Go to full page →

ಈಗ ಮುದ್ರೆ ಒತ್ತುವ ಸಮಯ ಕೊಕಾಘ 129

ಯೇಸುಕ್ರಿಸ್ತನು ಪರಿಶುದ್ಧ ಸ್ಥಳದಲ್ಲಿ ತನ್ನ ಯಾಜಕ ಸೇವೆ ಮುಗಿಸಿ ಮಹಾಪರಿಶುದ್ಧ ಸ್ಥಳಕ್ಕೆ ಹೋಗುವವರೆಗೆ ಸಬ್ಬತ್ತಿನ ಪರೀಕ್ಷೆಯು ಬರುವುದಿಲ್ಲವೆಂದು ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿ ದೇವರು ತಿಳಿಸಿದನು. ಆದುದರಿಂದ 1844ನೇ ಇಸವಿ ಏಳನೇ ತಿಂಗಳಿನಲ್ಲಿ ಮೂರು ದೂತರ ವರ್ತಮಾನವು ಮುಕ್ತಾಯವಾದಾಗ, ನಿಜವಾದ ಏಳನೇ ದಿನದ ಸಬ್ಬತ್ತನ್ನು ಕೈಕೊಂಡು ನಡೆಯದೆ, ಕ್ರಿಸ್ತನಲ್ಲಿ ನಿದ್ದೆ ಹೋಗಿರುವ ಕ್ರೈಸ್ತರು ಪುನರುತ್ಥಾನದ ನಿರೀಕ್ಷೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಮಹಾಪರಿಶುದ್ಧ ಸ್ಥಳದಲ್ಲಿ ಕ್ರಿಸ್ತನು 1844ನೇ ಇಸವಿಯಲ್ಲಿ ತನ್ನ ಮಹಾಯಾಜಕ ಸೇವೆ ಆರಂಭಿಸಿದ ನಂತರ ನಮಗೆ ಕೊಡಲಟ್ಟಿರುವ ಸತ್ಯದ ಬೆಳಕು ಅವರಿಗೆ ಕೊಡಲ್ಪಟ್ಟಿರಲಿಲ್ಲ ಹಾಗೂ ಅವರು ಸಬ್ಬತಿನ ಪರೀಕ್ಷೆ ಎದುರಿಸಲಿಲ್ಲ. ಈ ವಿಷಯದ ಬಗ್ಗೆ ಸೈತಾನನು ದೇವಜನರಲ್ಲಿ ಕೆಲವರನ್ನು ಶೋಧನೆಗೊಳಿಸುತ್ತಿರುವುದನ್ನು ಶ್ರೀಮತಿ ವೈಟಮ್ಮನವರು ದರ್ಶನದಲ್ಲಿ ಕಂಡರು, ಉತ್ತಮವಾದ ಅನೇಕ ಕ್ರೈಸ್ತರು ನಂಬಿಕೆಯಲ್ಲಿ ಜಯಹೊಂದಿ ಕ್ರಿಸ್ತನಲ್ಲಿ ನಿದ್ದೆ ಹೋಗಿದ್ದಾರೆ. ಆದರೆ ಏಳನೇದಿನದ ನಿಜ ಸಬ್ಬತ್ತನ್ನು ಕೈಕೊಂಡು ನಡೆದಿಲ್ಲ. ಈ ಕಾರಣದಿಂದ ದೇವಜನರಲ್ಲಿ ಅನೇಕರು ಈಗ ಇದು ನಮಗೆ ನಿಷ್ಠೆಯ ಒಂದು ಪರೀಕ್ಷೆಯಾಗಿದೆಯೇ ಎಂದು ಸಂದೇಹ ತೋರುವರು.... ಕೊಕಾಘ 129.2

ದೇವರ ಮುದ್ರೆಯು ಒತ್ತಲ್ಪಡುವ ಈ ಸಮಯದಲ್ಲಿ ದೇವರ ಮಕ್ಕಳು ಸತ್ಯದಿಂದ ವಿಮುಖರಾಗಿ ಚಂಚಲ ಮನಸ್ಸು ಹೊಂದುವಂತೆ ಮಾಡಲು ಸೈತಾನನು ಈಗ ಪ್ರತಿಯೊಂದು ತಂತ್ರವನ್ನು ಉಪಯೋಗಿಸುತ್ತಿದ್ದಾನೆ (ಅರ್ಲಿ ರೈಟಿಂಗ್ಸ್, ಪುಟಗಳು 42, 43, 1851). ಕೊಕಾಘ 129.3

ಶ್ರೀಮತಿ ವೈಟಮ್ಮನವರು ದರ್ಶನದಲ್ಲಿ ಶ್ರೀಮತಿ ಹೇಸ್ಟಿಂಗ್ಸ್ ಎಂಬ ಮಹಿಳೆಗೆ ದೇವರ ಮುದ್ರೆ ಹಾಕಲ್ಪಟ್ಟು, ಕ್ರಿಸ್ತನ ಎರಡನೇ ಬರೋಣದಲ್ಲಿ ಎದ್ದು ಬರುವುದನ್ನು ಹಾಗೂ ಆಕೆ 1,44000 ಜನರೊಂದಿಗೆ ಇರುವುದನ್ನು ಕಂಡರು, ಆಕೆಯ ಮರಣಕ್ಕೋಸ್ಕರ ದುಃಖಿಸಬಾರದು, ಕಷ್ಟ ಸಂಕಟದ ಸಮಯದಲ್ಲಿ ಆಕೆಯು ವಿಶ್ರಮಿಸಿಕೊಳ್ಳುತ್ತಾರೆಂದೂ ಸಹ ಶ್ರೀಮತಿ ವೈಟಮ್ಮನವರು ನೋಡಿದರು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 2, ಪುಟ 263, 1850) ಕೊಕಾಘ 129.4

90 ವರ್ಷ ದಾಟಿದ ಅನೇಕರು ಲೋಕದಲ್ಲಿ ಈಗ ಜೀವಿಸುತ್ತಿದ್ದಾರೆ. ವಯಸ್ಸಿಗೆ ಸಹಜವಾದ ರೀತಿಯಲ್ಲಿ ಅವರಲ್ಲಿ ದುರ್ಬಲತೆ ಕಂಡುಬರುತ್ತಿದೆ. ಆದರೆ ಅವರು ದೇವರನ್ನು ನಂಬಿದವರು ಹಾಗೂ ದೇವರು ಅವರನ್ನು ಪ್ರೀತಿಸುವನು. ದೇವರ ಮುದ್ರೆಯು ಅವರ ಮೇಲೆ ಹಾಕಲ್ಪಟ್ಟಿದೆ. ಕರ್ತನ ಭಕ್ತರಾಗಿ ಸಾಯುವವರು ಧನ್ಯರು ಎಂದು ಆತನು ಹೇಳುವ ಜನರ ಗುಂಪಿನಲ್ಲಿ ಅವರು ಇರುವರು. (ಬೈಬಲ್ ವ್ಯಾಖ್ಯಾನ ಸಂಪುಟ 7, ಪುಟ 982, 1899). ಕೊಕಾಘ 129.5