Go to full page →

ಹಿಂಗಾರು ಮಳೆಯು ಸಭೆಗೆ ಐತಿಹಾಸಿಕವಾಗಿ ಅನ್ವಯವಾಗುವಿಕೆ ಕ್ರಿ.ಶ. 31 ರಲ್ಲಿ ಪಂಚಾಶತ್ತಮ ಹಬ್ಬದಲ್ಲಿ ಮುಂಗಾರು ಮಳೆ ಬಂದಿತು ಕೊಕಾಘ 106

ಕ್ರಿಸ್ತನ ಆಜ್ಞೆಗೆ ವಿಧೇಯರಾಗಿ ಶಿಷ್ಯರು ದೇವರ ವಾಗ್ದಾನದಂತೆ ಪರಿಶುದ್ಧಾತ್ಮನ ಸುರಿಸುವಿಕೆಗಾಗಿ ಯೆರೂಸಲೇಮಿನಲ್ಲಿ ಕಾದುಕೊಂಡಿದ್ದರು. ಆಗ ಅವರು ಸೋಮಾರಿಗಳಂತೆ ಕಾದುಕೊಂಡಿರಲಿಲ್ಲ, ಬದಲಾಗಿ ಸತ್ಯವೇದವು ತಿಳಿಸುವಂತೆ “ಅವರು ಯಾವಾಗಲೂ ದೇವಾಲಯದಲ್ಲಿ ದೇವರನ್ನು ಕೊಂಡಾಡುತ್ತಿದ್ದರು (ಲೂಕ 24:53). ಕೊಕಾಘ 106.4

‘ವಾಗ್ದಾನದ ನೆರವೇರುವಿಕೆಗಾಗಿ ಶಿಷ್ಯರು ಕಾದುಕೊಂಡಿರುವಾಗ, ಅವರು ಹೃದಯದಲ್ಲಿ ನಿಜವಾದ ಪಶ್ಚಾತ್ತಾಪದಿಂದ ನಮ್ಮನ್ನು ತಗ್ಗಿಸಿಕೊಂಡು, ತಮ್ಮ ಅಪನಂಬಿಕೆಯನ್ನು ಅರಿಕೆ ಮಾಡಿಕೊಂಡರು, ಶಿಷ್ಯರು ತಮ್ಮ ದಿನನಿತ್ಯದ ಸಂಭಾಷಣೆಯಲ್ಲಿ ಪಾಪಿಗಳನ್ನು ಕ್ರಿಸ್ತನ ಕಡೆಗೆ ಬರುವಂತೆ ಮಾಡುವ ಯೋಗ್ಯವಾದ ಮಾತುಗಳನ್ನು ಆಡಲು ತಮ್ಮನ್ನು ದೇವರು ಯೋಗ್ಯರನ್ನಾಗಿ ಮಾಡಬೇಕೆಂದು ಮನಃಪೂರ್ವಕವಾಗಿ ಪ್ರಾರ್ಥಿಸಿದರು. ಅವರು ತಮ್ಮೆಲ್ಲಾ ಭಿನ್ನಾಭಿಪ್ರಾಯಗಳನ್ನು ಬಿಟ್ಟರು; ಎಲ್ಲರಲ್ಲಿ ಮೊದಲನೆಯದವರಾಗಬೇಕೆಂಬ ಆಸೆ ತ್ಯಜಿಸಿ ಕ್ರೈಸ್ತ ಅನ್ಯೋನ್ಯತೆಯಲ್ಲಿ ಅವರು ಒಟ್ಟಾಗಿ ಕೂಡಿ ಬಂದಿದ್ದರು’ (ಆಕ್ಟ್ಸ್ ಆಫ್ ದಿ ಅಫೋಸ್ತಲ್ಸ್, ಪುಟಗಳು 35-37, 1911). ಕೊಕಾಘ 106.5

ಅಪೋಸ್ತಲರ ಕಾಲದಲ್ಲಿ ಉಂಟಾದ ಪವಿತ್ರಾತ್ಮನ ವರದ ಸುರಿಯುವಿಕೆಯು, ಮುಂಗಾರು ಮಳೆಯ ಆರಂಭವಾಗಿದ್ದು, ಅದರ ಫಲಿತಾಂಶವು ಅದ್ಭುತವಾಗಿತ್ತು. ಅಂತ್ಯಕಾಲದವರೆಗೂ ಪರಿಶುದ್ಧಾತ್ಮನ ಪ್ರಸನ್ನತೆಯು ನಿಜವಾದ ಸಭೆಯಲ್ಲಿ ನೆಲಸಿರುವುದು (ಪುಟಗಳು 54-55, 1911). ಕೊಕಾಘ 107.1