Go to full page →

ಯುದ್ಧಗಳು ಹಾಗೂ ವಿಪತ್ತುಗಳು ಕೊಕಾಘ 13

ಚಂಡಮಾರುತವು ಬರಲಿದೆ, ನಾವು ದೇವರಿಗೆ ಪಶ್ಚಾತ್ತಾಪಪಟ್ಟು, ಕಿಸ್ತನ ಮೇಲಣ ನಂಬಿಕೆಯಿಂದ ಅದರ ಉಗ್ರತೆಯನ್ನು ಎದುರಿಸಲು ಸಿದ್ದರಾಗಬೇಕಿದೆ. ಈ ಲೋಕವನ್ನು ಭಯಂಕರವಾಗಿ ಅಲುಗಾಡಿಸಲು ಕರ್ತನು ಬರುತ್ತಾನೆ. ಎಲ್ಲಾ ಕಡೆಗಳಲ್ಲಿಯೂ ಕಷ್ಟಸಂಕಟಗಳು ಕಂಡು ಬರುವವು. ಸಾವಿರಾರು ಹಡಗುಗಳು ಸಮುದ್ರದಲ್ಲಿ ಮುಳುಗುವವು, ನೌಕಾದಳವು ಮುಳುಗಿ ಲಕ್ಷಾಂತರ ಜನರು ಸಾಯುವರು. ಅನಿರೀಕ್ಷಿತವಾಗಿ ಕಾಡ್ಗಿಚ್ಚು ಉಂಟಾಗಿ, ಮನುಷ್ಯರ ಯಾವ ಪ್ರಯತ್ನದಿಂದ ಅದನ್ನು ಆರಿಸಲು ಸಾಧ್ಯವಾಗುವುದಿಲ್ಲ. ಬೆಂಕಿಯ ತೀವ್ರತೆಯಿಂದ ಲೋಕದ ಅರಮನೆಗಳು ಬೆಂದು ಹೋಗುವವು. ರೈಲು ಅಪಘಾತಗಳು ಬಹಳವಾಗಿ ಸಂಭವಿಸುವವು. ಪ್ರಯಾಣದಲ್ಲಿ ಯಾವುದೇ ಎಚ್ಚರಿಕೆಯಿಲ್ಲದೆ, ಅಪಘಾತಗಳು ಸಂಭವಿಸಿ ಜನರು ಸಾಯುವರು. ಅಂತ್ಯವು ಸಮೀಪಿಸಿದೆ, ಕಷಾಕಾಲವು ಮುಗಿಯುತ್ತಿದೆ. ಯೆಹೋವನು ಸಿಕ್ಕುವ ಕಾಲದಲ್ಲಿ ಆತನನ್ನು ಹುಡುಕೋಣ. ಆತನು ಹತ್ತಿರದಲ್ಲಿರುವಾಗ ಆತನನ್ನು ಆಶ್ರಯಿಸಿಕೊಳ್ಳೋಣ (ಮೆಸೇಜಸ್ ಟು ಯಂಗ್ ಪೀಪಲ್, ಪುಟಗಳು 89, 90 (1890). ಕೊಕಾಘ 13.4

ಜಗತ್ತಿನ ಇತಿಹಾಸದ ಕೊನೆಯಲ್ಲಿ ಯುದ್ಧಗಳಾಗುವವು, ಬಾಧೆ, ಉಪದ್ರವಗಳು, ಪ್ರಾಣಕ್ಕೆ ಮಾರಕವಾದ ಅಂಟುರೋಗಗಳು, ಬರಗಾಲಗಳು ಉಂಟಾಗುವವು. ಸಮುದ್ರ, ಸಾಗರಗಳಲ್ಲಿ ಸುನಾಮಿಯಂತ ಚಂಡಮಾರುತ ಉಂಟಾಗಿ ನೀರು ತನ್ನ ಇತಿಮಿತಿಯನ್ನು ಮೀರಿ ಉಕ್ಕೇರುವುದು. ಬೆಂಕಿ ಅನಾಹುತ ಮತ್ತು ಜಲಪ್ರಳಯ | ಪ್ರವಾಹದಿಂದ ಸಾಕಷ್ಟು ಆಸ್ತಿ ಮತ್ತು ಪ್ರಾಣಹಾನಿಯಾಗುವುದು. ಯೇಸುಸ್ವಾಮಿಯು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಪಡಿಸುತ್ತಿರುವ ಅರಮನೆಗಳಿಗೆ ಹೋಗಲು ನಾವು ಸಿದ್ಧತೆ ಮಾಡಿಕೊಳ್ಳಬೇಕು (ಮಾರನಾಥ, ಪುಟ 174 (1897). ಕೊಕಾಘ 13.5