Go to full page →

ವಿಪತ್ತು ನಿರೋಧಕ ಕಟ್ಟಡಗಳು ಬೂದಿಯಾಗುತ್ತವೆ ಕೊಕಾಘ 64

ಅತ್ಯಧಿಕ ಖರ್ಚಿನಿಂದ ಬೆಂಕಿ ನಿರೋಧಕ ಬೃಹತ್ ಕಟ್ಟಡಗಳನ್ನು ಕಟ್ಟಲಾಗಿದೆ. ದೇವರ ಪ್ರತೀಕಾರದಿಂದ ಹೇಗೆ ಸೊದೋಮ್ ಪಟ್ಟಣವು ಬೆಂಕಿಯಲ್ಲಿ ನಾಶವಾಯಿತೋ, ಅದೇ ರೀತಿ ಹೆಮ್ಮೆಯ ಪ್ರತೀಕವಾಗಿರುವ ಈ ಬೃಹತ್ ಗಗನಚುಂಬಿ ಕಟ್ಟಡಗಳು ಸುಟ್ಟು ಬೂದಿಯಾಗುತ್ತವೆ. ಈ ಲೋಕಕ್ಕೆ ಕೊನೆಯ ಮಹಾನಾಶವು ಸಂಭವಿಸುವುದಕ್ಕೆ ಮೊದಲೇ, ಮಾನವರ ದುರಹಂಕಾರದ ಸಂಕೇತವಾಗಿರುವ ಮಹಾಸ್ತಾರಕಗಳು ಮುರಿದುಬಿದ್ದು ದೂಳಾಗುವವು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 3, ಪುಟ 418, 1901). ಕೊಕಾಘ 64.4

ಜಲಪ್ರಳಯಕ್ಕೆ ಮೊದಲು ಇದಂತ ಹಾಗೂ ಸೊದೋಮ್ ಗೊಮೊರ ಪಟ್ಟಣಗಳಂತೆ ಅತಿದುಷ್ಟವಾಗಿರುವ ಆಧುನಿಕ ನಗರಗಳಿಂದ ದೇವರು ತನ್ನ ಪವಿತ್ರಾತ್ಮನನ್ನು ಹಿಂತೆಗೆದುಕೊಳ್ಳುವನು. ಬಹಳ ಬೆಲೆಬಾಳುವ ಅಮೂಲ್ಯವಾದ ಅರಮನೆಯಂತ ಭವನಗಳು, ಅದ್ಭುತವಾದ ಕೌಶಲ್ಯದ ವಾಸ್ತುಶಿಲ್ಪ ಕಟ್ಟಡಗಳ ಮಾಲಿಕರು ಕ್ಷಮೆಯ ಮಿತಿಯನ್ನು ಮೀರಿದಾರೆಂದು ಕರ್ತನಿಗೆ ತಿಳಿದುಬಂದಾಗ, ಅವುಗಳು ಯಾವುದೇ ಮುನ್ಸೂಚನೆಯಿಲ್ಲದೆ ಕ್ಷಣಾರ್ಧದಲ್ಲಿ ನಾಶವಾಗುವವು. ಬೆಂಕಿ ನಿರೋಧಕವೆಂದು ತಿಳಿಯಲಾದ ಉನ್ನತವಾದ ಕಟ್ಟಡಗಳು ಬೆಂಕಿಯಿಂದ ನಾಶವಾಗುವವು. ಸ್ವಲ್ಪ ಕಾಲದಲ್ಲಿಯೇ ಲೋಕದ ವಾಸ್ತುಶಿಲ್ಪವು ಹೇಗೆ ನಾಶವಾಗುತ್ತವೆಂಬುದಕ್ಕೆ ಇವು ಉದಾಹರಣೆಯಾಗಿವೆ (ದಿಸ್ ಡೇ ವಿತ್ ಗಾಡ್, ಪುಟ 152, 1902). ಕೊಕಾಘ 64.5

ಕೋಟ್ಯಾಂತರ ಹಣ ಖರ್ಚು ಮಾಡಿ ಜನರು ಭವ್ಯವಾದ ಕಟ್ಟಡಗಳನ್ನು ಕಟ್ಟುವರು. ಅವುಗಳ ಸೌಂದರ್ಯ, ಬಾಳಿಕೆ ಹಾಗೂ ದೃಢತೆಯ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ. ಆದರೆ ಇಷ್ಟೆಲ್ಲಾ ಹಣ ಖರ್ಚುಮಾಡಿ ಭದ್ರತೆಗೆ ಹೆಚ್ಚು ಗಮನ ನೀಡಿದ್ದರೂ ಯೆರೂಸಲೇಮಿನ ದೇವಾಲಯದಂತೆ ಅವು ನಾಶವಾಗುತ್ತವೆಂದು ದೇವರು ದರ್ಶನದಲ್ಲಿ ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿ ತೋರಿಸಿದ್ದಾನೆ (ಆಡ್ವೆಂಟಿಸ್ಟ್ ಬೈಬಲ್ ಕಾಮೆಂಟರಿ, ಸಂಪುಟ 5, ಪುಟ 1098, 1906). ಕೊಕಾಘ 65.1