Go to full page →

ಐದನೇ ಉಪದ್ರವ ಕೊಕಾಘ 144

ದುಷ್ಟರು ಈ ಎಲ್ಲಾ ಉಪದ್ರವಗಳಿಗೆ ಭಾನುವಾರದ ಸಬ್ಬತ್ತನ್ನು ಆಚರಿಸದೆ, ಸತ್ಯವೇದದಲ್ಲಿ ತಿಳಿಸಿರುವ ವಾರದ ಏಳನೇ ದಿನದ ಸಬ್ಬತ್ತನ್ನು ಕೈಕೊಂಡು ನಡೆಯುವ ಜನರೇ ಕಾರಣರೆಂದು ತಿಳಿದು ಅವರಿಗೆ ಶಾಪಹಾಕುತ್ತಾ ತಿರಸ್ಕಾರದಿಂದ ಮೂದಲಿಸುತ್ತಾ ಅವರನ್ನು ಇನ್ನೇನು ನಾಶಮಾಡಲು ಬರುವರು. ಇಗೋ! ಅಮಾವಾಸ್ಯೆಯ ರಾತ್ರಿಗಿಂತಲೂ ಹೆಚ್ಚಿನ ದಟ್ಟವಾದ ಕಾರ್ಗತ್ತಲು ಲೋಕದಲ್ಲಿ ಉಂಟಾಗುವುದು, ಆಗ ದೇವರ ಸಿಂಹಾಸನದಿಂದ ಮಹಿಮೆಯಿಂದ ಹೊಳೆಯುತ್ತಿರುವ ಮುಗಿಲಬಿಲ್ಲು ಆಕಾಶದಾದ್ಯಂತ ವ್ಯಾಪಿಸಿಕೊಂಡು, ಬಿಡುಗಡೆಗಾಗಿ ಪ್ರಾರ್ಥಿಸುತ್ತಿರುವ ನೀತಿವಂತರ ಪ್ರತಿಯೊಂದು ಗುಂಪನ್ನೂ ಆವರಿಸಿಕೊಂಡಂತೆ ಕಂಡುಬರುವುದು. ನೀತಿವಂತರನ್ನು ನಾಶಮಾಡಬೇಕೆಂದು ಕೋಪದಿಂದ ಉದ್ರಿಕ್ತರಾದ ದುಷ್ಟರ ಗುಂಪು ಇದ್ದಕ್ಕಿದ್ದಂತೆ ದಿಗ್ಭ್ರಮೆಗೊಳ್ಳುವುದು. ಅವರ ಅಪಹಾಸ್ಯ ಮೂದಲಿಕೆ, ನಿಂದನೆಯ ಮಾತುಗಳು ನಿಂತುಹೋಗುವವು. ಅವರ ಉಗ್ರಕೋಪದ ಉದ್ದೇಶಗಳು ಮರೆತುಹೋಗುವವು. ಹೆದರಿಕೆ ಹುಟ್ಟಿಸುವಂತ ಕೇಡಿನ ಮುನ್ಸೂಚನೆಯಾದ ದೇವರ ಒಡಂಬಡಿಕೆಯ ಸಂಕೇತವಾದ ಮುಗಿಲಬಿಲ್ಲನ್ನು ಈ ದುಷ್ಟರು ಭಯದಿಂದ ದಿಟ್ಟಿಸಿ ನೋಡುತ್ತಾ ಅದರ ಹೊಳಪಿನಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸುವರು. ಕೊಕಾಘ 144.1

ಮಧ್ಯರಾತ್ರಿಯಲ್ಲಿ ದೇವರು ತನ್ನ ಜನರನ್ನು ಬಿಡುಗಡೆಗೊಳಿಸಲು ತನ್ನ ಪ್ರತಾಪಯುಕ್ತವಾದ ಬಲವನ್ನು ತೋರಿಸುವನು. ಆ ಸಮಯದಲ್ಲಿ ಸೂರ್ಯನು ಕಾಣಿಸಿಕೊಂಡು, ಪೂರ್ಣಬಲದಿಂದ ಮಧ್ಯಾಹ್ನದಂತೆ ಪ್ರಕಾಶಿಸುವನು ಆಕಾಶದಲ್ಲಿ ಗುರುತುಗಳು ಹಾಗೂ ಅದ್ಭುತಗಳು ಒಂದರ ಹಿಂದೆ ಒಂದರಂತೆ ತಕ್ಷಣದಲ್ಲಿಯೇ ಕಂಡುಬರುವವು, ದುಷ್ಟರು ಇವೆಲ್ಲಾ ದೃಶ್ಯಗಳನ್ನು ಭಯ ಹಾಗೂ ದಿಗ್ಭ್ರಮೆಯಿಂದ ನೋಡುತ್ತಿದ್ದರೆ, ನೀತಿವಂತರು ತಮ್ಮ ಬಿಡುಗಡೆ ಹತ್ತಿರವಾಯಿತೆಂದು ಅದ್ಭುತಗಳು ಹಾಗೂ ಗುರುತುಗಳನ್ನು ಗಂಭೀರವಾದ ಹರ್ಷದಿಂದ ನೋಡುವರು (ಗ್ರೇಟ್ ಕಾಂಟ್ರೊವರ್ಸಿ, 635, 636). ಕೊಕಾಘ 144.2