Go to full page →

ಮುಂದಿನ ಕಷ್ಟಸಂಕಟ, ಶೋಧನೆಗಳಿಗೆ ಸಿದ್ದರಾಗುವುದು ಕೊಕಾಘ 40

ದೇವರ ಸೇವಕರು ತಮ್ಮ ನಂಬಿಕೆಗಾಗಿ ಕಷ್ಟಸಂಕಟ ಶೋಧನೆಗಳಿಗೆ ಒಳಗಾಗಿ ನ್ಯಾಯಾಲಯಗಳ ಮುಂದೆ ತರಲ್ಪಟ್ಟಾಗ, ಏನು ಹೇಳಬೇಕೆಂದು ಪ್ರತಿದಿನವೂ ಸಿದ್ಧರಾಗುತ್ತಾ, ತಮ್ಮ ಹೃದಯದಲ್ಲಿ ದೇವರ ವಾಕ್ಯದ ಸತ್ಯವನ್ನು ಕಾಪಾಡಿಕೊಂಡಿರಬೇಕು. ಕ್ರಿಸ್ತನ ಬೋಧನೆಯನ್ನು ಅನುಸರಿಸಿ, ಪ್ರಾರ್ಥನೆಯ ಮೂಲಕ ನಂಬಿಕೆಯನ್ನು ಬಲಪಡಿಸಿಕೊಳ್ಳಬೇಕು. ಆಗ ಅವರ ನಂಬಿಕೆಯ ನಿಮಿತ್ತ ನ್ಯಾಯಾಲಯಗಳಿಗೆ ವಿಚಾರಣೆಗೆ ಕರೆದೊಯ್ದಾಗ, ಪರಿಶುದ್ಧಾತ್ಮನು ಅಲ್ಲಿ ನೆರೆದಿರುವವರ ಹೃದಯಗಳನ್ನು ಮುಟ್ಟುವಂತ ರೀತಿಯಲ್ಲಿ ಎಲ್ಲಾ ಸತ್ಯಗಳನ್ನು ತನ್ನ ಜನರ ನೆನಪಿಗೆ ತರುವನು. ಅಗತ್ಯವಾದ ಸಮಯದಲ್ಲಿ ದೇವರು ತನ್ನ ಮಕ್ಕಳು ಶ್ರದ್ಧೆಯಿಂದ ದೇವರ ವಾಕ್ಯವನ್ನು ಅಧ್ಯಯನ ಮಾಡಿ ಮನವರಿಕೆ ಮಾಡಿಕೊಂಡಿದ್ದ ಎಲ್ಲಾ ಸತ್ಯದ ಜ್ಞಾನವನ್ನು ಅವರ ನೆನಪಿಗೆ ತರುವನು (ಕೌನ್ಸಿಲ್ಸ್ ಆನ್ ಸ್ಯಾಬತ್ ಸ್ಕೂಲ್ ವರ್ಕ್, ಪುಟಗಳು 40, 41, 1900). ಕೊಕಾಘ 40.5

ಕಷ್ಟ ಸಂಕಟ, ಶೋಧನೆಗಳ ಸಮಯ ಬಂದಾಗ, ಈಗ ಜನರಿಗೆ ದೇವರ ವಾಕ್ಯ ಬೋಧಿಸುತ್ತಿರುವವರು ಸತ್ಯವೇದದ ಅನೇಕ ಪ್ರಶ್ನೆಗಳಿಗೆ ತಾವು ಸಮರ್ಪಕ ಉತ್ತರ ಕೊಡಲಾಗದೆಂದು ತಿಳಿದುಕೊಳ್ಳುವರು. ಈ ರೀತಿ ಪರೀಕ್ಷೆಗೆ ಒಳಗಾಗುವ ತನಕ ತಮ್ಮ ಅಜ್ಞಾನವು ಅವರಿಗೆ ತಿಳಿದಿರುವುದಿಲ್ಲ. ಅದೇ ರೀತಿ ಸಭೆಯಲ್ಲಿಯೂ ಸಹ, ನಾವು ನಂಬಿರುವುದನ್ನು ತಿಳಿದಿದ್ದೇವೆಂದು ಹೇಳಿಕೊಳ್ಳುವವರೂ ಸಹ, ಈ ಹೋರಾಟವು ಬರುವ ತನಕ ತಮ್ಮ ಬಲಹೀನತೆಯು ಅವರಿಗೆ ಗೊತ್ತಿರುವುದಿಲ್ಲ. ಆದರೆ ತಮ್ಮ ನಂಬಿಕೆಯನ್ನು ವಿವರಿಸಬೇಕೆಂದು ಅವರಿಗೆ ಕೇಳಿಕೊಂಡಾಗಲೇ, ತಾವು ಸತ್ಯವೆಂದು ತಿಳಿದುಕೊಂಡಿದ್ದು ಹೇಗೆ ಗಲಿಬಿಲಿ ಹುಟ್ಟಿಸುವ ಕಲ್ಪನೆಗಳಾಗಿದ್ದವೆಂದು ಅರಿವಾಗಿ ಆಶ್ಚರ್ಯಗೊಳ್ಳುವರು (ಟೆಸ್ಟಿಮೊನೀಸ್, ಸಂಪುಟ 5, ಪುಟ 707, 1889). ಕೊಕಾಘ 41.1