Go to full page →

ದೇವರು ತನಗೆ ನಂಬಿಗಸ್ತರಾಗಿರುವವರೊಂದಿಗೆ ಕೆಲಸ ಮಾಡುತ್ತಾನೆ ಕೊಕಾಘ 34

ಕರ್ತನಾದ ಯೇಸುವು ತನ್ನನ್ನು ಆರಾಧಿಸಲು ಯಾವಾಗಲೂ ತನ್ನದೇ ಆದ ಆರಿಸಲ್ಪಟ್ಟ ಜನರನ್ನು ಹೊಂದಿದ್ದಾನೆ. ಯೆಹೂದ್ಯರು ಆತನನ್ನು ನಿರಾಕರಿಸಿದಾಗ, ಜೀವದಾಯಕನಾದ ಆತನು ಅವರಿಂದ ದೇವರ ರಾಜ್ಯ ತೆಗೆದು ಅನ್ಯರಿಗೆ ಕೊಟ್ಟನು. ದೇವರು ತನ್ನೆಲ್ಲಾ ಕಾರ್ಯಗಳಲ್ಲಿಯೂ ಇದೇ ಸಿದ್ದಾಂತವನ್ನು ಅನುಸರಿಸುತ್ತಾನೆ. ಸಭೆಯು ವಾಕ್ಯಕ್ಕೆ ಅವಿಧೇಯತೆ ತೋರಿದಲ್ಲಿ ಸಭಿಕರು ಎಂತಹ ಉನ್ನತ ಸ್ಥಾನದಲ್ಲಿಯೇ ಇರಲಿ, ಆತನು ಅವರೊಂದಿಗೆ ಎಂದಿಗೂ ಕೆಲಸ ಮಾಡುವುದಿಲ್ಲ. ಆದರೆ ದೇವರು ಪ್ರಮುಖ ಜವಾಬ್ದಾರಿ ಹೊತ್ತುಕೊಳ್ಳಲು ಇತರರನ್ನು ಆರಿಸಿಕೊಳ್ಳುವನು. ಆದರೆ ಇವರೂ ಸಹ ತಮ್ಮ ಪಾಪಕಾರ್ಯಗಳಿಂದ ತಮ್ಮ ಜೀವನವನ್ನು ಶುದ್ಧೀಕರಿಸಿಕೊಳ್ಳದಿದ್ದಲ್ಲಿ ಮತ್ತು ಉನ್ನತವಾದ ತತ್ವಗಳನ್ನು ಅನುಸರಿಸದೆ ಅವರು ಅದಕ್ಕೆ ಪಶ್ಚಾತ್ತಾಪ ಪಡದಿದ್ದಲ್ಲಿ ದೇವರು ಅವರನ್ನೂ ಸಹ ತೀವ್ರವಾಗಿ ಶಿಕ್ಷಿಸಿ ತಗ್ಗಿಸುವನು ಮತ್ತು ಅವರನ್ನು ತನ್ನ ಸೇವೆಯಿಂದ ತೆಗೆದುಹಾಕಿ, ಅವರು ನಿಂದೆಗೆ ಗುರಿಯಾಗುವಂತೆ ಮಾಡುವನು (ಮಾನುಸ್ಕ್ರಿಪ್ಟ್ ರಿಲೀಸ್, ಸಂಪುಟ 14, ಪುಟ 102, 1903). ಕೊಕಾಘ 34.6