Go to full page →

ಅವರು ಯೇಸುವಿನ ವಿಷಯವಾದ ಸಾಕ್ಷಿ ಹೊಂದಿದ್ದಾರೆ ಕೊಕಾಘ 25

ಅಂತ್ಯಕಾಲವು ಸಮೀಪಿಸಿದಾಗ, ಜಗತ್ತಿಗೆ ಕೊನೆಯ ಎಚ್ಚರಿಕೆ ಕೊಡುವ ಕಾರ್ಯವು ವಿಸ್ತರಿಸಲ್ಪಟ್ಟಾಗ, ವರ್ತಮಾನದ ಸತ್ಯವನ್ನು ಅಂಗೀಕರಿಸಿಕೊಳ್ಳುವವರಿಗೆ ಯೇಸುವಿನ ವಿಷಯವಾದ ಸಾಕ್ಷಿಯ ಸ್ವರೂಪ ಹಾಗೂ ಅದರ ಪ್ರಭಾವವನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು ಬಹಳ ಪ್ರಾಮುಖ್ಯವಾಗುತ್ತದೆ. ಇದನ್ನು ದೇವರು ತನ್ನ ಅನುಗ್ರಹದಿಂದ ಆರಂಭದಿಂದಲೂ ಮೂರನೇ ದೂತನ ಸಂದೇಶದ ಕಾರ್ಯದೊಂದಿಗೆ ಸಂಬಂಧಗೊಳಿಸಿದ್ದಾನೆ (ಟೆಸ್ಟಿಮೊನೀಸ್‌ ಸಂಪುಟ 5, ಪುಟ 654 (1889). ಕೊಕಾಘ 25.3

ಮನುಷ್ಯರು ಯೋಜನೆಗಳ ಮೇಲೆ ಯೋಜನೆ ಹಾಕಿಕೊಳ್ಳಬಹುದು, ಮತ್ತು ಸೈತಾನನು ಜನರನ್ನು ಸತ್ಯದಿಂದ ವಿಮುಖರನ್ನಾಗಿ ಮಾಡಲು ಪ್ರಯತ್ನಿಸಬಹುದು. ಆದರೆ ಕರ್ತನು ಶ್ರೀಮತಿ ವೈಟಮ್ಮನವರ ಮೂಲಕ ಮಾತಾಡಿದ್ದಾನೆ ಹಾಗೂ ಆಕೆಗೆ ತನ್ನ ಸಂದೇಶ ಕೊಟ್ಟಿದ್ದಾನೆಂದು ನಂಬುವವರೆಲ್ಲರೂ ಈ ಕೊನೆಯ ಕಾಲದಲ್ಲಿ ಬರುವ ಅನೇಕ ವಂಚನೆಗಳಿಂದ ಸುರಕ್ಷಿತವಾಗಿರುವರು (ಸೆಲೆಕ್ಟಡ್ ಮೆಸೇಜಸ್ ಸಂಪುಟ 3, ಪುಟಗಳು 83, 84 (1906), ಕೊನೆಯ ಕಾಲದಲ್ಲಿ ತಮಗೆ ದರ್ಶನಗಳಾಗಿವೆ ಎಂದು ಅನೇಕರು ಹೇಳಿಕೊಳ್ಳುವರು. ಇದು ತನ್ನಿಂದಲೇ ಕೊಡಲ್ಪಟ್ಟ ದರ್ಶನವೆಂದು ದೇವರು ನಿಮಗೆ ಸ್ಪಷ್ಟವಾದ ಸಾಕ್ಷಾಧಾರ ನೀಡಿದಾಗ, ಅದನ್ನು ನೀವು ಒಪ್ಪಿಕೊಳ್ಳಬಹುದು. ಆದರೆ ಬೇರೆ ಯಾವುದೇ ಆಧಾರವನ್ನು ಒಪ್ಪಿಕೊಳ್ಳಬಾರದು. ಯಾಕೆಂದರೆ ಅಮೆರಿಕಾ ಮತ್ತು ವಿದೇಶಗಳಲ್ಲಿ ಜನರು ಇಂತಹ ವಂಚನೆಗೆ ಒಳಗಾಗಿ ಹೆಚ್ಚೆಚ್ಚಾಗಿ ದೇವರಿಂದ ದೂರ ಹೋಗುವರು (ಸೆಲೆಕ್ಷಡ್ ಮೆಸೇಜಸ್, ಸಂಪುಟ 2, ಪುಟ 72 (1905). ಕೊಕಾಘ 25.4