Go to full page →

ಉಗ್ರಗಾಮಿ ಸಭೆಯು ಕುಂದುಕೊರತೆ ಹೊಂದಿ ಅಪೂರ್ಣವಾಗಿದೆ ಕೊಕಾಘ 36

ಉಗ್ರಗಾಮಿಯಾದ ಸಭೆಯು ಜಯಹೊಂದಿದ ಸಭೆಯಲ್ಲಿ ಮತ್ತು ಈ ಲೋಕವು ಪರಲೋಕವಲ್ಲ. ಸಭೆಯಲ್ಲಿ ತಪ್ಪು ಮಾಡುವ ದೋಷಿಗಳೂ ಬಲಹೀನರೂ ಆದ ಸದಸ್ಯರಿದ್ದಾರೆ. ಅವರು ಈ ಲೋಕದ ಜೀವನ ಮತ್ತು ಮುಂದಿನ ನಿತ್ಯಜೀವಕ್ಕಾಗಿ ಕ್ರಿಸ್ತನ ಶಾಲೆಯಲ್ಲಿ ಶಿಸ್ತು, ಶಿಕ್ಷಣ ಹಾಗೂ ತರಬೇತಿ ಹೊಂದುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ (ಸೈನ್ಸ್ ಆಫ್ ದಿ ಟೈಮ್ಸ್ ಜನವರಿ 4, 1883), ಕೊಕಾಘ 36.1

ಕೆಲವರು ಸಭೆಗೆ ಬಂದಾಗ ತಮ್ಮ ನಿರೀಕ್ಷೆಯು ನೆರವೇರಿತೆಂದು ತಿಳಿದುಕೊಂಡು, ಪರಿಶುದ್ದರೂ, ಪರಿಪೂರ್ಣರೂ ಆಗಿದ್ದಾರೆಂದು ತಿಳಿದುಕೊಂಡಿರುವವರನ್ನು ಮಾತ್ರ ಭೇಟಿಯಾಗುತ್ತಾರೆ. ಅವರು ತಮ್ಮ ನಂಬಿಕೆಯಲ್ಲಿ ಉತ್ಸಾಹದಿಂದಿರುತ್ತಾರೆ. ಆದರೆ ಸಭಿಕರಲ್ಲಿ ತಪ್ಪು ದೋಷ ಕಂಡುಬಂದಾಗ, ‘ನಾವು ಕೆಟ್ಟವರೊಂದಿಗೆ ಸೇರಬಾರದೆಂಬ ಕಾರಣದಿಂದ ಲೋಕವನ್ನು ಬಿಟ್ಟು ಬಂದೆವು. ಆದರೆ ಕೆಟ್ಟತನ ಇಲ್ಲಿಯೂ ಬರುತ್ತಿದೆ ಎಂದು ಹೇಳುತ್ತಾ, ಗೋಧಿ ಹಾಗೂ ಹಣಜಿಯ ಸಾಮ್ಯದಲ್ಲಿ ಸೇವಕರು ಕೇಳಿದಂತೆ “ಹಣಜಿಯು ಎಲ್ಲಿಂದ ಬಂತು ಎಂದು ಪ್ರಶ್ನಿಸುತ್ತಾರೆ. ಆದರೆ ನಾವು ಈ ರೀತಿಯಾಗಿ ನಿರಾಶರಾಗಬೇಕಿಲ್ಲ. ಯಾಕೆಂದರೆ ಸಭೆಯು ಪರಿಪೂರ್ಣವಾಗಿದೆ ಎಂಬ ನಿರ್ಧಾರಕ್ಕೆ ಬರುವಂತೆ ಕರ್ತನು ನಮಗೆ ಅಧಿಕಾರಕೊಟ್ಟಿಲ್ಲ. ಉಗ್ರವಾದಿಯಾದ ಸಭೆಯನ್ನು ಜಯಹೊಂದಿದ ಸಭೆಯಂತೆ ಪರಿಶುದ್ಧ ಮಾಡಲು ನಮ್ಮೆಲ್ಲಾ ಉತ್ಸಾಹವು ಎಂದಿಗೂ ಯಶಸ್ವಿಯಾಗುವುದಿಲ್ಲ (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್, ಪುಟ 47, 1893). ಕೊಕಾಘ 36.2