Go to full page →

ಸ್ಯಾನ್‌ಫ್ರಾನ್ಸಿಸ್ಕೋ ಮತ್ತು ಓಕ್ಲೆಂಡ್ ಕೊಕಾಘ 66

ಅಮೇರಿಕಾ ದೇಶದ ಸ್ಯಾನ್‌ಫ್ರಾನ್ಸಿಸ್ಕೋ ಮತ್ತು ಓಕ್ಲೆಂಡ್ ನಗರಗಳು ಸೊರೋಮ್, ಗೊಮೊರ ನಗರಗಳಂತಾಗುತ್ತವೆ. ದೇವರು ಅವುಗಳನ್ನು ಶಿಕ್ಷಿಸುತ್ತಾನೆ. ಶೀಘ್ರದಲ್ಲಿಯೇ ಅವು ಆತನ ನ್ಯಾಯತೀರ್ಪಿಗೆ ಒಳಗಾಗುತ್ತವೆ (ಮ್ಯಾನುಸ್ಕ್ರಿಪ್ಟ್ ರಿಲೀಸ್, 30, 1903). ಕೊಕಾಘ 66.1

1906ನೇ ಇಸವಿ ಏಪ್ರಿಲ್ 18, 19ನೇ ತಾರೀಕುಗಳಂದು ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ಭೂಕಂಪ ಮತ್ತು ಬೆಂಕಿ ಅನಾಹುತ ಉಂಟಾಯಿತು. ಅದರಲ್ಲಿ 503 ಜನರು ಸತ್ತು 350 ಮಿಲಿಯನ್ ಡಾಲರ್‌ನಷ್ಟು ಆಸ್ತಿ ನಷ್ಟವಾಯಿತು. ಇದಲ್ಲದೆ ಶೀಘ್ರದಲ್ಲಿಯೇ ಇದದ ವಿಪತ್ತುಗಳ ಮೂಲಕ ದೇವರು ತನ್ನ ಶಕ್ತಿ ತೋರಿಸುತ್ತಾನೆ. ಆ ನಗರದಲ್ಲಿ ದೇವರಾಜ್ಞೆಗಳು ಉಲ್ಲಂಘನೆಯಾಗಿವೆ ಹಾಗೂ ಮಹಾದುಷ್ಟತನ ಮತ್ತು ಪಾಪದಿಂದ ಕಲುಷಿತಗೊಂಡಿವೆ. ನಿನೆವೆ ಪಟ್ಟಣದ ಉದಾಹರಣೆ ನೆನಪಿಸಿಕೊಳ್ಳಿ. ದೇವರು ಆ ದುಷ್ಟಪಟ್ಟಣಕ್ಕೆ ಪ್ರವಾದಿಯಾದ ಯೋನನ ಮೂಲಕ ಒಂದು ವಿಶೇಷ ಸಂದೇಶದ ನೀಡಿ ಎಚ್ಚರಿಸಿದನು, ಆಧುನಿಕವಾದ ದುಷ್ಟನಗರಗಳು ನಿನೆವ ಪಟ್ಟಣದಂತ ಪಶ್ಚಾತ್ತಾಪ ಪಟ್ಟಲ್ಲಿ, ದೇವರು ಅಂತಹ ಅನೇಕ ಸಂದೇಶಗಳನ್ನು ನಗರಗಳಿಗೆ ಕೊಡುವನು. ಕೊಕಾಘ 66.2

ದೇವರಾಜ್ಞೆಗಳನ್ನು ಮೀರಿದ ಪರಿಣಾಮವಾಗಿ ಅನೇಕ ನಗರಗಳಲ್ಲಿ ದೇವರ ಉಗ್ರಕೋಪದ ಶಿಕ್ಷೆಯು ಕಂಡುಬಂದಿದ್ದರೂ, ಅವುಗಳು ಪಶ್ಚಾತ್ತಾಪ ಪಡುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಅಲ್ಲಿ ಹೋಟೆಲುಗಳು, ಮದ್ಯದಂಗಡಿಗಳು ಎಲ್ಲವೂ ಕಂಡುಬರುತ್ತವೆ ಹಾಗೂ ಅವು ಜನರನ್ನು ಶೋಧನೆಗೆ ಆಕರ್ಷಿಸುವ ಕೇಂದ್ರಗಳಾಗಿವೆ. ಕೊಕಾಘ 66.3