Go to full page →

ಕ್ರಿಸ್ತನ ಬರೋಣದ ಸಮಯವನ್ನು ದೇವರು ಬಹಿರಂಗಪಡಿಸುತ್ತಾನೆ ಕೊಕಾಘ 159

ದಟ್ಟವಾದ ಕಪ್ಪು ಮೋಡಗಳು ಒಂದಕ್ಕೊಂದು ಡಿಕ್ಕಿ ಹೊಡೆಯುವವು. ಭೂಮಿಯನ್ನು ಸುತ್ತಿಕೊಂಡಿರುವ ವಾಯುಮಂಡಲವು ವಿಭಾಗಿಸಲ್ಪಡುವುದು. ಆಗ ಮೃಗಶಿರ ನಕ್ಷತ್ರದ ವಿಸ್ತಾರವಾದ ಪ್ರದೇಶದ ಮೂಲಕ ನಾವು ನೋಡಬಹುದು. ಅಲ್ಲಿಂದ ದೇವರ ಸ್ವರವು ಕೇಳಿಬರುವುದು (ಅರ್ಲಿ ರೈಟಿಂಗ್ಸ್, 41). ಕೊಕಾಘ 159.3

ತಕ್ಷಣದಲ್ಲಿಯೇ ಜಲಪ್ರವಾಹದ ಘೋಷದಂತಿರುವ ದೇವರ ಸ್ವರವು ನಮಗೆ ಕೇಳಿಸುವುದು (ಕ್ರಿಸ್ತನು ಬರುವುದಕ್ಕೆ ಮುಂಚೆ ದೇವರ ಮಾತು ಪದೇ ಪದೇ ಕೇಳಿ ಬರುತ್ತಿರುವುದೆಂದು ಶ್ರೀಮತಿ ವೈಟಮ್ಮನವರು ಗ್ರೇಟ್ ಕಾಂಟ್ರೊವರ್ಸಿ ಪುಸ್ತಕದಲ್ಲಿ ತಿಳಿಸಿದ್ದಾರೆ). (ಪುಟಗಳು 632, 633, 636, 638, 640, 641), ಆ ಸ್ವರವು ಕ್ರಿಸ್ತನು ಬರುವ ದಿನ ಹಾಗೂ ಗಳಿಗೆಯನ್ನು ತಿಳಿಸುವುದು, ಜೀವಂತವಿರುವ ದೈವಭಕ್ತರಾದ ಒಂದು ಲಕ್ಷ ನಾಲ್ವತ್ತು ನಾಲ್ಕು ಸಾವಿರ ಮಂದಿ ಅದನ್ನು ತಿಳಿದುಕೊಳ್ಳುವರು. ಆದರೆ ದುಷ್ಟರು ಅದು ಗುಡುಗು ಮತ್ತು ಭೂಕಂಪವೆಂದು ತಿಳಿಯುವರು (ಅರ್ಲಿ ರೈಟಿಂಗ್, 15). ಕೊಕಾಘ 159.4

ದೇವರು ತನ್ನ ಮಗನಾದ ಶಿಸ್ತನ ಬರೊಣದ ದಿನ ಹಾಗೂ ಗಳಿಗೆಯನ್ನು ತಿಳಿಸಿ, ತನ್ನ ಜನರಿಗೆ ಶಾಶ್ವತವಾದ ಒಡಂಬಡಿಕೆಯನ್ನು ವಹಿಸಿಕೊಡುವನು. ಅನಂತರ ಆತನು ಒಂದು ಮಾತನ್ನು ಹೇಳುವನು, ಅದು ಲೋಕದಲ್ಲೆಲ್ಲಾ ಗಟ್ಟಿಯಾಗಿ ಮೊಳಗುತ್ತಿರುವಾಗ ಸ್ವಲ್ಪ ಹೊತ್ತು ಆತನು ಬಿಡುವು ಕೊಡುವನು. ದೇವರ ಮಕ್ಕಳು ತಮ್ಮ ಕಣ್ಣುಗಳನ್ನು ಆಕಾಶದ ಕಡೆಗೆ ದೃಷ್ಟಿಸುತ್ತಾ, ಯೆಹೋವದೇವರ ಬಾಯಿಂದ ಬರುವ ಮಾತುಗಳನ್ನು ಕೇಳುವರು. ಅದು ದಿಗಿಲು ಹುಟ್ಟಿಸುವಷ್ಟು ಗಂಭೀರವಾಗಿರುವುದು. ದೇವರು ಮಾತಾಡಿದ ಪ್ರತಿಯೊಂದು ವಾಕ್ಯದ ನಂತರ ಭಕ್ತಜನರು ‘ಹಲ್ಲೆಲೂಯ’ ಎಂದು ಜಯಘೋಷ ಮಾಡುವರು. ಅವರ ಮುಖಗಳು ಮೋಶೆ ಸೀನಾಯಿ ಬೆಟ್ಟದಿಂದ ಇಳಿದು ಬಂದಾಗ ಇದ್ದಂತೆ, ದೇವರ ಮಹಿಮೆಯಿಂದ ಹೊಳೆಯುವವು. ದುಷ್ಟರು ಆ ಮಹಿಮೆಯನ್ನು ನೋಡಲಾರದು. ತನ್ನ ಪರಿಶುದ್ದ ಸಬ್ಬತ್ತನ್ನು ಆಚರಿಸಿ ತನಗೆ ಗೌರವ ಕೊಟ್ಟಂತವರಿಗೆ ದೇವರು ನಿರಂತರವಾದ ಆಶೀರ್ವಾದ ಕೊಡುವನು. ಆಗ ಮೃಗ ಹಾಗೂ ಅದರ ವಿಗ್ರಹದ ಮೇಲೆ ಜಯ ಹೊಂದಿದ ಮಹಾಘೋಷ ಉಂಟಾಗುವುದು (ಅರ್ಲಿ ರೈಟಿಂಗ್ಸ್ 285; 286). ಕೊಕಾಘ 160.1

ದೇವರು ತನ್ನ ಮಗನಾದ ಕ್ರಿಸ್ತನು ಬರುವ ಸಮಯವನ್ನು ಘೋಷಿಸುವುದನ್ನು ಶ್ರೀಮತಿ ವೈಟಮ್ಮನವರು ದರ್ಶನದಲ್ಲಿ ಕೇಳಿದರು. ಆದರೆ ದರ್ಶನ ಮುಗಿದ ನಂತರ ಅದರ ಬಗ್ಗೆ ಅವರಿಗೆ ಯಾವುದೇ ನೆನಪು ಉಳಿಯಲಿಲ್ಲ. ಆ ದೃಶ್ಯವು ಬಹಳ ಹರ್ಷ ತರುವಂತ ಗಂಭೀರವಾದ ಆಸಕ್ತಿ ಹುಟ್ಟಿಸಿತು. ಅದನ್ನು ಯಾವ ಭಾಷೆಯಲ್ಲಿಯೂ ಪರಿಪೂರ್ಣವಾಗಿ ವಿವರಿಸಲು ಸಾಧ್ಯವಾಗದು. ಈ ದೃಶ್ಯವಾದ ನಂತರ ಬಿಳಿಯ ಬಣ್ಣದ ಮೋಡ ಕಂಡುಬಂತು. ಅದರ ಮೇಲೆ ಮನುಷ್ಯ ಕುಮಾರನು ಕುಳಿತಿದ್ದನೆಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ (ಸೆಲೆಕ್ಟಡ್ ಮೆಸೇಜಸ್, ಸಂಪುಟ 1, ಪುಟ 76). ಕೊಕಾಘ 160.2