Go to full page →

ದೇವದೂತರು ಹಾಗೂ ಎಲ್ಲಾ ಕಾಲದ ಭಕ್ತರೊಂದಿಗೆ ಅನ್ನೋನ್ಯತೆ ಹಾಗೂ ಸ್ನೇಹ ಕೊಕಾಘ 175

ರಕ್ಷಿಸಲ್ಪಟ್ಟವರೆಲ್ಲರೂ ತಮ್ಮ ಸ್ವಂತ ಜೀವನದಲ್ಲಿ ದೇವದೂತರು ತಮಗೆ ಮಾಡಿರುವ ಸೇವೆಯನ್ನು ತಿಳಿದುಕೊಳ್ಳುವರು. ಆರಂಭದಿಂದಲೂ ನಮ್ಮನ್ನು ರಕ್ಷಣೆ ಮಾಡಿದ ದೇವದೂತರು, ನಮ್ಮ ಹಾದಿಗಳನ್ನು ಗಮನಿಸುತ್ತಾ ಕಷ್ಟಕಾಲದಲ್ಲಿ ಸಂರಕ್ಷಿಸಿದ ದೇವದೂತರು, ಕಾರ್ಗತ್ತಲಿನ ಕಣಿವೆಯಲ್ಲಿ ಮರಣದ ಅಪಾಯದಲ್ಲಿರುವಾಗ ನಮ್ಮೊಂದಿಗಿದ್ದ ದೇವದೂತರು, ನಾವು ಪುನರುತ್ಥಾನಗೊಂಡಾಗ ನಮ್ಮನ್ನು ಮೊದಲು ಸ್ವಾಗತಿಸಿದ ದೇವದೂತರು - ಇವರೆಲ್ಲರೊಂದಿಗೆ ಮಾತಾಡಿ ನಮ್ಮ ವೈಯಕ್ತಿಕ ಜೀವನದಲ್ಲಿ ಹಾಗೂ ನಮ್ಮ ಕಾರ್ಯದ ಪ್ರತಿಯೊಂದು ಹಂತದಲ್ಲಿಯೂ ದೈವೀಕ ಸಹಾಯ ಮತ್ತು ಸಹಕಾರದ ಚರಿತ್ರೆಯನ್ನು ತಿಳಿದುಕೊಳ್ಳುವುದು ಎಷ್ಟೊಂದು ಅದ್ಭುತ ಸಂಗತಿಯಲ್ಲವೇ! (ಎಜುಕೇಷನ್ 305). ಕೊಕಾಘ 175.1

ಕಣ್ಣಿಗೆ ಕಾಣುವ ಮತ್ತು ಕಾಣದಿರುವ ಎಂತಹ ಅಪಾಯಗಳಿಂದ ದೇವದೂತರು ನಮ್ಮನ್ನು ಕಾಪಾಡಿದ್ದಾರೆಂಬುದನ್ನು ಪರಲೋಕಕ್ಕೆ ನಾವು ಹೋಗುವ ತನಕ ತಿಳಿದು ಬರುವುದಿಲ್ಲ (ದಿ ಡಿಸೈರ್ ಆಫ್ ಏಜಸ್ 240). ಕೊಕಾಘ 175.2

ನಮ್ಮ ಹೃದಯದಲ್ಲಿ ಸ್ವತಃ ದೇವರು ಕೊಡುವ ಪ್ರೀತಿ, ಕರುಣೆ, ಅನುಕಂಪಗಳು ಪರಲೋಕದಲ್ಲಿ ಯಥಾರ್ಥವಾಗಿಯೂ ಹಾಗೂ ಮಧುರವಾಗಿ ಕಂಡುಬರುವುದು, ಪರಿಶುದ್ಧರೊಂದಿಗೆ ನಿಷ್ಕಳಂಕವಾದ ಸಂಪರ್ಕ, ಆಶೀರ್ವದಿಸಲಟ್ಟ ದೇವದೂತರೊಂದಿಗೆ ಸಾಮರಸ್ಯದಿಂದ ಕೂಡಿದ ಸಾಮಾಜಿಕ ಜೀವನ, ಹಾಗೂ ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ವಸ್ತಗಳನ್ನು ತೊಳೆದು ಶುಭ ಮಾಡಿಕೊಂಡಿರುವ ಯುಗಯುಗಾಂತರಗಳಲ್ಲಿ ಜೀವಿಸಿದ ನೀತಿವಂತರೊಂದಿಗೆ ನಿತ್ಯನಿತ್ಯಕೂ ಸೌಹಾರ್ದತೆಯಿಂದ ವಾಸಿಸುವ ಭಾಗ್ಯಕರ ಜೀವಿತವು ಭೂಪರಲೋಕಗಳಲ್ಲಿ ನಮ್ಮನ್ನು ಸಂಪೂರ್ಣವಾಗಿ ಪರಿಶುದ್ದ ಬಂಧನದಿಂದ ಒಟ್ಟಾಗಿಸುತ್ತದೆ. ಇವೆಲ್ಲವೂ ರಕ್ಷಿಸಲ್ಪಟ್ಟವರು ಪರಲೋಕದಲ್ಲಿ ಆನಂದ ಪಡುವುದಕ್ಕೆ ಪೂರಕವಾಗಿರುತ್ತದೆ (ಗ್ರೇಟ್ ಕಾಂಟ್ರೋವರ್ಸಿ 377). ಕೊಕಾಘ 175.3