಮೂರನೇ ದೂತನ ವರ್ತಮಾನವನ್ನು ಕೇಳಿದವರಲ್ಲಿ ಅತಿ ಹೆಚ್ಚಿನ ಜನರು ಗಂಭೀರವಾದ ಈ ಸಂದೇಶವನ್ನು ತಿರಸ್ಕರಿಸುವರು. ಗುಣಸ್ವಭಾವದ ಪರೀಕ್ಷೆಯಾದ ದೇವರಾಜ್ಞೆಗಳಿಗೆ ನಿಷ್ಠೆ ತೋರಿಸುವುದಿಲ್ಲ. ದೇವರ ಸೇವಕರನ್ನು ಕಲ್ಪನಾ ಪ್ರಪಂಚದಲ್ಲಿರುವ ಉತ್ಸಾಹಿಗಳೆಂದು ಜನರು ಕರೆಯುವರು. ಬೋಧಕರು ಇವರ ಸಂದೇಶ ಕೇಳಬೇಡಿರೆಂದು ಜನರಿಗೆ ಎಚ್ಚರಿಸುವರು. ಜನರು ಕೇಳಲಿ ಅಥವಾ ಕೇಳದಿರಲಿ ದೇವರಾತ್ಮನು ಮೊಹನಿಗೆ ಸಂದೇಶ ಕೊಡಬೇಕೆಂದು ಒತ್ತಾಯಿಸಿದಾಗ, ಅವನನೂ ಸಹ ಜನರು ಕಲ್ಪನಾ ಪ್ರಪಂಚದಲ್ಲಿ ತೇಲುತ್ತಿರುವ ಮುದುಕನೆಂದು ಅಪಹಾಸ್ಯ ಮಾಡಿದರು (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್ 233, 1895). ಕೊಕಾಘ 121.4

ಕೆಲವರು ಮಾತ್ರ ಎಚ್ಚರಿಕೆಯ ಈ ಸಂದೇಶಕ್ಕೆ ಕಿವಿಗೊಡುವರು, ಆದರೆ ಅಧಿಕ ಸಂಖ್ಯೆಯ ಜನರು ಅದನ್ನು ತಿರಸ್ಕರಿಸುವರು (ಇನ್ ಹೆವೆನ್ಲಿ ಫೇಸಸ್‌, 343, 1897). ಕೊಕಾಘ 122.1

ಜನರ ಕಿವಿಗೆ ಮೆಚ್ಚುಗೆಯಾಗುವಂತ ಸಂದೇಶ ಕೊಡುವ ಜನಪ್ರಿಯ ಬೋಧಕರು ಫರಿಸಾಯರಂತೆ, ತಮ್ಮ ಅಧಿಕಾರವನ್ನು ಪ್ರಶ್ನಿಸುತ್ತಾರೆಂದು ದೇವರ ಸೇವಕರ ಮೇಲೆ ರೋಷಗೊಳ್ಳುವರು. ಅಲ್ಲದೆ ಈ ಎಚ್ಚರಿಕೆಯ ಸಂದೇಶವು ಸೈತಾನನಿಂದ ಬಂದದ್ದೆಂದು ತಿರಸ್ಕರಿಸಿ, ಪಾಪವನ್ನು ಪ್ರೀತಿಸುವ ಜನರನ್ನು ಹುರಿದುಂಬಿಸಿ ದೇವರ ಸೇವಕರನ್ನು ನಿಂದಿಸಿ ಅವರಿಗೆ ಹಿಂಸೆ ಕೊಡುವಂತೆ ಪ್ರಚೋದಿಸುವರು (ಗ್ರೇಟ್ ಕಾಂಟ್ರೊವರ್ಸಿ 607, 1911). ಕೊಕಾಘ 122.2