Go to full page →

ಐಕ್ಯತೆಯನ್ನು ಪ್ರತಿಪಾದಿಸಬೇಕು ಕೊಕಾಘ 53

ನಮ್ಮಲ್ಲಿ ಯಾವಾಗಲೂ ಐಕ್ಯತೆಯನ್ನು ಪ್ರತಿಪಾದಿಸಬೇಕೇ ಹೊರತು, ಭಿನ್ನಾಭಿಪ್ರಾಯ ಹುಟ್ಟಿಸಬಾರದು. ಸತ್ಯವೆಂಬ ಬೆಳಕು ಹೊಂದಿರುವವರನ್ನು ಮೋಸದಿಂದ ವಂಚಿಸುವಂತೆ ಸಾವಿರಾರು ಶೋಧನೆಗಳಿವೆ. ಇಂತಹ ಸಮಯದಲ್ಲಿ ದೇವರಲ್ಲಿ ಭಯಭಕ್ತಿಯುಳ್ಳ ಅನುಭವಶಾಲಿಗಳ ಗಮನಕ್ಕೆ ತಾರದೆ ಯಾವುದೇ ಹೊಸ ಸಿದ್ಧಾಂತಗಳನ್ನಾಗಲಿ ಅಥವಾ ಸತ್ಯವೇದಕ್ಕೆ ಸಂಬಂಧಪಟ್ಟ ಹೊಸ ವ್ಯಾಖ್ಯಾನಗಳನ್ನಾಗಲಿ ಯಾರೂ ಸಹ ಸ್ವೀಕರಿಸಬಾರದು. ಇದು ನಮ್ಮನ್ನು ಇಂತಹ ಶೋಧನೆಗಳಿಂದ ಎಚ್ಚರಿಸುವ ಏಕೈಕ ರಕ್ಷಣೆಯಾಗಿದೆ. ಪ್ರಾರ್ಥನಾ ಪೂರ್ವಕವಾಗಿ ಅವರ ಮುಂದೆ ಈ ವಿಷಯಗಳನ್ನು ಪ್ರಸ್ತಾಪಿಸಬೇಕು. ಅದು ವಿಶ್ವಾಸಾರ್ಹವಲ್ಲವೆಂದು ಅವರು ನಿರ್ಧರಿಸಿದರೆ, ಅದನ್ನು ಒಪ್ಪಿಕೊಳ್ಳಬೇಕು. ಕೊಕಾಘ 53.5

ಸತ್ಯವೇದದ ನಂಬಿಕೆಗೆ ಧಕ್ಕೆ ತರುವಂತ ಉದ್ದೇಶ ಹೊಂದಿರುವ ಸ್ತ್ರೀಪುರುಷರು ತಮಗೆ ಹೊಸದಾದ ಸತ್ಯ ತಿಳಿಸಲ್ಪಟ್ಟಿತು ಅಥವಾ ಹೊಸದಾದ ಬೆಳಕು ದೇವರಿಂದ ಬಂದಿತೆಂದು ಹೇಳಿಕೊಳ್ಳಬಹುದು. ಅವರು ಪ್ರತಿಪಾದಿಸುವ ಸಿದ್ದಾಂತಗಳು ದೇವರ ವಾಕ್ಯಕ್ಕೆ ವಿರುದ್ಧವಾಗಿರುತ್ತದೆ. ಆದರೂ ಜನರು ಅವುಗಳನ್ನು ನಂಬಿ ವಂಚಿಸಲ್ಪಡುವರು. ಸುಳ್ಳು ವರದಿಗಳು ಪ್ರಚುರ ಪಡಿಸಲ್ಪಟ್ಟು, ಅನೇಕರು ಈ ಬಲೆಗೆ ಸಿಲುಕಿಕೊಳ್ಳುವರು. ಸೈತಾನನು ನಮ್ಮನ್ನು ಸತ್ಯದಿಂದ ದೂರ ಮಾಡಲು ನಿರಂತರವಾಗಿ ಪ್ರಯತ್ನಿಸುವುದರಿಂದ, ಎಲ್ಲಾ ರೀತಿಯ ತಪ್ಪುಗಳ ವಿರುದ್ಧವಾಗಿ ಅತಿಯಾದ ಎಚ್ಚರಿಕೆ ಇರಬಾರದು (ಟೆಸ್ಟಿಮೊನೀಸ್, ಸಂಪುಟ 5, ಪುಟಗಳು 293, 295, 296, 1885). ಕೊಕಾಘ 54.1

ಇತರರು ಅಭಿಪ್ರಾಯಗಳನ್ನು ಒಪ್ಪಿಕೊಳ್ಳಬೇಕೆಂಬ ಉದ್ದೇಶದಿಂದ ನಾವು ಐಕ್ಯತೆಯಿಂದ ಇರಬಾರದು. ಬದಲಾಗಿ ನಾವೆಲ್ಲರೂ ಕ್ರಿಸ್ತನಂತ ನಮ್ರತೆ ಹಾಗೂ ದೀನಸ್ವಭಾವ ಹೊಂದಿಕೊಳ್ಳಲು ಪ್ರಯತ್ನಿಸಿದಲ್ಲಿ, ಕ್ರಿಸ್ತನ ಮನಸ್ಸು ನಮ್ಮಲ್ಲಿಯೂ ಇರುವುದು. ಆಗ ನಮ್ಮಲ್ಲಿ ನಿಜವಾದ ಐಕ್ಯತೆ ಮನೋಭಾವ ಇರುವುದು. ಅಂತಹ ಐಕ್ಯತೆ ನಮ್ಮಲ್ಲಿರಬೇಕು. “ಸತ್ಯವನ್ನು ನಂಬಿದ್ದೇವೆಂದು ಹೇಳಿಕೊಳ್ಳುವವರು ತಮ್ಮ ಸಹೋದರರೊಂದಿಗೆ ಐಕ್ಯತೆಯಿಂದಿರಬೇಕು; ನಮ್ಮಲ್ಲಿ ಐಕ್ಯತೆಯಿಲ್ಲ ಒಬ್ಬನು ಒಂದು ರೀತಿ ಬೋಧಿಸುತ್ತಾನೆ, ಮತ್ತೊಬ್ಬನು ಇನ್ನೊಂದು ರೀತಿ ಬೋಧಿಸುತ್ತಾನೆ ಮತ್ತು ಮತಾಂಧರು ಎಂದು ಜನರು ಹೇಳುವಂತೆ ನಾವು ನಡೆದುಕೊಳ್ಳಬಾರದು. ಯಾವುದೇ ಭಿನ್ನಾಭಿಪ್ರಾಯದಿಂದ ದೂರವಿರಬೇಕು (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್, ಪುಟ 57, 1893). ಕೊಕಾಘ 54.2