Go to full page →

ಹಿಂಸೆ ಬಂದಾಗ ಧೈರ್ಯದಿಂದ ನಿಲ್ಲುವುದು ಹೇಗೆ? ಕೊಕಾಘ 86

ದೇವರ ಆಶ್ರಯವನ್ನು ಬಿಟ್ಟು ಬೇರೆಲ್ಲಾ ಆಶ್ರಯವನ್ನು ನಾವು ತೊರೆಯಬೇಕಾಗುವುದು. ಸ್ನೇಹಿತರು ವಿಶ್ವಾಸಘಾತಕರಾಗಿ ಸಮಯದಲ್ಲಿ ಕೈಕೊಟ್ಟ ನಮ್ಮನ್ನು ಮೋಸದಿಂದ ಹಿಡಿದುಕೊಡುವರು. ಶತ್ರುವಾದ ಸೈತಾನನಿಂದ ವಂಚನೆಗೆ ಒಳಗಾದ ಬಂಧುಬಾಂಧವರು ನಮ್ಮನ್ನು ವಿರೋಧಿಸುವ ಮೂಲಕ ದೇವರ ಸೇವೆ ಮಾಡುತ್ತೇವೆಂದು ತಿಳಿದುಕೊಂಡು ನಾವು ನಮ್ಮ ನಂಬಿಕೆಯನ್ನು ನಿರಾಕರಿಸುತ್ತೇವೆಂಬ ನಿರೀಕ್ಷೆಯಲ್ಲಿ ನಮಗೆ ಬಹಳ ಕಠಿಣವಾದ ಪರಿಸ್ಥಿತಿ ಉಂಟಾಗುವಂತೆ ನಮ್ಮೆಲ್ಲಾ ಪ್ರಯತ್ನ ಮಾಡುವರು, ಆದರೆ ಎಂತಹ ಕಷ್ಟ ಸಂಕಟಗಳೇ ಬರಲಿ, ನಾವು ಕ್ರಿಸ್ತನಲ್ಲಿ ಬಲವಾದ ಆಶ್ರಯ ಪಡೆದುಕೊಳ್ಳಬೇಕು (ಮಾರನಾಥ, 197, 1889). ಕೊಕಾಘ 86.3

ನಾವು ಕ್ರಿಸ್ತನಲ್ಲಿ ಬಲವಾಗಿ ಬೇರೂರಿದ್ದಲ್ಲಿ ಮಾತ್ರ, ಈ ಹೋರಾಟದಲ್ಲಿ ನಾವು ನಂಬಿಕೆಯಲ್ಲಿ ದೃಢವಾಗಿ ನಿಲ್ಲುವ ಏಕೈಕ ಮಾರ್ಗವಾಗಿದೆ. ಕ್ರಿಸ್ತನ ಸತ್ಯವನ್ನು ನಾವು ಸ್ವೀಕರಿಸಬೇಕು. ಈ ಸತ್ಯವು ನಮ್ಮೆಲ್ಲಾ ಅಗತ್ಯಗಳನ್ನು ಪೂರೈಸುವುದು, ಶಿಲುಬೆಗೆ ಹಾಕಲ್ಲಟ್ಟ ಕ್ರಿಸ್ತನು ಹಾಗೂ ಕ್ರಿಸ್ತನು ನಮ್ಮ ನೀತಿ ಎಂಬ ಸಂದೇಶ ಮಾತ್ರ ನಮ್ಮ ಆತ್ಮೀಕ ಹಸಿವನ್ನು ತೃಪ್ತಿಗೊಳಿಸುವುದು. ಪ್ರಮುಖವಾದ ಈ ಮಹಾಸತ್ಯದಲ್ಲಿ ಜನರ ಆಸಕ್ತಿ ದೃಢವಾದಾಗ, ನಂಬಿಕೆ, ನಿರೀಕ್ಷೆ ಹಾಗೂ ಧೈರ್ಯವು ಅವರಲ್ಲುಂಟಾಗುವುದು (ಜನರಲ್ ಕಾನ್ಫರೆನ್ಸ್ ಬುಲೆಟಿನ್, ಜನವರಿ 28, 1893). ಕೊಕಾಘ 86.4

ಅನೇಕರು ತಮ್ಮ ನಂಬಿಕೆಗಾಗಿ ಮನೆಯಿಂದ ಮತ್ತು ಕುಟುಂಬದಿಂದ ಹೊರ ಹಾಕಲ್ಪಡುವರು, ಆದರೆ ಅವರು ತಮ್ಮ ಹೃದಯಗಳನ್ನು ಕ್ರಿಸ್ತನಿಗೆ ಒಪ್ಪಿಸಿ, ಆತನ ಕೃಪೆಯ ಸಂದೇಶವನ್ನು ಸ್ವೀಕರಿಸಿ, ದೇವಕುಮಾರನಾದ ಆತನಲ್ಲಿ ಆಧಾರಗೊಂಡಾಗ, ಹರ್ಷಭರಿತರಾಗಿರುವರು (ಸೈನ್ಸ್ ಆಫ್ ದಿ ಟೈಮ್ಸ್, ಜೂನ್ 2, 1898). ಕೊಕಾಘ 86.5