Go to full page →

ಭಾನುವಾರಾಚರಣೆ ಸಮರ್ಥಿಸುವವರು ಉಪಯೋಗಿಸುವ ವಾದಗಳು ಕೊಕಾಘ 74

ಕ್ರಿಸ್ತನು ಬರುವುದಕ್ಕೆ ಮೊದಲೇ ಬರಲಿರುವ ಏಳು ಉಪದ್ರವಗಳು ಹಾಗೂ ವಿಪತ್ತುಗಳಿಗೆ ಭಾನುವಾರದ ಪರಿಶುದ್ಧತೆಯನ್ನು ಮೀರುವುದೇ ಕಾರಣವಾಗಿದೆ ಎಂದು ಸೈತಾನನು ಜನರು ನಂಬುವಂತೆ ಮಾಡುತ್ತಾನೆ. ದೇವರ ಕೋಪವನ್ನು ಶಾಂತಗೊಳಿಸಬೇಕೆಂಬ ಆಲೋಚನೆಯಿಂದ ರಾಜಕೀಯವಾಗಿ ಪ್ರಭಾವಶಾಲಿಗಳಾದ ಜವರು ಭಾನುವಾರಾಚರಣೆಯನ್ನು ಕಡ್ಡಾಯವಾಗಿ ಜಾರಿಗೆ ತರುವ ಶಾಸನಗಳನ್ನು ಮಾಡುತ್ತಾರೆ (1899). ಕೊಕಾಘ 74.1

ಬಹಳ ವೇಗವಾಗಿ ಹಬ್ಬುತ್ತಿರುವ ನೈತಿಕ ಹಾಗೂ ಧಾರ್ಮಿಕ ಭಷ್ಟತೆಗೆ ಕ್ರೈಸ್ತ ಸಬ್ಬತ್ತೆಂದು ಕರೆಯಲ್ಪಡುವ ಭಾನುವಾರವನ್ನು ಅಪವಿತ್ರಗೊಳಿಸುತ್ತಿರುವುದೇ ಕಾರಣವೆಂದು ಪ್ರಭಾವಶಾಲಿಗಳಾದ ಈ ವರ್ಗದ ಜನರು ಹೇಳುತ್ತಾರೆ. ಅಲ್ಲದೆ ಭಾನುವಾರಾಚರಣೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವುದರಿಂದ ಸಮಾಜದ ನೈತಿಕತೆಯು ಬಹಳಷ್ಟು ಉತ್ತಮಗೊಳ್ಳುತ್ತದೆಂದು ಅವರು ಅಭಿಪ್ರಾಯಪಡುತ್ತಾರೆ. ಈ ಹೇಳಿಕೆಯು ವಿಶೇಷವಾಗಿ ನಿಜವಾದ ಸಬ್ಬತ್ತು ವ್ಯಾಪಕವಾಗಿ ಪ್ರಚಾರಗೊಂಡಿದ್ದ ಅಮೇರಿಕಾ ದೇಶದಲ್ಲಿ ಹೆಚ್ಚಾಗಿ ಒತ್ತಾಯಕ್ಕೆ ಒಳಪಡುತ್ತದೆ (ಗ್ರೇಟ್ ಕಾಂಟ್ರೊವರ್ಸಿ, ಪುಟ 587, 1911). ಕೊಕಾಘ 74.2