Go to full page →

ಯಾಕೋಬನು ಎದುರಿಸಿದ ಸಂಕಟದ ಸಮಯದಂತೆ ಕೊಕಾಘ 153

ದೇವರ ನಾಲ್ಕನೇ ಆಜ್ಞೆಯ ಸಬ್ಬತ್ತನ್ನು ಪರಿಶುದ್ಧವಾಗಿ ಆಚರಿಸುವವರಿಗೆ ವಿರುದ್ಧವಾಗಿ ಒಂದು ಆಜ್ಞೆಯು ವಿಧಿವತ್ತಾಗಿ ಜಾರಿಗೆ ಬಂದು. ಇವರು ಅತ್ಯಂತ ಕ್ರೂರವಾದ ಶಿಕ್ಷೆಗೆ ಅರ್ಹರೆಂದು ಬಹಿರಂಗವಾಗಿ ಆರೋಪ ಹೊರಿಸಲಾಗುತ್ತದೆ. ಅಲ್ಲದೆ ಒಂದು ನಿಗದಿತ ಸಮಯದಲ್ಲಿ ಅವರನ್ನು ಕೊಲ್ಲಲು ಜನರಿಗೆ ಸ್ವಾತಂತ್ರ್ಯ ಕೊಡಲಾಗುತ್ತದೆ. ಮಧ್ಯಯುಗದಲ್ಲಿ ರೋಮನ್ ಕಥೋಲಿಕ್ ಸಭೆ ಹಾಗೂ ಈಗ ಮತಭ್ರಷ್ಟಗೊಂಡಿರುವ ಪ್ರೊಟೆಸ್ಟೆಂಟ್ ಸಭೆಗಳು ದೈವೀಕ ಆಜ್ಞೆಗಳನ್ನು ಕೈಕೊಂಡು ನಡೆಯುವವರ ವಿರುದ್ಧವಾಗಿ ಇಂತದ್ದೇ ಕ್ರಮಕೈಕೊಳ್ಳುವವು. ಆಗ ದೇವಜನರು ಯಾಕೋಬನು ಎದುರಿಸಿದಂತ ಸಂಕಟದ ಸಮಯವನ್ನು ಎದುರಿಸುವರೆಂದು ಪ್ರವಾದಿಯು ಹೇಳಿದ್ದಾನೆ (ಗ್ರೇಟ್ ಕಾಂಟ್ರೊವರ್ಸಿ 615, 616). ಕೊಕಾಘ 153.5

ಹಿಂದೆ ಕ್ರಿಸ್ತನಿಗಾಗಿ ರಕ್ತಸಾಕ್ಷಿಗಳಾದವರಂತೆ, ದೇವಜನರೂ ಸಹ ಶೀಘ್ರದಲ್ಲಿಯೇ ತಮ್ಮ ಪಾಣಕೊಡಬೇಕಾಗುವುದೆಂದು ಜನರ ದೃಷ್ಟಿಗೆ ಕಂಡುಬರಬಹುದು. ದೇವರು ತಮ್ಮನ್ನು ತ್ಯಜಿಸಿ ನಮ್ಮ ಶತ್ರುಗಳ ಕೈಗೆ ಒಪ್ಪಿಸಿದ್ದಾನೆಂದು ನೀತಿವಂತರು ಭಯಪಡುವರು. ಅದು ಅತ್ಯಂತ ದಿಗಿಲು ಹುಟ್ಟಿಸುವಂತ ವೇದನೆಯಾಗಿದೆ. ಅವರು ಹಗಲಿರುಳು ಬಿಡುಗಡೆಗಾಗಿ ದೇವರಿಗೆ ಮೊರೆಯಿಡುವರು... ಯಾಕೋಬನಂತೆ ನೀತಿವಂತರು ದೇವರೊಂದಿಗೆ ಹೋರಾಡುವರು. ಅವರ ಮನಸ್ಸಿನಲ್ಲಿ ನಡೆಯುತ್ತಿರುವ ಹೋರಾಟವು ಅವರ ಮುಖದಲ್ಲಿ ವ್ಯಕ್ತವಾಗುವುದು. ಎಲ್ಲರ ಮುಖವೂ ಕಳೆಗುಂದಿರುವುದು, ಆದರೂ ಅವರು ದೇವರಿಗೆ ಮೊರೆಯಿಟ್ಟು ಪ್ರಾಮಾಣಿಕವಾಗಿ ಒಬ್ಬರಿಗೊಬ್ಬರು ಪ್ರಾರ್ಥಿಸುವುದನ್ನು ನಿಲ್ಲಿಸುವುದಿಲ್ಲ (ಗ್ರೇಟ್ ಕಾಂಟ್ರೊವರ್ಸಿ 630). ಕೊಕಾಘ 153.6

ಯಶ್ಬೋಕ್ ಹೊಳೆಯ ಬಳಿಯಲ್ಲಿ ಯಾಕೋಬನು ರಾತ್ರಿಯಲ್ಲಿ ವೇದನೆಯಿಂದ ದೇವರೊಡನೆ ಹೋರಾಡಿದ್ದು, ಕ್ರಿಸ್ತನ ಎರಡನೇ ಬರೋಣಕ್ಕೆ ಸ್ವಲ್ಪ ಮೊದಲು ದೇವರ ಮಕ್ಕಳು ಅನುಭವಿಸಬೇಕಾದ ಸಂಕಟದ ಸಮಯವನ್ನು ಸೂಚಿಸುತ್ತದೆ. ಪ್ರವಾದಿಯಾದ ಯೆರೆಮೀಯನು ಇಂತಹ ಸಂಕಟದ ಸಮಯದ ಬಗ್ಗೆ ದಿವ್ಯದರ್ಶನ ಕಂಡು “ಭೀತಿಯಿಂದಾಗುವ ಶಬ್ಧವು ಕೇಳಿಸಿದೆ; ಭಯವೇ ಹೊರತು ಸಮಾಧಾನವಿಲ್ಲ. ಎಲ್ಲರ ಮುಖಗಳು ಬಿಳಿಚಿ ಕೊಂಡಿರುವುದು... ಅಯ್ಯೋ, ಆ ದಿನವು ಘೋರವಾದದ್ದು, ಅದಕ್ಕೆ ಎಣೆಯಿಲ್ಲ, ಅದು ಯಾಕೊಬ್ಯರಿಗೆ ಇಕ್ಕಟ್ಟಿನ ಕಾಲ, ಆದರೆ, ಅದರಿಂದ ಪಾರಾಗುವರು’ ಎಂದು ಹೇಳುತ್ತಾನೆ (ಯೆರೆಮಿಯ 30:5-7) (ಪೇಟ್ರಿಯಾರ್ಕ್ ಅಂಡ್ ಪ್ರಾಫೆಟ್ಸ್ 201). ಕೊಕಾಘ 154.1