Go to full page →

ಲೇಖನಗಳಲ್ಲಿ ಯಾರನ್ನೂ ಚುಚ್ಚಿ ಮಾತಾಡಿ ನೋಯಿಸಬಾರದು ಕೊಕಾಘ 52

ನಮ್ಮ ಅಡ್ವೆಂಟಿಸ್ಟ್ ಪತ್ರಿಕೆಗಳಿಗೆ ಲೇಖನ ಬರೆಯುವವರು ಯಾರನ್ನೂ ಸಹ ಪರೋಕ್ಷವಾಗಲಿ ಇಲ್ಲವೆ ನೇರವಾಗಿ ಚುಚ್ಚುವಂತ ಮಾತುಗಳನ್ನು ಉಪಯೋಗಿಸಿ ಅವರ ಮನನೋಯಿಸಬಾರದು. ಇದು ಕಥೋಲಿಕ್ಕರನ್ನೂ ಒಳಗೊಂಡಂತೆ, ಇತರರಿಗೆ ಸುವಾರ್ತೆ ಸಾರಬೇಕಾದ ನಮ್ಮ ಕಾರ್ಯಕ್ಕೆ ಅಡ್ಡಿಯಾಗುತ್ತದೆ. ಸತ್ಯವನ್ನು ಪ್ರೀತಿಯಿಂದ ಹೇಳಬೇಕೇ ಹೊರತು, ಧರ್ಮಸಮ್ಮತವಲ್ಲದ ಸ್ವಂತ ವಿಷಯಗಳನ್ನು ಸತ್ಯದೊಂದಿಗೆ ಸೇರಿಸಿ ಹೇಳಬಾರದು. ‘ಪತ್ರಿಕೆಗಳಲ್ಲಿ ಕಠಿಣವಾದ ಹಾಗೂ ವ್ಯಂಗ್ಯವಾದ ಚುಚ್ಚು ಮಾತುಗಳನ್ನು ಉಪಯೋಗಿಸಿ ಯಾರ ಮನಸ್ಸನ್ನೂ ನೋಯಿಸಬಾರದು, ಅಂತವುಗಳು ಲೇಖನಗಳಿಂದ ದೂರವಾಗಿರಲಿ, ದೇವರ ವಾಕ್ಯದ ಮೂಲಕ ಗದರಿಸಬೇಕು, ತನ್ನದೇ ಆದ ಇತಿಮಿತಿ ಇರುವ ಮನುಷ್ಯನು ಕ್ರಿಸ್ತನಲ್ಲಿ ನೆಲೆಗೊಂಡಿರಲಿ’ (ಟೆಸ್ಟಿಮೊನೀಸ್ ಪುಟಗಳು 240, 241, 244, 1909, ಸಂಪುಟ 9), ಕೊಕಾಘ 52.5

ದೇಶದ ಕಾನೂನು ಹಾಗೂ ಸುವ್ಯವಸ್ಥೆಗೆ ವಿರುದ್ಧವಾಗಿ ಕಂಡುಬರುವಂತೆ ಅಪಾರ್ಥ ನೀಡುವ ಯಾವುದೇ ವಿಧವಾದ ಲೇಖನಗಳು, ಹೇಳಿಕೆಗಳು ಅಡ್ವೆಂಟಿಸ್ಟ್ ಪತ್ರಿಕೆಗಳಲ್ಲಿ ಪ್ರಕಟವಾಗಬಾರದು. ನಮ್ಮ ದೇಶದ ಕಾನೂನು ಕಟ್ಟಳೆಗಳಿಗೆ ಅವಿಧೇಯರಾಗಿ, ದೇಶಕ್ಕೆ ನಿಷ್ಠೆಯಿಲ್ಲದವರೆಂದು ಯಾರೂ ಸಹ ತಿಳಿಯದಂತೆ, ಪತ್ರಿಕೆಗಳ ಒಂದೊಂದು ವಾಕ್ಯವನ್ನೂ ಎಚ್ಚರಿಕೆಯಿಂದ ಗಮನಿಸಬೇಕು. ಇತರರಿಗೆ ಹೋರಾಟಕ್ಕೆ ಆಹ್ವಾನ ನೀಡುವಂತ ಆಪಾದನೆಗಳಿಂದ ಮತ್ತು ಟೀಕೆಗಳಿಂದ ಕ್ರೈಸ್ತಧರ್ಮವು ಹೊರತಾಗಿರಬೇಕು. ಇಂತವುಗಳಿಂದ ಸುವಾರ್ತೆಯು ಇತರರ ಮೇಲೆ ತನ್ನ ಪರಿಣಾಮ ಬೀರುವುದಿಲ್ಲ’ (ಟೆಸ್ಟಿಮೊನೀಸ್, ಸಂಪುಟ 6, ಪುಟ 397, 1900). ಕೊಕಾಘ 53.1