Go to full page →

ಕ್ರಿಸ್ತನು ಜಯಶಾಲಿಯಾದನೆಂದು ದೇವದೂತರು ಹಾಡುತ್ತಾರೆ ಕೊಕಾಘ 164

ಆ ದಿನದಲ್ಲಿ ರಕ್ಷಿಸಲ್ಪಟ್ಟವರು ತಂದೆಯಾದ ದೇವರು ಹಾಗೂ ಕ್ರಿಸ್ತನ ಮಹಿಮೆಯಿಂದ ಪ್ರಕಾಶಿಸುವರು. ದೇವದೂತರು ತಮ್ಮ ಬಂಗಾರದ ತಂತಿವಾದ್ಯಗಳಿಂದ ಕ್ರಿಸ್ತನನ್ನೂ ಹಾಗೂ ಯಜ್ಞದ ಕುರಿಯಾದಾತನ ರಕ್ತದಿದ ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡವರನ್ನು ಸ್ವಾಗತಿಸಲು ಸುಮಧುರವಾಗಿ ಹಾಡುವರು, ಈ ಹಾಡು ಪರಲೋಕದಲ್ಲೆಲ್ಲಾ ತುಂಬಿಕೊಳ್ಳುತ್ತದೆ. ಕ್ರಿಸ್ತನು ಜಯಶಾಲಿಯಾದನು, ತಾನು ಜಯಿಸಿದವರೊಡನೆ ಆತನು ಪರಲೋಕಕ್ಕೆ ಪ್ರವೇಶಿಸುವನು, ತನ್ನ ಆತ್ಮವು ಅನುಭವಿಸಿದ ಶ್ರಮೆಯ ಫಲವನ್ನು ಕಂಡು ತೃಪ್ತನಾಗುವನು (ಯೆಶಾಯ 53:11) (ಟೆಸ್ಟಿಮೋನೀಸ್‌ ಸಂಪುಟ 9, ಪುಟಗಳು 285, 286). ಕೊಕಾಘ 164.5

ವರ್ಣಿಸಲಾಗದಂತ ಪ್ರೀತಿಯಿಂದ ಕ್ರಿಸ್ತನು ತನ್ನ ನಂಬಿಗಸ್ತರನ್ನು ಪರಲೋಕಕ್ಕೆ ಸ್ವಾಗತಿಸುವನು (ಗ್ರೇಟ್ ಕಾಂಟ್ರೊವರ್ಸಿ, 647). ಕೊಕಾಘ 165.1