Go to full page →

ಭಾನುವಾರ ಗೌರವಿಸದವರೆಲ್ಲರಿಗೂ ಮರಣದಂಡನೆ ಕೊಕಾಘ 151

ನೀತಿವಂತರನ್ನು ಕೊಲ್ಲಬೇಕೆಂದು ಶಾಸನವು ಜಾರಿಯಾಗುತ್ತದೆ. ಆಗ ಅವರು ಹಗಲಿರುಳು ತಮ್ಮ ಬಿಡುಗಡೆಗಾಗಿ ದೇವರಿಗೆ ಮೊರೆಯಿಡುವರು (ಅರ್ಲಿ ರೈಟಿಂಗ್ಸ್, 36, 37). ಕೊಕಾಘ 151.1

ಬಾಬೆಲಿನ ಅರಸನಾದ ನೆಬೂಕನ್ನೇಚರನು ತಾನು ನಿಲ್ಲಿಸಿದ ಬಂಗಾರದ ಪ್ರತಿಮೆಗೆ ಯಾರು ನಮಸ್ಕರಿಸುವುದಿಲ್ಲವೋ, ಅವರೆಲ್ಲರೂ ಕೊಲ್ಲಲ್ಪಡಬೇಕೆಂದು ಹೇಗೆ ರಾಜಾಜ್ಞೆ ಹೊರಡಿಸಿದನೋ, ಅದೇ ರೀತಿ ಯಾರು ಭಾನುವಾರಕ್ಕೆ ಗೌರವ ಕೊಡುವುದಿಲ್ಲವೋ, ಅವರೆಲ್ಲರಿಗೂ ಶಕ್ತಿ ನೀಡಿ ಸೆರೆಮನೆಗೆ ಹಾಕುವಂತೆಯೂ, ಮರಣದಂಡನೆ ನೀಡಬೇಕೆಂತಲೂ ಎಲ್ಲಾ ದೇಶಗಳಲ್ಲಿಯೂ ಆಜ್ಞೆ ಜಾರಿಗೆ ಬರುವುದು... (ಎಲ್ಲರೂ ಸಹ ಪ್ರಕಟನೆ 13ನೇ ಅಧ್ಯಾಯವನ್ನು ಎಚ್ಚರಿಕೆಯಿಂದ ಓದಿರಿ). ಕೊಕಾಘ 151.2

ನೀತಿವಂತರಿಗೆ ಇಕ್ಕಟ್ಟಿನ ಕಾಲವು ಇನ್ನೇನು ಬರಲಿದೆ. ಆಗ ಕರ್ತನ ಸಬ್ಬತ್ ದಿನವನ್ನು ಆಚರಿಸಬಾರದೆಂಬ ಶಾಸನವು ಜಾರಿಗೆ ಬರುವುದು. ಅಲ್ಲದೆ ವಾರದ ಮೊದಲನೆ ದಿನವಾದ ಭಾನುವಾರವನ್ನು ಸಲ್ಲತ್ ದಿನವೆಂದು ಆಚರಿಸದಿರುವವರು ಮಾರಲೂ ಬಾರದು ಅಥವಾ ಕೊಂಡುಕೊಳ್ಳಲೂ ಬಾರದು. ಇದನ್ನು ಮೀರಿದಲ್ಲಿ ಅವರಿಗೆ ಶಿಕ್ಷೆ ವಿಧಿಸಬೇಕು, ಅಷ್ಟೇಕೆ, ಮರಣದಂಡನೆ ನೀಡಬೇಕೆಂಬ ಶಾಸನವು ಲೋಕದಲ್ಲಿ ಜಾರಿಗೆ ಬರಲಿದೆ (ಇನ್ ಹೆವೆನ್ಲಿ ಪ್ಲೇಸಸ್‌, 344). ಕೊಕಾಘ 151.3

ದೇವರಾಜ್ಞೆಗಳಿಗೆ ವಿರುದ್ಧವಾಗಿ ಯುದ್ಧ ಮಾಡಲು ಒಂದಾಗುವ ಲೋಕದ ಶಕ್ತಿಗಳು ‘ದೊಡ್ಡವರು ಚಿಕ್ಕವರು, ಐಶ್ವರ್ಯವಂತರು ಬಡವರು, ಸ್ವತಂತ್ರರು, ದಾಸರು. (ಪ್ರಕಟನೆ (13:16). ಇವರೆಲ್ಲರೂ ಸುಳ್ಳು ಸಬ್ಬತ್ ದಿನವಾದ ಭಾನುವಾರವನ್ನು ಆಚರಿಸುವ ಮೂಲಕ ಸಭೆಯ ಸಂಪ್ರದಾಯಗಳನ್ನು ಒಪ್ಪಿಕೊಳ್ಳಬೇಕೆಂಬ ಆಜ್ಞೆಯನ್ನು ಹೊರಡಿಸುತ್ತದೆ. ಇದಕ್ಕೆ ಒಪ್ಪದಿರುವವರು ಕಾನೂನಿನ ಪ್ರಕಾರ ಶಿಕ್ಷೆಗೊಳಗಾಗುವರು ಹಾಗೂ ಅಂತಿಮವಾಗಿ ಅವರು ಮರಣದಂಡನೆಗೆ ಯೋಗ್ಯರೆಂದು ನಿರ್ಧರಿಸಲಾಗುವುದು (ಗ್ರೇಟ್ ಕಾಂಟ್ರೊವರ್ಸಿ, 604). ಕೊಕಾಘ 151.4

ವಿಶೇಷವಾಗಿ ನಾಲ್ಕನೇ ಆಜ್ಞೆಯ ಸಬ್ಬತ್ತನ್ನು ಪರಿಶುದ್ಧವೆಂದು ಎಣಿಸುವವರ ವಿರುದ್ಧವಾಗಿ ಎಲ್ಲರೂ ಉಗ್ರಕೋಪ ವ್ಯಕ್ತಪಡಿಸುವರು ಹಾಗೂ ಇವರು ಮರಣಕ್ಕೆ ಅರ್ಹರೆಂದು ಜಗತ್ತಿನಾದ್ಯಂತ ಶಾಸನ ಜಾರಿಮಾಡಲಾಗುವುದು (ಪ್ರಾಫೆಟ್ಸ್ ಅಂಡ್ ಕಿಂಗ್ಸ್ 512). ಕೊಕಾಘ 151.5