Go to full page →

ಸಮಸ್ತ ಲೋಕವೇ ಒಳ್ಳೆಯ ಅಥವಾ ದುಷ್ಟಶಕ್ತಿಗಳ ಪರವಾಗಿರುವುದು ಕೊಕಾಘ 146

ಹರ್ಮೆಗೆದ್ದೋನ್ ಯುದ್ಧವು ನಡೆಯುವುದು. ಸಮಸ್ತ ಲೋಕದ ಜನರೆಲ್ಲರೂ ಕ್ರಿಸ್ತನ ಅಥವಾ ಸೈತಾನನ ಜೊತೆಯಲ್ಲಿರುವರು. ಆ ದಿನದಲ್ಲಿ ಯಾರೂ ನಿದ್ರಿಸುವುದಿಲ್ಲ. ಬುದ್ದಿವಂತ ಕನ್ಯೆಯರು ತಮ್ಮ ಆರತಿಗಳೊಂದಿಗೆ ಎಣ್ಣೆಯನ್ನು ತೆಗೆದುಕೊಂಡು ಎಚ್ಚರವಾಗಿದ್ದಂತೆ, ನಾವೂ ಸಹ ಎಚ್ಚರದಿಂದಿರಬೇಕು. ಪರಿಶುದ್ದಾತ್ಮನ ಬಲವು ನಮ ಮೇಲಿರಬೇಕು. ಕರ್ತನ ಸೈನ್ಯದ ಸೇನಾಧೀಶ್ವರನಾದ ಕ್ರಿಸ್ತನು ಪರಲೋಕದ ದೇವದೂತರ ನಾಯಕನಾಗಿದು. ಈ ಮಹಾ ಹೋರಾಟದಲ್ಲಿ ಮಾರ್ಗದರ್ಶನ ನೀಡುವನು. ಕೊಕಾಘ 146.5

ಒಳ್ಳೇದರ ಮೇಲೆ ಸೈತಾನನಿಗಿರುವ ಶತ್ರುತ್ವ ಹಾಗೂ ದ್ವೇಷವು ಹೆಚ್ಚೆಚ್ಚಾಗುವುದು. ದೇವರಿಗೆ ಸಂಪೂರ್ಣವಾಗಿ ತಮ್ಮನ್ನು ಒಪ್ಪಿಸಿಕೊಡದಿರುವವರು ಮತ್ತು ದೈವೀಕ ಶಕ್ತಿ ಹೊಂದದಿರುವವರು ಸೈತಾನನೊಂದಿಗೆ ಸೇರಿ ಸಮಸ್ತ ವಿಶ್ವದ ಒಡೆಯನಾದ ಕ್ರಿಸ್ತನ ವಿರುದ್ಧವಾಗಿ ಹೋರಾಡುವರು (ಟೆಸ್ಟಿಮೋನೀಸ್‌ ಟು ಮಿನಿಸ್ಟರ್ಸ್ 465), ಶೀಘ್ರದಲ್ಲಿಯೇ ಈ ಲೋಕದ ಜನರೆಲ್ಲರೂ, ಪರಲೋಕದ ಸರ್ಕಾರದ ಪರವಾಗಿ ಅಥವಾ ವಿರುದ್ಧವಾಗಿ ಸೇರಿಕೊಳ್ಳುವರು (ಟೆಸ್ಟಿಮೊನೀಸ್, ಸಂಪುಟ 7, ಪುಟ 141). ಕೊಕಾಘ 146.6