Go to full page →

ಮುಂದೆ ಬರಲಿರುವ ದಂಡನೆಯ ಬಗ್ಗೆ ದೇವರು ಯಾವಾಗಲೂ ಎಚ್ಚರಿಸಿದ್ದಾನೆ ಕೊಕಾಘ 6

ಮುಂದೆ ಬರುವ ನ್ಯಾಯತೀರ್ಪು ಹಾಗೂ ದಂಡನೆಯ ಬಗ್ಗೆ ದೇವರು ಯಾವಾಗಲೂ ಜನರಿಗೆ ಎಚ್ಚರಿಕೆ ನೀಡಿದ್ದಾನೆ. ಆಯಾಕಾಲದಲ್ಲಿ ಜೀವಿಸಿ, ನಂಬಿಕೆಯಿಂದ ದೇವರ ಎಚ್ಚರಿಕೆಯ ಸಂದೇಶ ಹಾಗೂ ಆತನ ಆಜ್ಞೆಗಳಿಗೆ ವಿಧೇಯರಾದವರು ಅವಿಧೇಯತೆ ಮತ್ತು ಅಪನಂಬಿಕೆ ಹೊಂದಿದವರ ಮೇಲೆ ಬಂದ ದಂಡನೆಯಿಂದ ತಪ್ಪಿಸಿಕೊಂಡಿದ್ದಾರೆ. ಯೆಹೋವನು ನೋಹನಿಗೆ — ‘ನೀನೂ, ನಿನ್ನ ಮನೆಯವರೆಲ್ಲರೂ ನಾವೆಯಲ್ಲಿ ಸೇರಿರಿ;ಈಗಿನವರಲ್ಲಿ ನೀನೊಬ್ಬನೇ ನನ್ನ ಮುಂದೆ ನೀತಿವಂತನಾಗಿ ನಡೆಯುವುದನ್ನು ನೋಡಿದ್ದೇನೆ ಎಂದು ಹೇಳಿದನು (ಆದಿಕಾಂಡ 7:1)ನೋಹನು ದೇವರ ಮಾತಿಗೆ ವಿಧೇಯನಾದನು ಹಾಗೂ ರಕ್ಷಿಸಲ್ಪಟ್ಟನು. ದೇವರು ಲೋಟನಿಗೆ * ನೀವೆದ್ದು ಈ ಸ್ಥಳವನ್ನು ಬಿಟ್ಟು ಹೋಗಿರಿ, ಯೆಹೋವನು ಈ ಊರನ್ನು ನಾಶಮಾಡುತ್ತಾನೆ’ ಎಂಬ ಸಂದೇಶ ಕೊಟ್ಟನು. ಲೋಟನು ದೇವರ ಮಾತಿಗೆ ವಿಧೇಯನಾದದ್ದರಿಂದ ದಂಡನೆಯಿಂದ ರಕ್ಷಿಸಲಟ್ಟನು (ಆದಿಕಾಂಡ 7:1: 9:14), ಅದೇ ರೀತಿಯಾಗಿ ಯೆರೂಸಲೇಮಿನ ನಾಶದ ಬಗ್ಗೆ ಕ್ರಿಸ್ತನು ತನ್ನ ಶಿಷ್ಯರಿಗೆ ಮುಂದಾಗಿಯೇ ಎಚ್ಚರಿಕೆ ನೀಡಿದನು. ಮುಂದೆ ಬರಲಿರುವ ಯೆರೂಸಲೇಮಿನ ನಾಶದ ಸೂಚನೆಗಳನ್ನು ಗಮನಿಸಿದವರು, ಅಲ್ಲಿಂದ ಪಲಾಯನ ಮಾಡಿದರು. ಇದರಿಂದಾಗಿ ಅವರು ನಾಶದಿಂದ ತಪ್ಪಿಸಿಕೊಂಡರು. ಅದೇ ರೀತಿಯಾಗಿ ನಮಗೂ ಸಹ ಕ್ರಿಸ್ತನ ಎರಡನೇ ಬರೋಣ ಹಾಗೂ ಲೋಕಕ್ಕೆ ಬರಲಿರುವ ವಿನಾಶದ ಬಗ್ಗೆ ಎಚ್ಚರಿಕೆ ಕೊಡಲ್ಪಟ್ಟಿದೆ. ಈ ಎಚ್ಚರಿಕೆಗೆ ಕಿವಿಗೊಡುವವರು ರಕ್ಷಿಸಲ್ಪಡುವರು (ದಿ ಡಿಸೈರ್ ಆಫ್ ಏಜಸ್, ಪುಟ 634, 1898). ಕೊಕಾಘ 6.2