Go to full page →

ಸೆವೆಂತ್ ಡೇ ಅಡ್ರೆಂಟಿಸ್ಟರ ವಿಶಿಷ್ಟವಾದ ದೈವನಿಯಮಿತ ಕಾರ್ಯ ಕೊಕಾಘ 26

ದೇವರು ಸೆವೆಂತ್ ಡೇ ಅಡ್ವೆಂಟಿಸ್ಟರಾದ ನಮ್ಮನ್ನು ಆತನ ಆಜ್ಞೆಗಳನ್ನು ರಕ್ಷಣೆ ಮಾಡುವ ಕಾವಲುಗಾರರನ್ನಾಗಿ ನೇಮಿಸಿದ್ದಾನೆ. ಇತರರಿಗೆ ಎಚ್ಚರಿಕೆ, ಗದರಿಕೆ ಮತ್ತು ಉತ್ತೇಜನದ ಮೂಲಕ ನೀಡಬೇಕಾದ ಪವಿತ್ರವಾದ ಹಾಗೂ ನಿತ್ಯನಿತ್ಯಕ್ಕೂ ನಿಲ್ಲುವ ಸತ್ಯವನ್ನು ಆತನು ನಮಗೆ ಒಪ್ಪಿಸಿದ್ದಾನೆ (ಟೆಸ್ಟಿಮೊನೀಸ್, ಸಂಪುಟ 5, ಪುಟ 381 (1885), ದೇವರು ಸೆವೆಂತ್ ಡೇ ಅಡ್ರೆಂಟಿಸ್ವರಾದ ನಮ್ಮನ್ನು ಈ ಲೋಕದಿಂದ ಬೇರ್ಪಡಿಸಿ ತನ್ನ ವಿಶಿಷ್ಟವಾದ ಜನರನ್ನಾಗಿ ಆರಿಸಿಕೊಂಡಿದ್ದಾನೆ. ಅವರನ್ನು ಲೋಕದಿಂದ ಬೇರ್ಪಡಿಸಿ, ತನ್ನೊಂದಿಗೆ ಸೇರಿಸಿಕೊಂಡಿದ್ದಾನೆ. ನಮ್ಮನ್ನು ತನ್ನ ಪ್ರತಿನಿಧಿಗಳನ್ನಾಗಿ ಮಾಡಿ, ರಕ್ಷಣೆಯ ಕೊನೆಯ ಕಾರ್ಯದಲ್ಲಿ ತನ್ನ ರಾಯಭಾರಿಗಳಾಗುವಂತೆ ಆರಿಸಿಕೊಂಡಿದ್ದಾನೆ. ವಿಶ್ವಾಸಾರ್ಹ ಮನುಷ್ಯರಿಗೆ ವಹಿಸಿಕೊಡುವ ಸತ್ಯವೆಂಬ ಮಹಾಸಂಪತ್ತು ಹಾಗೂ ದೇವರಿಂದ ಮನುಷ್ಯರಿಗೆ ಕೊಡಲ್ಪಟ್ಟ ಗಂಭೀರವಾದ ಎಚ್ಚರಿಕೆ - ಇವು ಜಗತ್ತಿಗೆ ಸಾರಲ್ಪಡುವಂತೆ ದೇವರು ಅಡ್ವೆಂಟಿಸ್ಟರಿಗೆ ಕೊಟ್ಟಿದ್ದಾನೆ (ಟೆಸ್ಟಿಮೊನೀಸ್, ಸಂಪುಟ 7, ಪುಟ 138 (1902). ಕೊಕಾಘ 26.2

ಸೆವೆಂತ್ ಡೇ ಅಡ್ವೆಂಟಿಸ್ಟರು ಈ ಲೋಕದಲ್ಲಿ ಒಂದು ವಿಶೇಷವಾದ ರೀತಿಯಲ್ಲಿ ಕಾವಲುಗಾರರಾಗಿಯೂ ಮತ್ತು ಬೆಳಕು ತೋರುವವರನ್ನಾಗಿಯೂ ದೇವರು ನೇಮಿಸಿದ್ದಾನೆ. ನಾಶವಾಗುತ್ತಿರುವ ಈ ಲೋಕಕ್ಕೆ ಕೊನೆಯ ಎಚ್ಚರಿಕೆ ಕೊಡುವ ಕಾರ್ಯವು ನಮ್ಮ ಸಭೆಗೆ ವಹಿಸಿಕೊಡಲ್ಪಟ್ಟಿದೆ. ದೇವರ ವಾಕ್ಯದಿಂದ ಅವರ ಮೇಲೆ ಅದ್ಭುತವಾದ ಬೆಳಕು ಪ್ರಕಾಶಿಸುವುದು. ಅಡ್ವೆಂಟಿಸ್ಪರಿಗೆ ಮೂರುದೂತರ ವರ್ತಮಾನಗಳನ್ನು ಸಾರುವ ಅತ್ಯಂತ ಗಂಭೀರವಾದ ಜವಾಬ್ದಾರಿ ಕೊಡಲ್ಪಟ್ಟಿದೆ. ಇದಕ್ಕಿಂತ ಪ್ರಾಮುಖ್ಯವಾದ ಕಾರ್ಯ ಮತ್ತೊಂದಿಲ್ಲ. ಈ ಕಾರ್ಯದಿಂದ ಅವರ ಗಮನವನ್ನು ಯಾವುದೂ ಸಹ ಬೇರೆ ಕಡೆ ಸಳೆಯಬಾರದು (ಟೆಸ್ಟಿಮೊನೀಸ್, ಸಂಪುಟ 9, ಪುಟ 19 (1909). ಕೊಕಾಘ 26.3