Go to full page →

ಕೆಲಸಗಾರರು ಪವಿತ್ರಾತ್ಮನಿಂದ ಅರ್ಹರೂ, ದಕ್ಷರೂ ಆಗುತ್ತಾರೆ ಕೊಕಾಘ 118

ಗಂಭೀರವಾದ ಈ ಕೊನೆಯ ಕಾರ್ಯದಲ್ಲಿ ಕೆಲವು ಮಹಾನ್ ವ್ಯಕ್ತಿಗಳು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಯಾರೂ ನಿರೀಕ್ಷಿಸದಂತ ರೀತಿಯಲ್ಲಿ ದೇವರು ನಮ್ಮ ಕಾಲದಲ್ಲಿ ಕಾರ್ಯ ಮಾಡುತ್ತಾರೆ. ದೇವರು ನಮ್ಮಲ್ಲಿ ವೈಜ್ಞಾನಿಕ ಸಂಸ್ಥೆಗಳಿಂದ ತರಬೇತಿ ಪಡೆದವರನ್ನಲ್ಲ, ಬದಲಾಗಿ ತನ್ನ ಪರಿಶುದ್ಧಾತ್ಮನಿಂದ ಶಿಕ್ಷಣ ಪಡೆದುಕೊಂಡ ಕೆಲವರನ್ನು ಉನ್ನತ ಸ್ಥಾನಕ್ಕೇರಿಸುತ್ತಾನೆ. ಸೌಲಭ್ಯಗಳನ್ನು ತಿರಸ್ಕರಿಸಬಾರದು ಅಥವಾ ಖಂಡಿಸಬಾರದು. ಅವು ದೇವರಿಂದ ಪ್ರತಿಷ್ಠಿಸಲ್ಪಟ್ಟವು. ಆದರೆ ಅವು ಕೇವಲ ಹೊರಗಿನ ಅರ್ಹತೆಗಳಾಗಿವೆ. ತಾನು ವಿದ್ವಾಂಸರು ಮತ್ತು ತಾವೇ ಪಾಮುಖ್ಯರೆಂದು ಹೇಳಿಕೊಳ್ಳುವ ಮನುಷ್ಯರ ಮೇಲೆ ಆತುಕೊಂಡಿಲ್ಲವೆಂದು ದೇವರು ಪ್ರಕಟಪಡಿಸಲಿದ್ದಾನೆ (ಟೆಸ್ಟಿಮೊನೀಸ್, ಸಂಪುಟ 5, ಪುಟಗಳು 80, 82, 1882). ಕೊಕಾಘ 118.3

ದೈವೀಕ ಬೆಳಕಿಗಾಗಿ ಮನಪೂರ್ವಕವಾಗಿ ಹುಡುಕುವವರು ಹಾಗೂ ದೇವರ ಪರಿಶುದ್ಧ ವಾಕ್ಯದ ಬೆಳಕಿನ ಪ್ರತಿಯೊಂದು ಕಿರಣವನ್ನೂ ಸಂತೋಷದಿಂದ ಒಪ್ಪಿಕೊಳ್ಳುವವರಿಗೆ ಮಾತ್ರ ಅದು ಕೂಡಲ್ಪಡುವುದು. ಇಂತವರ ಮೂಲಕವೇ ದೇವರು ಸಮಸ್ತ ಲೋಕವನ್ನು ತನ್ನ ಮಹಿಮೆಯಿಂದ ಪ್ರಕಾಶಿಸುವ ಬೆಳಕು ಹಾಗೂ ಅಧಿಕಾರ ಶಕ್ತಿಯನ್ನು ಪ್ರಕಟಿಸುವನು (ಟೆಸ್ಟಿಮೊನೀಸ್‌ ಸಂಪುಟ 5, ಪುಟ 729, 1889). ಕೊಕಾಘ 118.4

ಹೃದಯ ಹಾಗೂ ಆಲೋಚನೆಯಲ್ಲಿ ಶುದ್ಧತ್ವ ಮತ್ತು ಶಿಸ್ತಿನ ಅಗತ್ಯವಿದೆ. ಇದು ಅಪ್ರತಿಮವಾದ ತಲಾಂತು (ಪ್ರತಿಭೆ), ಜ್ಞಾನ ಅಥವಾ ಸಮಯೋಚಿತ ಪ್ರಜ್ಞೆಗಿಂತ ಹೆಚ್ಚಿನ ಮೌಲ್ಯವುಳ್ಳದ್ದಾಗಿದೆ, ಸಾಮರ್ಥ್ಯವುಳ್ಳ ಆದರೆ ಸರಿಯಾದ ರೀತಿಯಲ್ಲಿ ಅದನ್ನು ಉಪಯೋಗಿಸಿದವರಿಗಿಂತ ಕರ್ತನಾದ ಯೆಹೋವನ ಮಾತಿಗೆ ವಿಧೇಯತೆ ತೋರುವ ಸಾಮಾನ್ಯ ವ್ಯಕ್ತಿಗಳು ದೇವರ ಸೇವೆಗೆ ಉತ್ತಮವಾಗಿ ಅರ್ಹರಾಗಿರುತ್ತಾರೆ (ರಿವ್ಯೂ ಅಂಡ್ ಹೆರಾಲ್ಡ್, ನವೆಂಬರ್ 27, 1900). ಕೊಕಾಘ 118.5

ದೇವರ ಸುವಾರ್ತೆ ಸೇವಕರು ಶಿಕ್ಷಣ ಸಂಸ್ಥೆಗಳ ತರಬೇತಿಗಿಂತಲೂ ಹೆಚ್ಚಾಗಿ ಆತನ ಪರಿಶುದ್ಧಾತ್ಮನ ಆಲೋಚನೆಗಳಿಂದ ಹೆಚ್ಚು ಅರ್ಹರಾಗುತ್ತಾರೆ. ನಂಬಿಕೆ ಮತ್ತು ಪ್ರಾರ್ಥನೆಯಲ್ಲಿ ಆಸಕ್ತರಾಗಿರುವವರು ದೇವರು ತಮಗೆ ಕೊಟ್ಟಿರುವ ವಾಕ್ಯಗಳನ್ನು ಪವಿತ್ರವಾದ ಉತ್ಸಾಹದಿಂದ ಸಾರಿ ತಿಳಿಸುವರು (ಗೇಟ್ ಕಾಂಟ್ರೊವರ್ಸಿ, 606, 1911). ಕೊಕಾಘ 118.6