Go to full page →

ನ್ಯಾಯಾಲಯಗಳ ಮುಂದೆ ಕೊಕಾಘ 83

ಈ ಜಗತ್ತಿನ ಚರಿತ್ರೆಯ ಕೊನೆಯ ದಿನಗಳಲ್ಲಿ ವಾಸಿಸುವವರು, ಸತ್ಯಕ್ಕಾಗಿ ಹಿಂಸೆ ಅನುಭವಿಸುವುದೆಂದರೆ ಏನೆಂಬುದನ್ನು ತಿಳಿದುಕೊಳ್ಳುವರು. ನ್ಯಾಯಾಲಯಗಳಲ್ಲಿ ಅನ್ಯಾಯ ತುಂಬಿ ತುಳುಕುವುದು, ನಾಲ್ಕನೇ ದಿನದ ಆಚೆಗೆ ಸಂಬಂಧಪಟ್ಟಂತೆ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲವೆಂದು ನ್ಯಾಯಾಧೀಶರು ತಿಳಿದಿರುವುದರಿಂದ, ದೇವರಾಜ್ಞೆಗಳಿಗೆ ನಿಷ್ಠರಾಗಿರುವವರ ವಾದವನ್ನು ಕೇಳಿಸಿಕೊಳ್ಳಲು ನಿರಾಕರಿಸುವರು, ‘ನಮಗೊಂದು ನಿಯಮವುಂಟು, ಅದರ ಪ್ರಕಾರ ಇವನು ಸಾಯಬೇಕು’ ಎಂದು ಯೆಹೂದ್ಯರು ಪಿಲಾತನ ಮುಂದೆ ಕ್ರಿಸ್ತನ ವಿರುದ್ದ ಸಾಕ್ಷಿ ಹೇಳಿದಂತೆಯೇ, ಈ ನ್ಯಾಯಾಧೀಶರೂ ಸಹ ಉತ್ತರಿಸುವರು, ದೇವರಾಜ್ಞೆ ಅವರಿಗೆ ಏನೂ ಅಲ್ಲಿ ಸರ್ಕಾರವು ಜಾರಿಗೆ ತಂದ ಶಾಸನವು ಅವರಿಗೆ ಶ್ರೇಷ್ಠವಾದದ್ದು, ಮನುಷ್ಯರ ಈ ನಿಯಮಕ್ಕೆ ಗೌರವ ನೀಡುವವರಿಗೆ ದಯೆ ದೊರೆಯುವುದು, ಆದರೆ ಭಾನುವಾರದ ವಿಗ್ರಹಾರಾಧಕ ಸಬ್ಬತ್ತನ್ನು ಕೈಕೊಳ್ಳದವರಿಗೆ ಯಾವ ದಯೆಯೂ ದೊರೆಯುವುದಿಲ್ಲ (ಸೈನ್ಸ್ ಆಫ್ ದಿ ಟೈಮ್ಸ್, ಮೇ 26, 1898). ಕೊಕಾಘ 83.3

ನ್ಯಾಯಾಲಯಗಳ ಮುಂದೆ ದೇವರಾಜ್ಞೆ ಕೈಕೊಂಡು ನಡೆಯುವ ಸೆವೆಂತ್ ಡೇ ಅಡ್ವೆಂಟಿಸ್ಟರನ್ನು ಹಾಜರುಪಡಿಸಿದಾಗ, ದೇವದೊಂದಿಗೆ ನಮ್ಮ ವಿರೋಧತೆ ಉಂಟಾಗದಿದಲ್ಲಿ, ನಮ್ಮ ಹಕ್ಕುಗಳನ್ನು ಪ್ರತಿವಾದಿಸಬಾರದು. ನಾವು ನಮ್ಮ ಹಕ್ಕುಗಳಿಗಾಗಿ ಕೇಳಿಕೊಳ್ಳುತ್ತಿಲ್ಲ, ಆದರೆ ನಮ್ಮ ಸೇವೆಗೆ ದೇವರ ಹಕ್ಕಿಗಾಗಿ ಮೊರೆಯಿಡುತ್ತೇವೆ (ಮ್ಯಾನುಸ್ಕ್ರಿಪ್ಟ್ ರಿಲೀಸ್, ಸಂಪುಟ 5, ಪುಟ 69, 1895). ಕೊಕಾಘ 83.4