Go to full page →

ಅಧ್ಯಾಯ-11
ಕೊನೆಯ ಕಾಲದಲ್ಲಿ ಸೈತಾನನ ವಂಚನೆಗಳು ಕೊಕಾಘ 89

ಕ್ರೈಸ್ತ ಧರ್ಮದ ವೇಷದಲ್ಲಿ ಕೊಕಾಘ 89

ಈ ಲೋಕದ ಚರಿತ್ರೆಯ ಮುಕ್ತಾಯ ಸಮೀಪಿಸುತ್ತಿದೆ ಮತ್ತು ಸೈತಾನನು ಹಿಂದೆಂದಿಗಿಂತಲೂ ಹೆಚ್ಚಾಗಿ ತನ್ನ ಕಾರ್ಯ ಮಾಡುತ್ತಿದ್ದಾನೆ. ಅವನು ಕ್ರೈಸ್ತ ದೇಶಗಳ ನಿರ್ದೆಶಕನಂತೆ ನಟಿಸಲು ಪ್ರಯತ್ನಿಸುತ್ತಿದ್ದಾನೆ. ಅದ್ಭುತವಾದ ಉಗ್ರತೆಯಿಂದ ಅವನು ಮೋಸದ ಪವಾಡಗಳನ್ನು ಮಾಡುತ್ತಿದ್ದಾನೆ. ಸೈತಾನನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ತಿರುಗಾಡುತ್ತಿದ್ದಾನೆ (1 ಪೇತ್ರನು 5:8). ಸಂಪೂರ್ಣ ಜಗತ್ತನ್ನೇ ತನ್ನ ಒಕ್ಕೂಟಕ್ಕೆ ಸೇರಿಸಿಕೊಳ್ಳಬೇಕೆಂದು ಅವನು ಬಯಸುತ್ತಾನೆ. ಕ್ರೈಸ್ತಧರ್ಮದ ವೇಷದ ಹಿಂದೆ ತನ್ನ ವಿರೂಪತೆಯನ್ನು ಮರೆಮಾಚಿದ ಸೈತಾನನು ಕ್ರೈಸ್ತರ ಗುಣಸ್ವಭಾವವನ್ನು ಧರಿಸಿಕೊಂಡು, ಸ್ವತಃ ತಾನೇ ಕ್ರಿಸ್ತನೆಂದು ಹೇಳಿಕೊಳ್ಳುತ್ತಾನೆ (ಮ್ಯಾನುಸ್ಕ್ರಿಪ್ಟ್ ರಿಲೀಸ್‌ ಸಂಪುಟ 8, ಪುಟ 346, 1901). ಕೊಕಾಘ 89.1

ಶತ್ರುವಾದ ಸೈತಾನನು ತನ್ನ ಉದ್ದೇಶಕ್ಕೆ ತಕ್ಕಂತೆ ತನ್ನ ಮಧ್ಯವರ್ತಿಗಳ ಮೂಲಕ ಕ್ರೈಸ್ತಧರ್ಮದ ಮೋಸದ ಹೆಸರಿನಲ್ಲಿ ಅದ್ಭುತವಾದ ಶಕ್ತಿಯನ್ನು ತೋರಿಸುವನು. “... ಸಾಧ್ಯವಾದರೆ ದೇವರಾದುಕೊಂಡವರನ್ನೂ ಸಹ ಮೋಸಗೊಳಿಸುವನು’ (ಮತ್ತಾಯ 24:14). ದೆವ್ವಗಳು ಸತ್ಯವೇದದಲ್ಲಿ ನಂಬಿಕೆಯಿಟ್ಟಂತೆ ನಟಿಸಿ, ಸಭೆಗೆ ಗೌರವ ಸೂಚಿಸುವುದರಿಂದ, ಅವುಗಳ ಕಾರ್ಯಗಳು ದೈವೀಕ ಶಕ್ತಿಯೆಂದು ಜನರು ಒಪ್ಪಿಕೊಳ್ಳುವರು (ಗ್ರೇಟ್ ಕಾಂಟ್ರೊವರ್ಸಿ, 588, 1911). ಕೊಕಾಘ 89.2