Go to full page →

ಅದ್ಭುತಗಳು ಮಾಡಲ್ಪಡುತ್ತವೆ ಕೊಕಾಘ 95

ನಮ್ಮ ಮುಂದೆಯೇ ರೋಗಿಗಳು ವಾಸಿಯಾಗುತ್ತಾರೆ. ನಮ್ಮ ಕಣ್ಮುಂದೆ ಅದ್ಭುತ ಕಾರ್ಯಗಳು ನಡೆಯುವವು. ಸೈತಾನನ ಹುಸಿಯಾದ ಅದ್ಭುತ ಕಾರ್ಯಗಳು ಸಂಪೂರ್ಣವಾದ ಪ್ರಮಾಣದಲ್ಲಿ ನಡೆಯುವಾಗ ಆ ಶೋಧನೆಗಳನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆಯೇ? (ಟೆಸ್ಟಿಮೊನೀಸ್‌ ಸಂಪುಟ 1, ಪುಟ 302, 1862). ಕೊಕಾಘ 95.4

ದುರಾತ್ಮಗಳ ಶಕ್ತಿಯ ಪ್ರಭಾವದಿಂದ ಜನರು ಅದ್ಭುತಕಾರ್ಯಗಳನ್ನು ಮಾಡುವರು. ತಮ್ಮ ಮೋಹಕ ಶಕ್ತಿಯಿಂದ ಜನರಲ್ಲಿ ರೋಗವುಂಟು ಮಾಡಿ, ಅನಂತರ ಆ ಶಕ್ತಿಯನ್ನು ಹಿಂತೆಗೆದುಕೊಳ್ಳುವರು. ಇದರಿಂದ ರೋಗಿಗಳಾಗಿದ್ದವರು ಅದ್ಭುತವಾದ ರೀತಿಯಲ್ಲಿ ಗುಣ ಹೊಂದಿದೆವೆಂದು ಹೇಳುವರು. ಇದನ್ನು ಸೈತಾನನು ಪದೇ ಪದೇ ಮಾಡುತ್ತಾನೆ (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 2, ಪುಟ 53, 1903). ಕೊಕಾಘ 95.5

ಸೈತಾನನು ನಿಕಟವಾಗಿ ಸಂಪರ್ಕ ಹೊಂದಿರುವ ಅತ್ಯದ್ಭುತವಾದ ದೃಶ್ಯಗಳು ಶೀಘ್ರದಲ್ಲಿಯೇ ನೆರವೇರಲಿವೆ. ಸೈತಾನನು ಅದ್ಬುತಗಳನ್ನು ಮಾಡುವನೆಂದು ಸತ್ಯವೇದವು ತಿಳಿಸುತ್ತದೆ. ಅವನು ಜನರಿಗೆ ರೋಗ ತರಿಸಿ, ನಂತರ ತಕ್ಷಣವೇ ತನ್ನ ಪೈಶಾಚಿಕ ಶಕ್ತಿಯಿಂದ ಅದನ್ನು ಹಿಂತೆಗೆದುಕೊಳ್ಳುವನು. ಆಗ ಅವರು ಗುಣ ಮಾಡಲ್ಪಟ್ಟರೆಂದು ತಿಳಿದುಕೊಳ್ಳುವರು. ಮೇಲು ನೋಟಕ್ಕೆ ಕಾಣುವ ಈ ಸ್ವಸ್ಥೆತೆಯು ಸೆವೆಂತ್ ಡೇ ಅಡ್ವೆಂಟಿಸ್ಟರಿಗೆ ಒಂದು ರೀತಿಯ ಪರೀಕ್ಷೆಯಾಗಿರುವುದು (ಪುಟ 53). ಕೊಕಾಘ 95.6

ಸೈತಾನನು ಈ ತರಹವಾದ ವಿಭಿನ್ನ ವಂಚನೆಗಳಿಂದ ಅದ್ಭುತ ಕಾರ್ಯಗಳಿಂದ ಅವು ಯಥಾರ್ಥವಾದವುಗಳೆಂದು ಕಾಣುವಂತೆ ಮಾಡುವನು. ಐಗುಪ್ತ ದೇಶದಿಂದ ಇಸ್ರಾಯೇಲ್ಯರು ಬಿಡುಗಡೆಯಾಗುವ ಸಮಯದಲ್ಲಿ ಇಂತದ್ದನ್ನು ಒಂದು ಪರೀಕ್ಷೆಯ ಪ್ರಶ್ನೆಯಾಗುವಂತೆ ಮಾಡಲು ಅವನು ನಿರೀಕ್ಷಿಸಿದ್ದನು (ಪುಟ 52). ಕೊಕಾಘ 96.1