Go to full page →

ಸತ್ಯವೇದವನ್ನು ಕಂಠಪಾಠ ಮಾಡಿಕೊಳ್ಳಬೇಕು ಕೊಕಾಘ 39

ಪ್ರತಿದಿನವೂ ಅನೇಕ ಸಾರಿ ಪ್ರಾರ್ಥನೆ ಮಾಡಲು ಹಾಗೂ ದೇವರ ವಾಕ್ಯ ಓದಲು ಸಮಯವನ್ನು ಪ್ರತಿಷ್ಟಿಸಿಕೊಳ್ಳಬೇಕು. ಓದಿದ ವಾಕ್ಯವನ್ನು ಬಾಯಿಪಾಠ ಮಾಡಿಕೊಂಡಲ್ಲಿ ಅಂತವರ ಹೃದಯದಲ್ಲಿ ಆತ್ಮೀಕ ಜೀವನವಿರುತ್ತದೆ (ಟೆಸ್ಟಿಮೊನೀಸ್, ಸಂಪುಟ 4, ಪುಟ 459, 1880). ಪರಲೋಕದ ರಾಜನಿಗೆ ನಿಷ್ಠೆಯಿಂದಿರುವ ಯುವಕ ಯುವತಿಯರಿಗೆ ದೇವರ ಅಮೂಲ್ಯವಾದ ವಾಕ್ಯವು ಮಾನದಂಡವಾಗಿದೆ (Standard). ಅವರು ಸತ್ಯವೇದವನ್ನು ಅಧ್ಯಯನ ಮಾಡಲಿ, ವಾಕ್ಯಗಳನ್ನು ಬಾಯಿಪಾಠ ಮಾಡಿ ತಮ್ಮ ಹೃದಯಗಳಲ್ಲಿಟ್ಟುಕೊಂಡು, ಕರ್ತನಾದ ಯೆಹೋವನು ಹೇಳಿರುವುದರ ಜಾನಪಡೆದುಕೊಳ್ಳಲಿ (ಮೈ ಲೈಫ್ ಟುಡೇ, ಪುಟ 315, 1887). ಕೊಕಾಘ 39.3

ದೇವರ ವಾಕ್ಯವು ನಿಮಗೆ ಕೋಟೆಯು, ದುರ್ಗವೂ ಆಗಿರಲಿ, ಆಗ ಈ ಲೋಕದ ಆಶಾಪಾಶಗಳು, ಆಕರ್ಷಣೆಗಳು ಅದನ್ನು ಒಡೆಯಲಾರವು. ನಿಮ್ಮ ಹೃದಯದಲ್ಲಿ ದೇವರ ವಾಕ್ಯವು ಬಾಯಿಪಾಠವಾಗಿರಲಿ. ಸೈತಾನನು ನಿಮ್ಮನ್ನು ಶೋಧಿಸಲು ಬಂದಾಗ, ಸತ್ಯವೇದದಲ್ಲಿ ಬರೆದಿದೆ’ ಎಂದು ಹೇಳುವ ಮೂಲಕ ಅವನನ್ನು ಧೈರ್ಯವಾಗಿ ಎದುರಿಸಬಹುದು. ನಮ್ಮ ಕರ್ತನಾದ ಯೇಸುವು ಇದೇ ರೀತಿಯಾಗಿ ಸೈತಾನನ ಶೋಧನೆಗಳನ್ನು ಎದುರಿಸಿದನು (ರಿವ್ಯು ಅಂಡ್ ಹೆರಾಲ್ಡ್, ಏಪ್ರಿಲ್ 10, 1888), ಬಾಯಿಪಾಠ ಮಾಡಿದ ದೇವರ ವಾಕ್ಯವು ಚಿನ್ನಬೆಳ್ಳಿಗಿಂತಲೂ ಅಮೂಲ್ಯವಾಗಿವೆ (ಟೆಸ್ಟಿಮೊನೀಸ್, ಸಂಪುಟ 6, ಪುಟ 81, 1900). ನಿಮ್ಮೊಂದಿಗೆ ಯಾವಾಗಲೂ ಒಂದು ಚಿಕ್ಕಸತ್ಯವೇದವಿರಲಿ, ಅದರಲ್ಲಿ ಬರೆದಿರುವ ಅಮೂಲ್ಯವಾದ ವಾಗ್ದಾನಗಳನ್ನು ಹೊಂದಿಕೊಳ್ಳುವ ಪ್ರತಿಯೊಂದು ಅವಕಾಶದ ಪ್ರಯೋಜನ ಪಡೆದುಕೊಳ್ಳಿ (ರಿವ್ಯೂ ಅಂಡ್ ಹೆರಾಲ್ಡ್, ಏಪ್ರಿಲ್ 27, 1905). ಕೊಕಾಘ 39.4

ಅನೇಕರು ದೇವರ ವಾಕ್ಯವನ್ನು ಹುಡುಕಿದರೂ, ದೊರೆಯದ ಸಮಯ ಬರಲಿದೆ. ಆದರೆ ಈ ವಾಕ್ಯವು ನಿಮ್ಮ ಮನಸ್ಸಿನ ನೆನಪಿನಲ್ಲಿ ಉಳಿದಿದ್ದಲ್ಲಿ ಅದನ್ನು ನಿಮ್ಮಿಂದ ಯಾರೂ ತೆಗೆದುಕೊಳ್ಳಲಾಗದು (1906). ದೇವರ ವಾಕ್ಯವನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಿ, ಅದರಲ್ಲಿರುವ ಅಮೂಲ್ಯ ವಾಗ್ದಾನಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. ನಮಗೆ ಸತ್ಯವೇದವು ದೊರೆಯದಂತ ಸಮಯದಲ್ಲಿ, ನಮ್ಮ ಹೃದಯಗಳಲ್ಲಿ ದೇವರ ವಾಕ್ಯವು ಇರುವಂತದ್ದಾಗಿದೆ, (1909). ಕೊಕಾಘ 39.5