Go to full page →

ಕ್ರಿಸ್ತನು ಯಾವ ಕಾರಣಕ್ಕಾಗಿ ಕಾದುಕೊಂಡಿದ್ದಾನೆ? ಕೊಕಾಘ 22

ಕ್ರಿಸ್ತನು ತನ್ನ ಸಭೆಯಲ್ಲಿ ತನ್ನನ್ನು ಪ್ರಕಟಪಡಿಸಿಕೊಳ್ಳುವುದಕ್ಕಾಗಿ ಬಹಳ ಹಂಬಲಿಕೆಯಿಂದ ಕಾದುಕೊಂಡಿದ್ದಾನೆ. ಕ್ರಿಸ್ತನ ಗುಣಸ್ವಭಾವವು ಆತನ ಜನರಲ್ಲಿ ಪರಿಪೂರ್ಣವಾಗಿ ಕಂಡುಬಂದಾಗ, ಅವರನ್ನು ತನ್ನವರೆಂದು ಸ್ವೀಕರಿಸಲು ಈ ಲೋಕಕ್ಕೆ ಎರಡನೇ ಸಾರಿ ಬರುವನು. ಕ್ರಿಸ್ತನ ಬರೋಣವನ್ನು ಎದುರು ನೋಡುವುದು ಮಾತ್ರವಲ್ಲ, ಅದು ತ್ವರಿತವಾಗಿ ಆಗುವಂತೆ ಮಾಡುವುದು ಪ್ರತಿಯೊಬ್ಬ ಕ್ರೈಸ್ತನ ಸದವಕಾಶವಾಗಿದೆ. ಕ್ರೈಸ್ತರೆಂದು ಹೇಳಿಕೊಳ್ಳುವವರೆಲ್ಲರೂ, ಆತನ ಮಹಿಮೆಗಾಗಿ ಫಲವನ್ನು ಕೊಟ್ಟಲ್ಲಿ ಬಹಳ ಶೀಘ್ರವಾಗಿ ಸುವಾರ್ತೆಯಂಬ ಬೀಜವು ಸಮಸ್ತ ಲೋಕದಲ್ಲಿ ಬಿತ್ತಲ್ಪಡುವುದು, ಅತಿಬೇಗನೆ ಕೊನೆಯ ಬೆಳೆಯು ಮಾಗುವುದು ಹಾಗೂ ಕ್ರಿಸ್ತನು ಅಮೂಲ್ಯವಾದ ಧಾನ್ಯವನ್ನು ಕೂಡಿಸಲು ಬರುವನು (ಕ್ರೈಸ್ಟ್ ಆಪ್ಟೆಕ್ಸ್ ಲೆಸನ್ಸ್, ಪುಟ 69 (1900). ಕೊಕಾಘ 22.3

ಜಗತ್ತಿಗೆ ಸುವಾರ್ತೆ ಸಾರುವುದರ ಮೂಲಕ, ನಮ್ಮ ಕರ್ತನ ಬರೋಣವನ್ನು ತೊರೆಗೊಳಿಸುವುದು ನಮ್ಮ ಸಾಮರ್ಥ್ಯದಲ್ಲಿದೆ. ನಾವು ಅದಕ್ಕಾಗಿ ಎದುರು ನೋಡಬೇಕಲ್ಲದೆ, ದೇವರ ದಿನವು ಶೀಘವಾಗಿ ಬರುವಂತೆಯೂ ಮಾಡಬೇಕಾಗಿದೆ. (2 ಪೇತ್ರನು 3:12; ಡಿಸೈರ್ ಆಫ್ ಏಜಸ್, ಪುಟ 633 (1898), ಕ್ರಿಸ್ತನೊಂದಿಗೆ ಸಹಕರಿಸುವುದರ ಮೂಲಕ ಈ ಲೋಕದ ಕಷ್ಟಸಂಕಟಗಳನ್ನು ಮುಕ್ತಾಯಗೊಳಿಸುವ ಸಾಮರ್ಥ್ಯವನ್ನು ದೇವರು ತಮಗೆ ಕೊಟ್ಟಿದ್ದಾನೆ (ಎಜುಕೇಷನ್, ಪುಟ 264 (1903). ಕೊಕಾಘ 22.4