Go to full page →

ವರ್ಣಿಸಲು ಅಸಾಧ್ಯವಾದ ವೈಭವ ಹಾಗೂ ಮಹಿಮೆ ಕೊಕಾಘ 168

ಶ್ರೀಮತಿ ವೈಟಮ್ಮನವರು ದರ್ಶನದಲ್ಲಿ ಅತ್ಯಂತ ಮನಮೋಹಕ ಹಾಗೂ ವೈಭವ ಮಹಿಮೆಯಿಂದ ಕೂಡಿದ್ದ ಯೇಸುವನ್ನು ಕಂಡರು. ಆತನ ಮುಖವು ಮಧ್ಯಾಹ್ನದ ಸೂರ್ಯನಿಗಿಂತಲೂ ಹೆಚ್ಚು ಪ್ರಕಾಶಿಸುತ್ತಿತ್ತು. ಪರಲೋಕದ ಮಹಿಮೆ, ಆ ವೈಭವ, ಮನೋಹರವಾದ ದೇವದೂತರು ತಮ್ಮ ಹತ್ತು ತಂತಿಗಳುಳ್ಳ ಸ್ವರಮಂಡಲ ಬಾರಿಸುತ್ತಾ ಹಾಡುತ್ತಿದ್ದ ಮಧುರವಾದ ಆ ದೃಶ್ಯವನ್ನು ನಿಮಗೆ ನಾ ಹೇಗೆ ವರ್ಣಿಸಲಿ? ಎಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ. ನಾನು ಹೊಸ ಯೆರೂಸಲೇಮಿನ ಆ ಭಾಷೆಯನ್ನು ಮಾತಾಡುವ ಹಾಗಿದ್ದಲ್ಲಿ, ಅದರ ವೈಭವಯುಕ್ತವಾದ ಮಹಿಮೆಯನ್ನು ಅಲ್ಪವಾದರೂ ತಿಳಿಸಬಹುದಾಗಿತ್ತು (ಅರ್ಲಿ ರೈಟಿಂಗ್, 19). ಕೊಕಾಘ 168.3

ಪರಲೋಕದ ಆ ಸೌಂದರ್ಯವನ್ನು ಬಣ್ಣಿಸಲು ಪ್ರಯತ್ನಿಸುವುದಕ್ಕೆ ಮಾನವರ ಭಾಷೆಯಿಂದ ಎಂದಿಗೂ ಸಾಧ್ಯವಾಗದು. ಅದರ ದೃಶ್ಯವನ್ನು ದರ್ಶನದಲ್ಲಿ ನೋಡುತ್ತಿದ್ದಂತೆ, ನನಗೆ ವಿಸ್ಮಯವಾಯಿತೆಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ. ಅವರ ಮುಂದೆ ಕಂಡುಬರುತ್ತಿದ್ದ ಉತ್ಕೃಷ್ಟವಾದ ಭವ್ಯತೆ, ಕಣ್ಣು ಕೋರೈಸುವ ಕಾಂತಿ, ವೈಭವವನ್ನು ಕಂಡ ಶ್ರೀಮತಿ ವೈಟಮ್ಮನವರು ಬರೆಯುವುದನ್ನು ಬಿಟ್ಟು ಓ, ಎಂತಹ ಅಸಾಧಾರಣ ಪ್ರೀತಿ! ಎಂತಹ ಅದ್ಭುತ ಪ್ರೀತಿ! ಎಂದು ಉದ್ಗರಿಸಿದರು. ಪರಲೋಕದ ವೈಭವವನ್ನು ವರ್ಣಿಸಲು ಅಥವಾ ನಮ್ಮ ರಕ್ಷಕನ ಅಪಾರವಾದ ಹಾಗೂ ಹೋಲಿಕೆಯಿಲ್ಲದ ಪ್ರೀತಿಯನ್ನು ವರ್ಣಿಸಲು ಈ ಲೋಕದ ಯಾವ ಭಾಷೆಯಿಂದಲೂ, ಯಾವ ಅತ್ಯುತ್ತಮವಾದ ಕವಿಯಿಂದಲೂ ಎಂದಿಗೂ ಸಾಧ್ಯವಿಲ್ಲ (ಅಲ್ಲಿ ರೈಟಿಂಗ್, 289). ಕೊಕಾಘ 168.4

ನೀತಿವಂತರಿಗೆ ದೊರೆಯುವ ಪ್ರತಿಫಲವನ್ನು ವಿವರಿಸಲು ಯಾರಿಂದಲೂ ಸಾಧ್ಯವಿಲ್ಲ. ಅದನ್ನು ನೋಡಿದವರಿಗೆ ಮಾತ್ರ ಅದು ತಿಳಿಯುತ್ತದೆ. ದೇವರ ಪರದೈಸಿನ ವೈಭವದ ಮಹಿಮೆಯನ್ನು ಮನುಷ್ಯರಾದ ಯಾರಿಂದಲೂ ಗ್ರಹಿಸಲಾಗದು (ಗ್ರೇಟ್ ಕಾಂಟ್ರೊವರ್ಸಿ, 675). ಕೊಕಾಘ 168.5

ದೈವೀಕವಾದ ಪರಲೋಕದ ಬಗ್ಗೆ ನಮಗೆ ಸಂಪೂರ್ಣವಾದ ತಿಳುವಳಿಕೆಯಿದಲ್ಲಿ, ನಾವು ಇನ್ನೆಂದಿಗೂ ಈ ಲೋಕದಲ್ಲಿ ವಾಸಿಸಲು ಬಯಸುವುದಿಲ್ಲ (ಸೈನ್ಸ್ ಆಫ್ ದಿ ಟೈಮ್ಸ್, ಏಪ್ರಿಲ್ 8, 1889). ಕೊಕಾಘ 168.6