Go to full page →

ತಿಳಿದುಕೊಳ್ಳಬೇಕಾದ ಅನಂತತೆಯು ಇನ್ನೂ ಇರುತ್ತದೆ ಕೊಕಾಘ 179

ವಿಮೋಚಿಸಲ್ಪಟ್ಟವರ ಎಲ್ಲಾ ಶಕ್ತಿ ಸಾಮರ್ಥ, ಜ್ಞಾನವಿವೇಕಗಳು ಬೆಳವಣಿಗೆಗೆ ಹೊಂದುವವು. ನಮ್ಮ ಅತ್ಯುನ್ನತವಾದ ಬಯಕೆಗಳು ಈಡೇರುವವು, ಉನ್ನತವಾದ ಹಾರೈಕೆಗಳು ನೆರವೇರುವವು. ಆದರೂ ನಮ್ಮ ಆತ್ಮ ಶರೀರ ಪ್ರಾಣಗಳ ಶಕ್ತಿ ಸಾಮರ್ಥ್ಯವು ಹೆಚ್ಚಾಗುತ್ತಲೇ ಇರುತ್ತವೆ ಹಾಗೂ ಅತ್ಯುನ್ನತವಾದ ಮಟ್ಟವನ್ನು ಏರುತ್ತೇವೆ ಹಾಗೂ ಹೊಸ ಸತ್ಯಗಳು ನಮ್ಮ ಬೆಳಕಿಗೆ ಬರುತ್ತಲೇ ಇರುತ್ತವೆ (ಎಜುಕೇಷನ್, 307). ಕೊಕಾಘ 179.2

ದೇವರ ಜ್ಞಾನ, ವಿವೇಕ ಹಾಗೂ ಆತನ ಸಾಮರ್ಥ್ಯದ ಬಗ್ಗೆ ನಮ್ಮ ಜ್ಞಾನವು ಪರಲೋಕದಲ್ಲಿ ಹೆಚ್ಚುತ್ತಲೇ ಇರುತ್ತದೆ. ಆದರೂ ಆತನ ಅನಂತತೆಯ (Infinity) ಬಗ್ಗೆ ತಿಳಿದುಕೊಳ್ಳಬೇಕಾದದ್ದು ಯುಗಯುಗಾಂತರಗಳವರೆಗೂ ಇದ್ದೇ ಇರುತ್ತದೆ (ರಿವ್ಯೂ ಅಂಡ್ ಹೆರಾಲ್ಡ್, ಸೆಪ್ಟೆಂಬರ್ 14, 1886). ಕೊಕಾಘ 179.3

ಮಾನವರಾದ ನಮ್ಮ ಸಂತತಿಯ ಮೇಲೆ ತಲತಲಾಂತರಗಳಿಂದ ನಮ್ಮ ತಂದೆಗಳು ತೋರಿಸಿದ ಪ್ರೀತಿ, ದಯೆ, ಕರುಣೆಯು ದೇವರ ಅಗಾಧವಾದ ಪ್ರೀತಿಗೆ ಹೋಲಿಸಿದಾಗ ಮಹಾಸಾಗರದ ಒಂದು ಬೊಗಸೆ ನೀರಿನಂತೆ ಕಂಡುಬರುತ್ತದೆ. ದೇವರ ಅನಂತ ಪ್ರೀತಿಯನ್ನು ಯಾವ ಕವಿಯೂ ವರ್ಣಿಸಲಾಗದು ಅಥವಾ ಯಾವ ನಾಲಗೆಯೂ ವರ್ಣಿಸಲಾಗದು. ನಿಮ್ಮ ಜೀವಮಾನದಾದ್ಯಂತ ನೀವು ಪ್ರತಿದಿನವೂ ಅದರ ಧ್ಯಾನ ಮಾಡಬಹುದು, ಅದನ್ನು ಮನವರಿಕೆ ಮಾಡಿಕೊಳ್ಳಲು ಸತ್ಯವೇದವನ್ನು ಶ್ರದ್ದೆಯಿಂದ ಓದಬಹುದು. ಪರಲೋಕ ದೇವರ ಪ್ರೀತಿ ಹಾಗೂ ಅನುಕಂಪವನ್ನು ತಿಳಿದುಕೊಳ್ಳಲು ನಿಮ್ಮೆಲ್ಲಾ ಶಕ್ತಿ, ಸಾಮರ್ಥ್ಯ ಜ್ಞಾನ, ವಿವೇಕಗಳನ್ನು ನೀವು ಉಪಯೋಗಿಸಬಹುದು, ಆದರೂ ಅದರಿಂದಾಚೆ ಒಂದು ಅನಂತತೆಯಿದೆ. ದೇವರ ಪ್ರೀತಿಯ ಬಗ್ಗೆ ಯುಗಗಳವರೆಗೆ ನೀವು ಕಲಿಯಬಹುದು, ಆದರೂ ತನ್ನ ಒಬ್ಬನೇ ಮಗನನ್ನು ಮರಣಹೊಂದಿ ಪಾಪಿಗಳನ್ನು ರಕ್ಷಿಸಲು ಈ ಲೋಕಕ್ಕೆ ಕಳುಹಿಸಿಕೊಟ್ಟ ದೇವರ ಅನಂತ ಪ್ರೀತಿಯ ಉದ್ದ, ಆಳ, ಅಗಲ, ಎತ್ತರವನ್ನು ನಾವು ಎಂದೆಂದಿಗೂ ಸಂಪೂರ್ಣವಾಗಿ ಗ್ರಹಿಸಿಕೊಳ್ಳಲು ಸಾಧ್ಯವಿಲ್ಲ. ಕೊಕಾಘ 179.4