Go to full page →

ಮುಂದಿನ ಘಟನೆಗಳ ಬಗ್ಗೆ ಸರಿಯಾದ ದೃಷ್ಟಿಕೋನ ಹೊಂದಿರಬೇಕು ಕೊಕಾಘ 8

ಮುಂದೆ ನಮ್ಮ ಜಗತ್ತಿನಲ್ಲಿ ಎಂತಹ ಘಟನೆಗಳು ನಡೆಯುತ್ತವೆಂಬುದನ್ನು ನಾವು ಈಗ ಖಚಿತವಾಗಿ ವಿವರಿಸಲಾಗದು. ಆದರೆ ಕರ್ತನ ಮಹಾದಿನವು ಹತ್ತಿರದಲ್ಲಿರುವುದರಿಂದ ನಾವು ಎಚ್ಚರವಾಗಿದ್ದು ಪ್ರಾರ್ಥಿಸುವ ಸಮಯವು ಇದಾಗಿದೆ. ಇದನ್ನು ನಾವು ತಿಳಿದಿರಬೇಕು (ಸೆಲೆಕ್ಷಡ್ ಮೆಸೇಜಸ್, ಸಂಪುಟ 1, ಪುಟ 35 (1901). ಮೃಗದ ಗುರುತು ಸಾಗಲ್ಪಟ್ಟಿರುವಂತೆಯೇ ನಿಖರವಾಗಿದೆ. ಈ ವಿಷಯವನ್ನು ಎಲ್ಲರೂ ಇದುವರೆಗೆ ಅರ್ಥಮಾಡಿಕೊಂಡಿಲ್ಲ (ಟೆಸ್ಟಿಮೊನೀಸ್‌ ಸಂಪುಟ 6, ಪುಟ 7 (1900). ಕೊಕಾಘ 8.6

ಅನೇಕರು ತಮ್ಮ ಈಗಿನ ಕರ್ತವ್ಯಗಳು ಸಂತೋಷ ಆಶೀರ್ವಾದಗಳಿಂದ ವಿಮುಖರಾಗಿದ್ದಾರೆ. ಇದರಿಂದ ಮುಂದೆ ಬರಲಿರುವ ಇಕ್ಕಟ್ಟಿನ ಕಾಲದ ತೊಂದರೆಗಳನ್ನು ಈಗ ತಾವಾಗಿಯೇ ಬರಮಾಡಿಕೊಳ್ಳುತ್ತಾರೆ. ಇಂತಹ ಸಮಯದಲ್ಲಿ ದೇವರ ಕೃಪೆಯು ನಮಗೆ ದೊರೆಯದು (ಸೆಲೆಕ್ಟೆಡ್ ಮೆಸೇಜಸ್ ಸಂಪುಟ 3, ಪುಟ 383, 384 (1884). ಕೊಕಾಘ 8.7

ದೇವರ ಮಕ್ಕಳಿಗೆ ಸಂಕಟ ಬರುವ ಸಮಯವಿದೆ. ಆದರೆ ಇದನ್ನು ಯಾವಾಗಲೂ ಅವರಿಗೆ ತಿಳಿಸುತ್ತಾ, ಮುಂದೆ ಬರಲಿರುವ ಸಂಕಟವನ್ನು ಈಗಲೇ ಅವರಿಗೆ ತರಬಾರದು. ದೇವರ ಮಕ್ಕಳನ್ನು ಜಡತ್ವದಿಂದ ಬಡಿದೆಬ್ಬಿಸುವ ಸಮಯ ಬರಲಿದೆ. ಆದರೆ ಸದ್ಯಕ್ಕೆ ಸಭೆಯಲ್ಲಿ ತಿಳಿಸುವ ವರ್ತಮಾನ ಸತ್ಯವು ಇದಲ್ಲ (ಸೆಲೆಕ್ಷಡ್ ಮಸೇಜಸ್ ಸಂಪುಟ 1, ಪುಟ 180 (1890). ಕೊಕಾಘ 9.1

*****