Go to full page →

ಕೆಲವರು ತಮ್ಮ ನಂಬಿಕೆಗಾಗಿ ಸೆರೆಮನೆಗೆ ಹಾಕಲ್ಪಡುವರು ಕೊಕಾಘ 85

ದೇವರ ಪವಿತ್ರ ಸಬ್ಬತ್ತನ್ನು ಅಪವಿತ್ರಗೊಳಿಸಲು ನಿರಾಕರಿಸುವ ಕೆಲವರನ್ನು ಸೆರೆಮನೆಗೆ ಹಾಕಲಾಗುವುದು (ದಿ ಪಾಲ್ಸನ್ ಕಲೆಕ್ಷನ್ ಪುಟ 118, 1907), ಬೇರೆ ಕೆಲವರನ್ನು ದೇಶಭ್ರಷ್ಟರನ್ನಾಗಿ ಗಡಿಪಾರು ಮಾಡುವರು ಹಾಗೂ ಗುಲಾಮರಂತೆ ನಡೆಸಿಕೊಳ್ಳಲಾಗುವುದು. ಮನುಷ್ಯ ಬುದ್ದಿಗೆ ಈಗ ಇವೆಲ್ಲವೂ ಅಸಾಧ್ಯವೆಂದು ತೋರಿ ಬರಬಹುದು. ಆದರೆ ಇವುಗಳ ಮೇಲೆ ದೇವರಾತ್ಮನ ಹತೋಟಿಯು ಜನರಿಂದ ಹಿಂತೆಗೆಯಲ್ಪಟ್ಟಾಗ, ಅವರು ಸೈತಾನನ ನಿಯಂತ್ರಣದಲ್ಲಿರುವರು. ಈ ದುಷ್ಟರು ದೈವೀಕ ಕಟ್ಟಳೆಗಳನ್ನು ದ್ವೇಷಿಸುವರು, ಆಗ ಅಪರಿಚಿತವಾದ ಬೆಳವಣಿಗೆ ಉಂಟಾಗುವುದು. ದೇವರ ಭಯ ಹಾಗೂ ಪ್ರೀತಿ ತೆಗೆಯಲ್ಪಟ್ಟಾಗ, ಮನುಷ್ಯರು ಬಹಳ ಕೂಲಿಗಳಾಗುವರು (ಗೇಟ್ ಕಾಂಟ್ರೊವರ್ಸಿ, ಪುಟ 608, 1911). ನಾವು ಕ್ರಿಸ್ತನಿಗಾಗಿ ಸಂಕಟ ಅನುಭವಿಸಬೇಕೆಂದು ಕರೆಯಲ್ಪಟ್ಟಲ್ಲಿ ಚಿಕ್ಕಮಕ್ಕಳು ತಮ್ಮ ತಂದೆತಾಯಿಯರಲ್ಲಿ ಹೇಗೆ ಭರವಸವಿಡುತ್ತಾರೋ, ಅದೇ ರೀತಿಯ ಭರವಸೆಯನ್ನು ಕ್ರಿಸ್ತನ ಮೇಲಿಟ್ಟು ಸೆರೆಮನೆಗೆ ಹೋಗಬೇಕು. ದೇವರಲ್ಲಿ ಇಂತಹ ನಂಬಿಕೆಯನ್ನು ಬೆಳೆಸಿಕೊಳ್ಳುವ ಸಮಯವು ಇದೇ ಆಗಿದೆ (ಅವರ್ ಹೈ ಕಾಲಿಂಗ್, ಪುಟ 357, 1892). ಕೊಕಾಘ 85.4