Go to full page →

ಎಲ್ಲಾ ತರನಾದ ಹಿಂಸೆ ಕೊಕಾಘ 84

ರೋಮನ್ ಕಥೋಲಿಕ್ ಸಭೆಯು ಪ್ರೊಟೆಸ್ಟೆಂಟರನ್ನು ಹಿಂಸಿಸಿದಾಗ, ಕ್ರಿಸ್ತನ ಧರ್ಮವು ಹೆಚ್ಚು ಕಡಿಮೆ ನಿರ್ನಾಮವಾಗಿತ್ತು. ಆದರೆ ಕೊನೆಯ ಕಾಲದಲ್ಲಿ ಪ್ರೊಟೆಸ್ಟೆಂಟರು ಹಾಗೂ ರೋಮನ್ ಕಥೋಲಿಕ್ಕರು ಒಂದುಗೂಡಿದಾಗ, ಏಳನೇ ದಿನದ ಸಬ್ಬತ್ತನ್ನು ಕೈಕೊಳ್ಳುವ ಅಡ್ವೆಂಟಿಸ್ಟರಿಗೆ ಬರುವ ಹಿಂಸೆಯು ಅಸಾಮಾನ್ಯವಾಗಿರುತ್ತದೆ (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 3, ಪುಟ 387, 1889). ದೇವರಾಜ್ಞೆಗಳನ್ನು ಕೈಕೊಳ್ಳುವ ನಿಷ್ಠಾವಂತರ ಮನಸ್ಸಾಕ್ಷಿಯನ್ನು ಉಲ್ಲಂಘಿಸುವಂತೆ ಒತ್ತಾಯಪಡಿಸಲು ಸೈತಾನನು ಸಾವಿರಾರು ವಿಧಾನಗಳನ್ನು ಉಪಯೋಗಿಸುವನು. ಕೊಕಾಘ 84.3

ಈಗ ನಡೆಯುತ್ತಿರುವ ಸಂಗತಿಗಳ ಬಗ್ಗೆ ನಾವು ಆಶ್ಚರ್ಯ ಪಡಬೇಕಾಗಿಲ್ಲ... ಭಯಾನಕ ಬೆಳವಣಿಗೆಗಳ ಬಗ್ಗೆ ನಾವು ವಿಸ್ಮಯಗೊಳ್ಳಬೇಕಾಗಿಲ್ಲ. ದೇವರಾಜ್ಞೆಗಳನ್ನು ತಮ್ಮ ಅಪವಿತ್ರ ಕಾಲುಗಳಿಂದ ತುಳಿಯುವವರು, ಯೇಸುಸ್ವಾಮಿಯನ್ನು ಅಪಮಾನಗೊಳಿಸಿ ದ್ರೋಹ ಮಾಡಿ ಶಿಲುಬೆಗೇರಿಸಿದ ಜನರಲ್ಲಿದಂತ ಭಾವನೆಯನ್ನೇ ಹೊಂದಿರುವರು. ಅವರು ತಾವು ಮಾಡಿದ ತಪ್ಪಿಗೆ ಯಾವುದೇ ಮನಸ್ಸಾಕ್ಷಿಯ ಅನುತಾಪವು ಸ್ವಲ್ಪವೂ ಇಲ್ಲದೆ, ತಮ್ಮ ತಂದೆಯಾಗಿರುವ ಸೈತಾನನ ಕೃತ್ಯಗಳನ್ನು ಮಾಡುವರು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 3, ಪುಟ 416, 1897). ಕೊಕಾಘ 84.4

ಸತ್ಯದಿಂದ ಬೋಧಿಸಲ್ಪಡಲು ಹಾಗೂ ಮನಸ್ಸನ್ನು ಚೈತನ್ಯಗೊಳಿಸಲು ಬಯಸುವವರು ಪಂಚಾಶತ್ತಮ ಹಬ್ಬದ ಸಮಯದ ಹಾಗೂ ಅನಂತರದ ಆದಿಕ್ರೈಸ್ತ ಸಭೆಯ ಚರಿತ್ರೆಯನ್ನು ಅಧ್ಯಯನ ಮಾಡಲಿ. ಅಪೋಸ್ತಲರ ಕೃತ್ಯಗಳ ಪುಸ್ತಕದಲ್ಲಿ ಪೌಲನು ಹಾಗೂ ಇತರ ಅಪೊಸ್ತಲರ ಅನುಭವಗಳನ್ನು ಎಚ್ಚರಿಕೆಯಿಂದ ಗಮನಿಸಿ, ಇಂದಿನ ಕಾಲದಲ್ಲಿಯೂ ಸಹ ದೇವಜನರು ಅಂತದ್ದೇ ಹಿಂಸೆಯನ್ನು ಅನುಭವಿಸಬೇಕು (ದಿ ಪಾಲನ್ ಕಲೆಕ್ಷನ್ ಪುಟ 118, 1907). ಕೊಕಾಘ 84.5