Go to full page →

ಅದ್ಭುತ ಕಾರ್ಯಗಳಿಂದ ಏನನ್ನೂ ಸಾಧಿಸಲಾಗದು ಕೊಕಾಘ 97

ವೈರಿಯಾದ ಸೈತಾನನು ಪ್ರಕಾಶಮಾನವಾದ ದೂತನ ವೇಷದಲ್ಲಿ ಬಂದಾಗ, ಅವನಿಂದ ಅದ್ಭುತ ಕಾರ್ಯಗಳನ್ನು ಮಾಡುವ ಶಕ್ತಿ ತೋರಿಸಲಿಲ್ಪಟಾಗ ಸತ್ಯವೇನೆಂದು ನೀವು ತಿಳಿದುಕೊಳ್ಳುವಂತೆ ದೈವೀಕ ಬೆಳಕಿಗಾಗಿ ದೇವರಲ್ಲಿ ಪ್ರಾರ್ಥಿಸಿ ಇದರಿಂದ ದೇವರ ಯಥಾರ್ಥವಾದ ಕಾರ್ಯ ಮತ್ತು ಅಂಧಕಾರದ ಶಕ್ತಿಗಳ ಮೋಸದ ಅನುಕರಣೆಯ ಕಾರ್ಯದ ನಡುವಿನ ವ್ಯತ್ಯಾಸಗಳನ್ನು ತಿಳಿದುಕೊಳ್ಳಬಹುದು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 3, ಪುಟ 389, 1888). ಕೊಕಾಘ 97.2

ದೇವರ ವಾಕ್ಯ, ಸಾರುವುದು ಹಾಗೂ ಅದ್ಭುತ ಕಾರ್ಯಗಳ ಮೂಲಕ ಜನರನ್ನು ಸಹ ಮಾಡಿ ಅವರ ಬಾಧೆ, ಕಷ್ಟಗಳನ್ನು ಬಿಡಿಸುವುದು ಕ್ರಿಸ್ತನ ಸೇವೆಯ ಮಾರ್ಗವಾಗಿತ್ತು, ಆದರೆ ಈ ದಿನಗಳಲ್ಲಿ ಈ ರೀತಿ ಸೇವೆ ಮಾಡಲಾಗದೆಂದು ದೇವರು ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿ ತಿಳಿಯಪಡಿಸಿದ್ದಾನೆ (ದೇವಜನರು ಮೂರುದೂತದ ವರ್ತಮಾನ ಸಾರುವಾಗ ಅದ್ಭುತ ಕಾರ್ಯಗಳು ನಡೆಯುವವು. ಆದರೆ ಅವುಗಳಿಗೆ ಕ್ರಿಸ್ತನ ಕಾಲದಲ್ಲಿದ್ದಂತ ಪಾಮುಖ್ಯತೆ ಈಗಿರುವುದಿಲ್ಲ, ಅದ್ಭುತ ಮಾಡುವುದು ಎಲ್ಲಾ ಸಮಯದಲ್ಲಿಯೂ ದೆವೀಕ ಅನುಮೋದನೆಗೆ ಸಾಕ್ಷಾ ಧಾರವಲ್ಲ. ಯಾಕೆಂದರೆ ಸೈತಾನನೂ ಸಹ ಅದ್ಭುತಗಳನ್ನು ಮಾಡುವ ಮೂಲಕ ತನ್ನ ಶಕ್ತಿ ತೋರಿಸುತ್ತಾನೆ. ದೇವರಿಂದ ಬಂದದ್ದೆಂದು ಹೇಳಿಕೊಳ್ಳುವ ರೋಗ ಗುಣಪಡಿಸುವ ನಿಜವಲ್ಲದ ಅದ್ಭುತ ಕಾರ್ಯಗಳು ನಡೆಯುವುದರಿಂದ ದೇವರ ಸೇವಕರು ಇಂದು ಅದ್ಭುತ ಕಾರ್ಯಗಳ ಮೂಲಕ ಸೇವೆ ಮಾಡಲಾಗುತ್ತಿಲ್ಲ (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 2, ಪುಟ 54, 1904), ಸೈತಾನನೂ ಸಹ ಹೆಚ್ಚು ಕಡಿಮೆ ಪ್ರಾಮಾಣಿಕವಾದದನ್ನು ಹೋಲುವಂತ ಅದ್ಭುತಗಳನ್ನು ಮೋಸದಿಂದ ಮಾಡುವುದರಿಂದ, ದೇವರ ಮಕ್ಕಳು ಅದ್ಭುತ ಕಾರ್ಯಗಳನ್ನು ಮಾಡುವುದರಿಂದ ಭದ್ರತೆ ಪಡೆದುಕೊಳ್ಳಲಾರರು (ಟೆಸ್ಟಿಮೊನೀಸ್‌ ಸಂಪುಟ 9, ಪುಟ 16, 1909). ಕೊಕಾಘ 97.3