Go to full page →

ಪರಲೋಕದಲ್ಲಿ ನಮ್ಮ ಕುಟುಂಬ ನೋಡುವ ಸಂತೋಷ ಕೊಕಾಘ 171

ಪರಲೋಕದ ಹೆಬ್ಬಾಗಿಲಿನ ಎರಡೂ ಕಡೆಗಳಲ್ಲಿ ದೇವದೂತರ ಪರಿವಾರವಿತ್ತು. ಅದನ್ನು ದಾಟಿ ಹೋಗುತ್ತಿರುವಾಗ ಯೇಸುಸ್ವಾಮಿಯು ನಮಗೆ ‘ನನ್ನ ತಂದೆಯ ಆಶೀರ್ವಾದ ಹೊಂದಿದವರೇ, ಬನ್ನಿರಿ; ಲೋಕಾದಿಯಿಂದ ನಿಮಗೋಸ್ಕರ ಸಿದ್ಧ ಮಾಡಿದ ರಾಜ್ಯವನ್ನು ಸ್ವಾಸ್ತ್ಯವಾಗಿ ತೆಗೆದುಕೊಳ್ಳಿರಿ’ ಎಂದು ಹೇಳುವನು (ಮತ್ತಾಯ 25:34), ಇಲ್ಲಿ ಆತನು ನಿಮಗೆ ತನ್ನ ಸಂತೋಷದಲ್ಲಿ ಪಾಲ್ಗೊಳ್ಳುವಂತೆ ಹೇಳುತ್ತಾನೆ. ಆ ಸಂತೋಷ ಯಾವುದು? ಇದು ತಂದೆ-ತಾಯಿಯರಾದ ನಿಮ್ಮ ಸಂಕಟ, ಪ್ರಯತ್ನಗಳು ಪ್ರತಿಫಲ ಕೊಡುವ ಸಂತೋಷದ ಸಮಯ. ಇಲ್ಲಿ ನಿಮ್ಮ ಮಕ್ಕಳಿದ್ದಾರೆ: ಅವರ ತಲೆಯ ಮೇಲೆ ಜೀವ ಕಿರೀಟಗಳಿರುತ್ತವೆ (ಚೈಲ್ಡ್ ಗೈಡೆನ್ಸ್ ಪುಟಗಳು 547, 568). ಕೊಕಾಘ 171.5

ಕ್ರಿಸ್ತನು ದೇವರು ನಮಗಾಗಿ ಕೊಟ್ಟ ಅತ್ಯುನ್ನತ ವರವಾಗಿದ್ದಾನೆ. ಆತನ ಜೀವನವು ನಮಗಾಗಿ ಕೊಡಲ್ಪಟ್ಟಿದೆ. ನಾವೂ ಸಹ ಸಮಾಧಿಯಿಂದ ಎದ್ದು ಬಂದು ಪರಲೋಕದ ದೇವದೂತರೊಂದಿಗೆ ಉನ್ನತವಾದ ಒಡನಾಟ ಹೊಂದುವಂತೆಯೂ, ನಮ್ಮ ಪ್ರೀತಿಪಾತ್ರರಾದವರನ್ನು ಸಂಧಿಸಿ ಅವರನ್ನು ಗುರುತಿಸುವಂತೆಯೂ ಕ್ರಿಸ್ತನು ನಮಗೋಸ್ಕರ ಸತ್ತು ಪುನರುತ್ಥಾನ ಹೊಂದಿದನು. ಕ್ರಿಸ್ತಂತಿರುವುದು ಅವರ ಸ್ವರೂಪವನ್ನು ನಾಶ ಮಾಡುವುದಿಲ್ಲ, ಬದಲಾಗಿ ಆತನ ಮಹಿಮೆಯ ಸ್ವರೂಪದಂತೆ ಬದಲಾಯಿಸುತ್ತದೆ. ಈ ಲೋಕದಲ್ಲಿ ಕೌಟುಂಬಿಕ ಸಂಬಂಧ ಹೊಂದಿರುವ ಪ್ರತಿಯೊಬ್ಬ ನೀತಿವಂತರು, ಪರಲೋಕದಲ್ಲಿ ಒಬ್ಬರನ್ನೊಬ್ಬರು ತಿಳಿದಿರುವ (ಸೆಲೆಕ್ಟಡ್ ಮೆಸೇಜಸ್ ಸಂಪುಟ 3, ಪುಟ 316). ಕೊಕಾಘ 172.1