Go to full page →

ಅಪನಂಬಿಕೆ ಮತ್ತು ನಿಶೇಧಿತವಾದ ಇಂದ್ರಿಯಭೋಗ ಮುಂದುವರಿಯುವುದು ಕೊಕಾಘ 135

ಕ್ರೈಸ್ತಧರ್ಮದ ಸಿದ್ಧಾಂತಗಳನ್ನು ಸಂದೇಹಿಸುವ ಸಿನಿಕತನವು (Scepticism) ವಿಜ್ಞಾನವೆಂದು ಪರಿಗಣಿಸಲ್ಪಡುವುದು. ಕ್ರೈಸ್ತ ಜಗತ್ತು ಸತ್ಯವೇದದಲ್ಲಿ ನಂಬಿಕೆ ಕಳೆದುಕೊಳ್ಳುವುದಕ್ಕೆ ಇದು ಬಹಳ ಪ್ರಮುಖ ಕಾರಣವಾಗಿದೆ. ಅವರು ದೈವಜ್ಞಾನ ಪಡೆದುಕೊಳ್ಳಲು ಅಥವಾ ದೇವರ ನ್ಯಾಯತೀರ್ಪು ಬರುವುದೆಂಬ ಎಚ್ಚರಿಕೆಯನ್ನು ತಿರಸ್ಕರಿಸಿ ಇಂದ್ರಿಯ ಭೋಗಗಳಲ್ಲಿ ತೃಪ್ತಿಪಡುವುದಕ್ಕೆ ಪ್ರಯತ್ನಿಸುತ್ತಾರೆ. ಈ ಕಾರಣದಿಂದ ಯಾವುದೇ ತಪ್ಪುಗಳು ಮತ್ತು ಆಧಾರವಿಲ್ಲದ ಕಟ್ಟು ಕತೆಗಳನ್ನು ಅವರು ಸಂತೋಷದಿಂದ ಒಪ್ಪಿಕೊಳ್ಳುತ್ತಾರೆ. ನಾಳೆಯೂ ಸಹ ಇಂದಿನಂತೆಯೇ ಇದ್ದು ಬಹಳ ಸಮೃದ್ಧಿಯಿಂದ ಕೂಡಿರುತ್ತದೆಂದು ಅಂದುಕೊಳ್ಳುತ್ತಾರೆ. ಆದರೆ ಅವರ ಅಪನಂಬಿಕೆ ಮತ್ತು ಭಕ್ತಿಹೀನವಾದ ಇಂದ್ರಿಯಸುಖಗಳು ಮುಂದುವರಿಯುತ್ತಿರುವಾಗಲೇ, ಪ್ರಧಾನಮೂತನ ಶಬ್ದ ಹಾಗೂ ದೇವರ ತುತ್ತೂರಿಧ್ವನಿಯು ಕೇಳಿಬರುವುದು... ನಮ್ಮ ಲೋಕದಲ್ಲಿ ಎಲ್ಲರೂ ಸಹ ಸ್ವಸುಖ ಸಂತೋಷದಲ್ಲಿ, ಇಂದ್ರಿಯ ಭೋಗದಲ್ಲಿ ಮುಳುಗಿರುವಾಗ, ಲಾಭಕ್ಕಾಗಿ ಸ್ವಾರ್ಥಿಗಳಾಗಿರುವಾಗ ಯೇಸುಸ್ವಾಮಿ ಕಳ್ಳನಂತೆ ಬರುವನು’. ಕೊಕಾಘ 135.1

ದೇವರ ಮಕ್ಕಳೆಂದು ಹೇಳಿಕೊಳ್ಳುವವರು ಈ ಲೋಕದ ಜನರೊಂದಿಗೆ ಸೇರಿ, ಅವರಂತೆಯೇ ಜೀವಿಸುತ್ತಾ, ಮಾಡಬಾರದಂತ ಲೌಕಿಕ ಸುಖಸಂತೋಷದಲ್ಲಿ ಸೇರಿಕೊಂಡಾಗ, ಲೋಕದ ಸುಖಭೋಗ, ವಿಲಾಸಜೀವನವನ್ನು ಸಭೆಯು ಅನುಸರಿಸುವಾಗ, ಮದುವೆ ಮಾಡಿಕೊಳ್ಳುವುದು, ಮದುವೆ ಮಾಡಿಕೊಡುವುದು ನಡೆಯುತ್ತಿರುವಾಗ, ಮುಂದೆ ಅನೇಕ ವರ್ಷಗಳ ಲೌಕಿಕ ಸುಖಸಂತೋಷದ ಬಗ್ಗೆ ಎಲ್ಲರೂ ಎದುರು ನೋಡುತ್ತಿರುವಾಗ - ತಕ್ಷಣದಲ್ಲಿಯೇ ಪರಲೋಕದಿಂದ ಬೆಳಕು ಮಿಂಚಿನಂತೆ ಪ್ರಜ್ವಲಿಸಿ ಅವರ ಎಲ್ಲಾ ಭ್ರಮೆಯ ನಿರೀಕ್ಷೆಗಳು ನಾಶವಾಗುವವು (ಗ್ರೇಟ್ ಕಾಂಟ್ರೊವರ್ಸಿ, ಪುಟಗಳು 338, 339). ಕೊಕಾಘ 135.2