Go to full page →

ಉಪವಾಸವಿದ್ದು ಪ್ರಾರ್ಥನೆ ಮಾಡುವ ಸಮಯ ಕೊಕಾಘ 48

ಈಗಿನಿಂದ ಹಾಗೂ ಲೋಕದ ಅಂತ್ಯವಾಗುವವರೆಗೂ, ದೇವರ ಮಕ್ಕಳು ಹೆಚ್ಚಾಗಿ ಎಚ್ಚರವಾಗಿಯೂ, ಶ್ರದ್ಧಾವಂತರೂ ಆಗಿರಬೇಕು. ಅವರು ತಮ್ಮ ಸ್ವಂತ ವಿವೇಕದ ಮೇಲೆ ಭರವಸೆಯಿಡದೆ, ತಮ್ಮ ನಾಯಕನ ಮೇಲೆ ಭರವಸೆಯಿಡಬೇಕು . ಉಪವಾಸ ಮಾಡಿ ಪ್ರಾರ್ಥಿಸುವುದಕ್ಕೆ ಸಮಯ ಮೀಸಲಾಗಿರಬೇಕು. ಉಪವಾಸ ಮಾಡುವಾಗ ಸಂಪೂರ್ಣವಾಗಿ ಆಹಾರ ತ್ಯಜಿಸುವ ಅಗತ್ಯವಿಲ್ಲ. ಆದರೆ ಸರಳವಾದ ಆಹಾರವನ್ನು ಕಡಿಮೆಯಾಗಿ ತೆಗೆದುಕೊಳ್ಳಬಹುದು (ಕೌನ್ಸೆಲ್ಸ್ ಆನ್ ಡಯಟ್, ಪುಟಗಳು 188, 189, 1904). ಕೊಕಾಘ 48.3

ಮಸಾಲೆಯುಕ್ತ ಹಾಗೂ ಮನಸ್ಸನ್ನು ಪ್ರಚೋದಿಸುವ ಎಲ್ಲಾ ಆಹಾರವನ್ನು ತ್ಯಜಿಸಿ ದೇವರು ಸಮೃದ್ಧಿಯಾಗಿ ಕೊಟ್ಟಿರುವ ಆರೋಗ್ಯಕರವಾದ ಸರಳ ಆಹಾರ ಸೇವಿಸುವುದು ನಿಜವಾದ ಉಪವಾಸವಾಗಿದೆ. ಏನು ಊಟ ಮಾಡಬೇಕು, ಏನು ಕುಡಿಯಬೇಕು ಎಂಬುದರ ಬಗ್ಗೆ ನಾವು ಚಿಂತಿಸಬಾರದು. ಬದಲಾಗಿ ನಮ್ಮ ಧಾರ್ಮಿಕ ಅನುಭವಕ್ಕೆ ಉತ್ಸಾಹ ಹಾಗೂ ಚೈತನ್ಯ ಕೊಡುವ ಪರಲೋಕದ ಆತ್ಮೀಕ ಆಹಾರಕ್ಕಾಗಿ ಚಿಂತಿಸಬೇಕು (ಮೆಡಿಕಲ್ ಮಿನಿಸ್ಟ್ರಿ, ಪುಟ 283, 1896). ಕೊಕಾಘ 48.4

ದೈವಭಕ್ತಿ ಎಂಬ ವ್ಯಾಪಕ ಪ್ರಭಾವವು ಇನ್ನೂ ಸಹ ತನ್ನ ಸಂಪೂರ್ಣ ಬಲವನ್ನು ಕಳೆದುಕೊಂಡಿಲ್ಲ. ಸಭೆಯು ಅಪಾಯ ಮತ್ತು ನಿರುತ್ಸಾಹಕ್ಕೆ ಹೆಚ್ಚಾಗಿ ಒಳಗಾಗುವ ಸಮಯದಲ್ಲಿ, ಬೆಳಕಿನಲ್ಲಿ ನಡೆಯುತ್ತಿರುವ ದೇವ ಜನರೆಂಬ ಉಳಿದ ಸಭೆಗೆ ಸೇರಿದ ಚಿಕ್ಕ ಗುಂಪಿನವರು. ಲೋಕದಲ್ಲಿ ನಡೆಯುತ್ತಿರುವ ಅಸಹ್ಯಕೃತ್ಯಗಳಿಗೆ ಬೇಸತ್ತು ನಿಟ್ಟುಸಿರಿನಿಂದ ಮೊರೆಯಿಡುವರು. ಎಲ್ಲಕ್ಕಿಂತಲೂ ಹೆಚ್ಚಾಗಿ ಸಭೆಯ ಸದಸ್ಯರೂ ಸಹ ಲೋಕವನ್ನೇ ಅನುಸರಿಸುತ್ತಿರುವುದರಿಂದ, ಅವರ ಪ್ರಾರ್ಥನೆಯು ಸಭೆಯ ಪರವಾಗಿ ಪರಲೋಕಕ್ಕೆ ಮುಟ್ಟುವುದು (ಟೆಸ್ಟಿಮೊನೀಸ್, ಸಂಪುಟ 5, ಪುಟಗಳು 209, 210, 1882). ಕೊಕಾಘ 48.5