Go to full page →

ರಾಜರು, ಆಡಳಿತಗಾರರು, ವಿಧಾನಸಭಾ, ವಿಧಾನ ಪರಿಷತ್ತಿನ ಸದಸ್ಯರು ದೈವಸಂದೇಶ ಕೇಳುವರು ಕೊಕಾಘ 120

ನಮ್ಮ ನಂಬಿಕೆಯ ನಿಮಿತ್ತ ನಾವು ಒಂಟಿಗರಾಗಿ ದುಷ್ಟರ ಮುಂದೆ ವಿಚಾರಣೆ ಎದುರಿಸಬೇಕಾಗುತ್ತದೆಂಬುದು ಈಗ ಅಸಾಧ್ಯವಾಗಿ ಕಂಡುಬರಬಹುದು. ಆದರೆ ಅಂತಹ ಸಮಾಲೋಚನಾ ಸಭೆಗಳ ಮುಂದೆ ಸಾವಿರಾರು ಜನರ ಎದುರಿನಲ್ಲಿ ದೇವರ ಹೆಸರಿನಲ್ಲಿ ನಿಲ್ಲಬೇಕಾಗುವುದು. ಪ್ರತಿಯೊಬ್ಬರು ಅವರ ಮುಂದೆ ನಮ್ಮ ನಂಬಿಕೆಗೆ ಕಾರಣವೇನೆಂದು ತಿಳಿಸಬೇಕಾಗುತ್ತದೆ. ಆಗ ಸತ್ಯಕ್ಕಾಗಿ ನಾವು ತೆಗೆದುಕೊಳ್ಳುವ ಪ್ರತಿಯೊಂದು ದೃಢ ನಿರ್ಧಾರದ ಬಗ್ಗೆ ತೀವ್ರವಾದ ಖಂಡನೆಗಳನ್ನು ಎದುರಿಸಬೇಕಾಗುವುದು. ನಾವು ಪ್ರತಿಪಾದಿಸುವ ಸಿದ್ಧಾಂತಗಳಲ್ಲಿ ನಾವು ಯಾಕೆ ದೃಢವಿಶ್ವಾಸ ಇಟ್ಟಿದ್ದೇವೆಂದು ದುಷ್ಟರ ಸಮಾಲೋಚನೆಯ ಮುಂದೆ ವಿವರಿಸಲು ನಾವು ದೇವರ ವಾಕ್ಯವನ್ನು ಶ್ರದ್ಧೆಯಿಂದ ಅಧ್ಯಯನ ಮಾಡಬೇಕು (ರಿವ್ಯೂ ಅಂಡ್ ಹೆರಾಲ್ಡ್, ಡಿಸೆಂಬರ್ 18, 1888). ಕೊಕಾಘ 120.8

ಅನೇಕರು ತಮ್ಮ ರಾಜ್ಯದ ವಿಧಾನಸಭೆ, ವಿಧಾನಪರಿಷತ್ತುಗಳಲ್ಲಿ ಸಾಕ್ಷಿ ಕೊಡಲು ನಿಲ್ಲಬೇಕಾಗಿದೆ. ಇನ್ನೂ ಕೆಲವರು ಅಧಿಕಾರಿಗಳು, ರಾಜರು, ದೇಶದ ಅಧ್ಯಕ್ಷರು, ಪ್ರಧಾನಮಂತ್ರಿಗಳು ಹಾಗೂ ವಿದ್ವಾಂಸರ ಮುಂದೆ ತಮ್ಮ ನಂಬಿಕೆಯ ಬಗೆ ಉತ್ತರಿಸಲು ಹಾಜರಾಗಬೇಕಾಗುವುದು. ಸತ್ಯದ ಬಗ್ಗೆ ಆಳವಾಗಿ ತಿಳಿದುಕೊಂಡಿರದವರು ಸತ್ಯವೇದದ ಬಗ್ಗೆ ಸ್ಪಷ್ಟವಾದ ವಿವರಣೆ ನೀಡಲು ಅಸಮರ್ಥರಾಗುವುದರಿಂದ, ಕ್ರಿಸ್ತನ ಮೇಲಣ ತಮ್ಮ ನಂಬಿಕೆಗೆ ಸಮರ್ಥವಾದ ಕಾರಣಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ಅವರು ಅಲ್ಲಿ ಗಲಿಬಿಲಿಗೊಳ್ಳುವರು ಹಾಗೂ ಸುವಾರ್ತೆಯ ವಿಷಯದಲ್ಲಿ ನಾಚಿಕೆ ಪಡುತ್ತಾರೆ. ತಾವು ಬೋಧಕರ, ಪವಿತ್ರವಾದ ಆರಾಧನೆಯಲ್ಲಿ ವೇದಿಕೆಯಿಂದ ದೇವರ ವಾಕ್ಯ ನಾವು ಸಾರಬೇಕಾಗಿಲ್ಲ. ಆದುದರಿಂದ ಸತ್ಯವೇದವನ್ನು ಅಧ್ಯಯನ ಮಾಡುವ ಅಗತ್ಯವಿಲ್ಲವೆಂದು ಯಾರೂ ತಿಳಿಯಬಾರದು. ದೇವರು ನಿಮ್ಮಿಂದ ಏನು ಬಯಸುತ್ತಾನೆಂದು ನಿಮಗೆ ತಿಳಿಯದು (ಫಂಡಮೆಂಟಲ್ಸ್ ಆಫ್.... ಎಜುಕೇಶನ್, ಪುಟ 217, 1893). ಕೊಕಾಘ 121.1