Go to full page →

ಅಧ್ಯಾಯ-5
ಉಳಿದ ಸಭೆಯ ದೈವಭಕ್ತಿ ಜೀವನ ಕೊಕಾಘ 37

ಎರಡು ರೀತಿಯ ಜೀವನ ಕೊಕಾಘ 37

ಯೇಸುಕ್ರಿಸ್ತನು ಮೇಘರೂಢನಾಗಿ ಎರಡನೇ ಸಾರಿ ಬರುವುದಕ್ಕೆ ಮೊದಲು, ನಮ್ಮ ಕಾಲದಲ್ಲಿ ಸ್ನಾನಿಕನಾದ ಯೋಹಾನನು ಮಾಡಿದಂತ ಕಾರ್ಯಗಳು ನಡೆಯಬೇಕು, ಕರ್ತನ ಮಹಾದಿನಕ್ಕಾಗಿ ಯೋಹಾನನು ಕೊಟ್ಟಂತ ಸಂದೇಶವನ್ನು ನಾವು ಕೊಡಬೇಕಾದಲ್ಲಿ ಅವನಂತಹ ಆತ್ಮೀಕ ಅನುಭವವು ನಮ್ಮದಾಗಿರಬೇಕು. ಅವನು ಮಾಡಿದಂತ ಕಾರ್ಯವನ್ನು ನಾವೂ ಮಾಡಬೇಕು. ದೇವರ ಮೇಲೆ ದೃಷಿಯಿಡಬೇಕು, ಆಗ ನಾವು ನಮ್ಮೆಲ್ಲಾ ಸ್ವಾರ್ಥವನ್ನು ಬಿಡುತ್ತೇವೆ (ಟೆಸ್ಟಿಮೊನೀಸ್‌ ಸಂಪುಟ 8, ಪುಟ 332-333, 1904). ಕೊಕಾಘ 37.1

ದೇವರೊಂದಿಗೆ ಅತ್ಮೀಕ ಸಂಪರ್ಕ ಹೊಂದಿರುವುದು ನಮ್ಮ ಗುಣಸ್ವಭಾವ ಹಾಗೂ ಜೀವನವನ್ನು ಉತ್ತಮಗೊಳಿಸುತ್ತದೆ. ಜನರು ಆಗ ನಮ್ಮನ್ನು ಕ್ರಿಸ್ತನವರೆಂದು ತಿಳಿದುಕೊಳ್ಳುವರು. ಇದು ಒಬ್ಬ ಕೆಲಸಗಾರನಿಗೆ ಬೇರಾವುದೂ ಕೊಡದಂತಹ ಬಲವನ್ನು ನೀಡುತ್ತದೆ. ಇಂತಹ ಶಕ್ತಿಯನ್ನು ಅವನು ಕಳೆದುಕೊಳ್ಳಬಾರದು. ನಾವು ಎರಡು ರೀತಿಯ ಜೀವನ ಮಾಡಬೇಕು. ಮೊದಲನೆಯದು ಆಲೋಚನೆ ಹಾಗೂ ಕ್ರಿಯೆಗಳ ಜೀವನ ಮತ್ತು ಎರಡನೆಯದು ಮೌನಪ್ರಾರ್ಥನೆ ಹಾಗೂ ಶ್ರದ್ದೆಯ ಕೆಲಸ ಮಾಡುವ ಜೀವಿತ (ದಿ ಮಿನಿಸ್ಟ್ರಿ ಆಫ್ ಹೀಲಿಂಗ್, ಪುಟ 512, 1905). ಕೊಕಾಘ 37.2

ಪ್ರಾರ್ಥನೆ ಹಾಗೂ ಪ್ರಯತ್ನ ಮತ್ತು ಪ್ರಯತ್ನ ಹಾಗೂ ಪ್ರಾರ್ಥನೆ - ಇವು ನಿಮ್ಮ ಜೀವನದ ಗುರಿಯಾಗಿರಬೇಕು. ಸಾಮರ್ಥ್ಯ ಮತ್ತು ಸ್ತುತಿ ಸ್ತೋತ್ರ ಕೊಂಡಾಟವೆಲ್ಲವೂ ದೇವರಿಗೆ ಮೀಸಲಾಗಿದೆ ಎಂದು ಪ್ರಾರ್ಥಿಸಬೇಕು ಹಾಗೂ ಕರ್ತವ್ಯ ನಿರ್ವಹಿಸುವುದು ನಮ್ಮ ಜವಾಬ್ದಾರಿ ಎಂಬಂತೆ ಶ್ರಮ ವಹಿಸಬೇಕು (ಟೆಸ್ಟಿಮೊನೀಸ್, ಸಂಪುಟ 4, ಪುಟ 538, 1881). ಪ್ರಾರ್ಥನೆಯಿಲ್ಲದೆ ಯಾರೂ ಸಹ ಒಂದು ದಿನವಾಗಲಿ ಅಥವಾ ಒಂದು ಗಂಟೆಯಾಗಲಿ ಸುರಕ್ಷಿತನಾಗಿರಲಾರನು. (ಗೇಟ್ ಕಾಂಟ್ರೊವರ್ಸಿ, ಪುಟ 530, 1911). ಕೊಕಾಘ 37.3