Go to full page →

ವೈದ್ಯಕೀಯ ಸುವಾರ್ತಾ ಸೇವೆ ಕೊಕಾಘ 47

ಧಾರ್ಮಿಕ ಆಕ್ರಮಣ ಹೆಚ್ಚಾದಾಗ ಸಂವಿಧಾನ, ಸರ್ಕಾರದ ನೀತಿ ನಿಯಮಗಳು ಬುಡಮೇಲಾಗುವ ಸಾಧ್ಯತೆಯಿದೆ. ಆಗ ಮನಸ್ಸಾಕ್ಷಿಯಂತೆ ನಡೆಯಲು ಸ್ವಾತಂತ್ರ್ಯ ಇರಬೇಕೆಂದು ಹೋರಾಡುವ ವೈದ್ಯಕೀಯ ಕ್ಷೇತ್ರದ ಜನರನ್ನು ಮೂಲೆ ಗುಂಪು ಮಾಡಲಾಗುವುದು. ಅಂತವರು ತಮಗೋಸ್ಕರ ಅವಕಾಶ ದೊರೆತಾಗ ರೋಗಗಳು, ಅದಕ್ಕೆ ಕಾರಣಗಳು, ಅದನ್ನು ತಡೆಗಟ್ಟುವುದು ಹಾಗೂ ಗುಣಪಡಿಸುವುದು, ಇವುಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಪಡೆದುಕೊಳ್ಳಬೇಕು, ಆಗ ಅವರಿಗೆ ಸೇವೆ ಮಾಡಲು ಹೇರಳವಾದ ಅವಕಾಶ ದೊರೆಯುತ್ತದೆ. ರೋಗರುಜಿನಗಳಿಗೆ ತುತ್ತಾದವರು ಎಲ್ಲೆಲ್ಲಿಯೂ ಸಾಕಷ್ಟು ಇದ್ದಾರೆ ಹಾಗೂ ಅವರಿಗೆ ಸಹಾಯದ ಅಗತ್ಯವಿದೆ. ಕ್ರೈಸ್ತರಾದ ವಿಶ್ವಾಸಿಗಳಲ್ಲಿ ಮಾತ್ರವಲ್ಲ, ಸತ್ಯವನ್ನು ಅರಿಯದವರೂ ಸಹ ರೋಗರುಜಿನಗಳಿಗೆ ತುತ್ತಾಗುತ್ತಾರೆ (ಕೌನ್ಸೆಲ್ಸ್ ಆನ್ ಹೆಲ್ತ್ ಪುಟ 506, 1892). ಕೊಕಾಘ 47.2

ಶೀಘ್ರದಲ್ಲಿಯೇ ಬಹಿರಂಗವಾಗಿ ಸುವಾರ್ತಾ ಸೇವೆ ನಡೆಸಲಾಗದು. ಆದರೆ ವೈದ್ಯಕೀಯ ಸುವಾರ್ತಾ ಸೇವೆ ಕೊನೆಯವರೆಗೂ ಮಾಡುವ ಅವಕಾಶವಿದೆ. (ಕೌನ್ಸೆಲ್ಸ್ ಆನ್ ಹೆಲ್ತ್, ಪುಟ 533, 1901). ಕೊಕಾಘ 47.3