Go to full page →

ರಾಷ್ಟ್ರೀಯ ಭಾನುವಾರಾಚರಣೆಯ ಶಾಸನವೆಂದರೆ ರಾಷ್ಟ್ರೀಯ ಧರ್ಮಭ್ರಷ್ಟತೆ ಕೊಕಾಘ 76

ಅಮೇರಿಕಾ ದೇಶದ ಪಾರ್ಲಿಮೆಂಟ್ ಸದಸ್ಯರು ಜನಪ್ರಿಯತೆ ಹಾಗೂ ಅಧಿಕಾರ ಪಡೆದುಕೊಳ್ಳಲು ಭಾನುವಾರಾಚರಣೆಯ ಶಾಸನ ತರಬೇಕೆಂಬ ಒತ್ತಾಯಕ್ಕೆ ಮಣಿಯುವರು. ದೇವರಾಜ್ಞೆಯನ್ನು ಉಲ್ಲಂಘಿಸಿ, ಕಥೋಲಿಕ್ ಸಭೆಗೆ ಮನ್ನಣೆ ನೀಡುವುದರಿಂದ ಅಮೇರಿಕಾ ದೇಶವು ಸಂಪೂರ್ಣವಾಗಿ ದೇವರ ನೀತಿಯಿಂದ ಬೆರೆಯಾಗುತ್ತದೆ. ರೋಮನ್ ಸೈನ್ಯದ ಬರುವಿಕೆಯು ಯೆರೂಸಲೇಮಿನ ನಾಶವು ಸಮೀಪವಾಗಿದೆ ಎಂದು ಶಿಷ್ಯರಿಗೆ ಒಂದು ಮುನ್ಸೂಚನೆಯಾಗಿತ್ತು, ಅದೇ ರೀತಿ ಅಮೇರಿಕಾ ದೇಶದ ಈ ಧರ್ಮಭ್ರಷ್ಟತೆಯು ದೇವರ ತಾಳ್ಮೆಯು ಮಿತಿಮೀರಿದೆ ಎಂಬುದಕ್ಕೆ ನಮಗೆ ಒಂದು ಗುರುತಾಗಿದೆ (ಟೆಸ್ಟಿಮೊನೀಸ್‌ ಸಂಪುಟ 5, ಪುಟ 451, 1885). ಕೊಕಾಘ 76.2

ವಾರದ ಮೊದಲನೆ ದಿನದ ಸಬ್ಬತ್ತು ದೇವರಿಂದ ಪರಿಶುದ್ಧವಾಗಿ ಮಾಡಲ್ಪಡಲಿಲ್ಲ ಹಾಗೂ ಆಶೀರ್ವದಿಸಲ್ಪಡಲಿಲ್ಲ. ಆದುದರಿಂದ ಆ ದಿನಕ್ಕೆ ಗೌರವ ಕೊಡುವುದಿಲ್ಲವೆಂದು ನಾವು ದೃಢನಿರ್ಧಾರ ತೆಗೆದುಕೊಳ್ಳಬೇಕು. ಒಂದುವೇಳೆ ಭಾನುವಾರವನ್ನು ದೇವರ ಪರಿಶುದ್ದ ಸಬ್ಬತ್ತೆಂದು ಪೂಜ್ಯಭಾವದಿಂದ ಭಯಭಕ್ತಿ ತೋರಿಸಿದಲ್ಲಿ, ನಾವು ಮಹಾವಂಚಕನಾದ ಸೈತಾನನ ಪಕ್ಷಕ್ಕೆ ಸೇರುವವರಾಗಿದ್ದೇವೆ. ದೇವರಾಜ್ಞೆಯನ್ನು ನಿರರ್ಥಕಗೊಳಿಸಿ, ಮತಭ್ರಷ್ಟತೆಯು ರಾಷ್ಟ್ರೀಯ ಪಾಪವಾದಾಗ, ದೇವರು ತನ್ನ ಜನರ ಪರವಾಗಿ ಕಾರ್ಯಮಾಡುವನು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 3, ಪುಟ 388, 1889). ಕೊಕಾಘ 76.3

ಅಮೇರಿಕಾ ದೇಶದ ಜನರು ಏಶೇಷ ಅನುಕೂಲ ಪಡೆದಿದ್ದಾರೆ. ಆದರೆ ಅವರು ಧಾರ್ಮಿಕ ಸ್ವಾತಂತ್ರವನ್ನು ನಿರ್ಬಂಧಿಸಿ, ಪ್ರೊಟೆಸ್ಟೆಂಟ್ ಧರ್ಮವನ್ನು ಬಿಟ್ಟು ಕಥೋಲಿಕ್ ಸಭೆಯನ್ನು ಪ್ರೋತ್ಸಾಹಿಸಿದಾಗ, ಅವರ ಪಾಪದೋಷದ ಪರ್ಮಾಣವು ಮಿತಿಮೀರುವುದು. ಮತ್ತು ಪರಲೋಕದ ಪುಸ್ತಕಗಳಲ್ಲಿ ‘ರಾಷ್ಟ್ರೀಯ ಮತಭ್ರಷ್ಟತೆ’ಯು ದಾಖಲಿಸಲ್ಪಡುವುದು (ರಿವ್ಯೂ ಅಂಡ್ ಹೆರಾಲ್ಡ್, ಮೇ 2, 1893). ಕೊಕಾಘ 76.4