Go to full page →

ಅಧ್ಯಾಯ-3
ಈ ಘಟನೆ ಯಾವಾಗ ಸಂಭವಿಸುವುದು? ಕೊಕಾಘ 18

ಶಿಷ್ಯರು ಕ್ರಿಸ್ತನ ಎರಡನೇ ಬರೋಣದ ಬಗ್ಗೆ ಕೇಳಿದರು ಕೊಕಾಘ 18

ಯೆರೂಸಲೇಮಿನ ನಾಶ ಮತ್ತು ತನ್ನ ಎರಡನೇ ಬರೋಣದ ಮೊದಲು ನಡೆಯುವ ಘಟನೆಗಳನ್ನು ಬಹಳ ಜನರ ಮುಂದೆ ಕ್ರಿಸ್ತನು ತಿಳಿಸಿದನು (ಮತ್ತಾಯ 24:2). ಆದರೆ ಆತನು ಎಣ್ಣೆಮರಗಳಗುಡ್ಡದ ಮೇಲೆ ಕೂತಿದ್ದಾಗ, ಪೇತ್ರ, ಯೋಹಾನ, ಯಾಕೋಬ ಹಾಗೂ ಅಂಧ್ರೇಯನು ಆತನನ್ನು ಅದು ಯಾವಾಗ ಆಗುವುದು? ನೀನು ಪ್ರತ್ಯಕ್ಷನಾಗುವುದಕ್ಕೂ, ಯುಗದ ಸಮಾಪ್ತಿಗೂ ಸೂಚನೆ ಏನು? ನಮಗೆ ಹೇಳು ಎಂದು ಕೇಳಿದರು. ಕೊಕಾಘ 18.1

ಯೇಸುಕ್ರಿಸ್ತನು ತನ್ನ ಶಿಷ್ಯರಿಗೆ ಯೆರೂಸಲೇಮಿನ ನಾಶ ಹಾಗೂ ತನ್ನ ಬರೋಣದ ಮಹಾದಿನದ ಬಗ್ಗೆ ಪ್ರತ್ಯೇಕವಾಗಿ ಉತ್ತರಿಸಲಿಲ್ಲ. ಇವೆರಡೂ ಘಟನೆಗಳ ವಿವರಣೆಗಳನ್ನು ಆತನು ಒಟ್ಟಾಗಿ ತಿಳಿಸಿದನು. ಮುಂದೆ ನಡೆಯಲಿರುವ ಘಟನೆಗಳನ್ನು ಅವರಿಗೆ ತಿಳಿಸಿದಲ್ಲಿ ಅದನ್ನು ತಾಳಿಕೊಳ್ಳಲು ಶಿಷ್ಯರಿಗೆ ಆಗುತ್ತಿರಲಿಲ್ಲ, ಅವರ ಮೇಲಣ ಅನುಕಂಪದಿಂದಲೇ ಕ್ರಿಸ್ತನು ಇವೆರಡೂ ಮಹಾಸಂಕಟಗಳ ವಿವರಣೆಗಳನ್ನು ಒಂದಾಗಿ ವಿವರಿಸಿ ಅವುಗಳ ಅರ್ಥವನ್ನು ಶಿಷ್ಯರೇ ಅಧ್ಯಯನ ಮಾಡುವಂತೆ ಅವಕಾಶ ನೀಡಿದನು (ದಿ ಡಿಸೈರ್ ಆಫ್ ಏಜಸ್, ಪುಟ 628 (1898), ಕೊಕಾಘ 18.2