Go to full page →

ಪವಿತ್ರಾತ್ಮನಿಂದ ರೂಪಿಸಲ್ಪಡುವುದು ಕೊಕಾಘ 38

ದೇವರ ಪರಿಶುದ್ಧಾತ್ಮನಿಂದ ರೂಪಿಸಲ್ಪಡುವಂತೆ ನಮ್ಮನ್ನು ಆತನಿಗೆ ಒಪ್ಪಿಸಿಕೊಡುವವರೆಗೆ ನಾವು ಸಂತೋಷವನ್ನು ತಿಳಿಯಲು ಸಾಧ್ಯವಿಲ್ಲ. ಈ ರೀತಿ ನವೀಕರಿಸಲ್ಪಟ್ಟವರನ್ನು ಪರಿಶುದ್ಧಾತ್ಮನು ಕ್ರಿಸ್ತನ ಮಾದರಿಗೆ ಅನುಗುಣವಾಗಿ ರೂಪಿಸುವನು. ಇದರ ಪರಿಣಾಮವಾಗಿ ದೇವರ ವಿರುದ್ಧವಾದ ವೈರತ್ವವು ನಂಬಿಕೆ ಹಾಗೂ ಪ್ರೀತಿಯಾಗಿಯೂ ಮತ್ತು ಗೌರವವು ದೀನಸ್ವಭಾವವಾಗಿಯೂ ಬದಲಾಗುವುದು. ಅಂತಹ ವ್ಯಕ್ತಿಗಳು ಸತ್ಯದ ಸೊಬಗನ್ನು ಗಹಿಸಿಕೊಳ್ಳುವುದರಿಂದ, ಕ್ರಿಸ್ತನು ಉನ್ನತವಾಗಿ ಹಾಗೂ ಗುಣಸ್ವಭಾವದ ಪರಿಪೂರ್ಣತೆಯಿಂದ ಗೌರವಿಸಲ್ಪಡುತ್ತಾನೆ (ಅವರ್ ಹೈ ಕಾಲಿಂಗ್, ಪುಟ 152, 1896). ಕೊಕಾಘ 38.3

ನಮ್ಮೆಲ್ಲಾ ಸ್ವಭಾವಗಳು, ಹೃದಯ, ಮನಸ್ಸು ಹಾಗೂ ಶರೀರದ ಅವಯವಗಳು ಪ್ರತಿಯೊಂದು ಕ್ಷಣದಲ್ಲಿಯೂ ದೇವರಾತ್ಮನ ಹತೋಟಿಯಲ್ಲಿರಬೇಕಾದ ಅಗತ್ಯವಿದೆ (ಪೇಟ್ರಿಯಾರ್ಕ್ ಅಂಡ್ ಪ್ರಾಫೆಟ್, ಪುಟ 421, 1890). ಪರಿಶುದ್ಧಾತ್ಮನು ನಮ್ಮಲ್ಲಿರುವ ಆತ್ಮೀಕ ಕತ್ತಲೆಯನ್ನು ಹೋಗಲಾಡಿಸಿ ತನ್ನ ಬೆಳಕು ಕೊಡುವನು. ಅಲ್ಲದೆ ನಮ್ಮ ಅಜ್ಞಾನವನ್ನು ಮನವರಿಕೆ ಮಾಡಿಸಿ, ನಮ್ಮೆಲ್ಲಾ ಅಗತ್ಯಗಳಲ್ಲಿ ಸಹಾಯ ಮಾಡುತ್ತಾನೆ. ಆದರೆ ನಮ್ಮ ಮನಸ್ಸು ಯಾವಾಗಲೂ ದೇವರಲ್ಲಿಯೇ ಲೀನವಾಗಿರಬೇಕು. ಲೋಕದ ಆಶಾಪಾಶಗಳಿಗೆ ನಾವು ಬಲಿಯಾದಲ್ಲಿ ಪ್ರಾರ್ಥಿಸಲು ಆಸಕ್ತಿಯಿಲ್ಲದಿದಲ್ಲಿ ಬಲಜ್ಞಾನ ವಿವೇಕಗಳ ಮೂಲವಾದ ಕ್ರಿಸ್ತನೊಂದಿಗೆ ಆತ್ಮೀಕ ಸಂಪರ್ಕವಿಲ್ಲದಿದ್ದಲ್ಲಿ ಪರಿಶುದ್ಧಾತ್ಮನು ನಮ್ಮಲ್ಲಿ ನೆಲೆಸಿರುವುದಿಲ್ಲ (ಅವರ್ ಹೈ ಕಾಲಿಂಗ್ ಪುಟ 154, 1897). ಕೊಕಾಘ 38.4