Go to full page →

ದೇವರಾಜ್ಜೆಯ ಉಲ್ಲಂಘನೆಯು ಹೆಚ್ಚು ಕಡಿಮೆ ಮಿತಿಮೀರಿದೆ ಕೊಕಾಘ 23

ಇನ್ನು ಕೆಲವು ಕಾಲದ ನಂತರ ಈ ಲೋಕದ ಜನರ ದೋಷಾಪರಾಧದ ಪಾತ್ರೆಯು ತುಂಬುವುದು. ಆಗ ಇಷ್ಟು ದೀರ್ಘಕಾಲದವರೆಗೆ ತಡೆಹಿಡಿಯಲ್ಪಟ್ಟಿದ್ದ ದೇವರ ಉಗ್ರಕೋಪವು ಜನರ ಮೇಲೆ ಸುರಿಸಲ್ಪಟ್ಟು, ಈ ಲೋಕವು ಅದರ ದಂಡನೆಯನ್ನು ಅನುಭವಿಸುವುದು (ಟೆಸ್ಟಿಮಾನೀಸ್, ಸಂಪುಟ 1, ಪುಟ 363 (1863). ಮನುಷ್ಯರ ದೋಷಾಪರಾಧವೆಂಬ ಪಾತ್ರೆಯು ಹೆಚ್ಚುಕಡಿಮೆ ತುಂಬಿದೆ ಹಾಗೂ ದೇವರ ಪ್ರತಿಕಾರ ರೂಪದ ನ್ಯಾಯತೀರ್ಪು ಅಪರಾಧಿಗಳ ಮೇಲೆ ಇನ್ನೇನು ಬರಲಿದೆ (ಟೆಸ್ಟಿಮೊನೀಸ್, ಸಂಪುಟ 4, ಪುಟ 489 (1880). ಕೊಕಾಘ 23.3

ನಮ್ಮ ಜಗತ್ತಿನ ಜನರ ದುಷ್ಟತನವು ಹೆಚ್ಚು ಕಡಿಮೆ ಅದರ ಮೇರೆ ಮೀರಿದೆ. ಅವರ ದೋಷಾಪರಾಧವು ಎಷ್ಟೊಂದು ಮಿತಿಮೀರುವ ಹಂತಕ್ಕೆ ಬಂದಿದೆ ಎಂದರೆ, ದೇವರು ಸೈತಾನನಿಗೆ ಈ ಲೋಕವನ್ನು ಅವನ ಇಚ್ಚೆಯಂತೆ ನಾಶಮಾಡಲು ಅನುಮತಿ ನೀಡುವ ಸಮಯ ಬಂದಿದೆ (ಟೆಸ್ಟಿಮೊನೀಸ್, ಸಂಪುಟ 7, ಪುಟ 141 (1902), ದೇವರಾಜ್ಞೆಯ ಉಲ್ಲಂಘನೆಯು ಹೆಚ್ಚುಕಡಿಮೆ ಮಿತಿಮೀರುವ ಹಂತ ತಲುಪಿದೆ. ಲೋಕದಲ್ಲಿ ಗಲಿಬಿಲಿ ತುಂಬಿಕೊಂಡಿದೆ, ಮಹಾಭಯಂಕರವಾದ ವಿಪತ್ತು ಜನರ ಮೇಲೆ ಹೀಘ್ರದಲ್ಲಿಯೇ ಬರಲಿದೆ. ಅಂತ್ಯಕಾಲವು ಬಹಳ ಸಮೀಪದಲ್ಲಿದೆ. ಸತ್ಯವನ್ನು ತಿಳಿದಿರುವ ಅಡ್ರೆಂಟಿಸ್ಟ್ ಕ್ರೈಸ್ತರಾದ ನಾವು, ಲೋಕದ ಮೇಲೆ ಶೀಘ್ರದಲ್ಲಿಯೇ ಬರಲಿರುವ ಅತ್ಯಾಶ್ಚರ್ಯಕರವಾದ ಘಟನೆಗಳಿಗೆ ಸಿದ್ಧರಾಗಬೇಕು (ಟೆಸ್ಟಿಮೊನಿಸ್ ಸಂಪುಟ 8, ಪುಟ 28 (1904). ಕೊಕಾಘ 23.4